ಬಂಟ್ವಾಳ: ಬಿಜೆಪಿ ರ‍್ಯಾಲಿಯ ಪ್ರಚಾರದ ವಾಹನ ಹಾಗೂ ಬೈಕ್ ಮಧ್ಯೆ ಅಪಘಾತ:ಗುರುವಾಯನಕೆರೆಯ ಯುವಕ ಸಾವು..!:ಮೆಲ್ಕಾರ್ ಸಮೀಪದ ನರಹರಿಯಲ್ಲಿ ಘಟನೆ

ಬಂಟ್ವಾಳ: ಬಿಜೆಪಿ ರ‍್ಯಾಲಿಯ ವಾಹನ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೆಳ್ತಂಗಡಿಯ ಯುವಕ ಸಾವನ್ನಪ್ಪಿದ ಘಟನೆ ಮೆಲ್ಕಾರ್ ಸಮೀಪದ ನರಹರಿ ಪರ್ವತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜ.16ರಂದು ಸಂಭವಿಸಿದೆ.

ಜ.15ರಂದು ಆರಂಭವಾದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರ ನೇತೃತ್ವದ ಗ್ರಾಮ ವಿಕಾಸ ಯಾತ್ರೆಯ ಪ್ರಚಾರಕ್ಕೆ ತೆಲಂಗಾಣದಿಂದ ವಾಹನ ಆಗಮಿಸಿದ್ದು, ಈ ವಾಹನಕ್ಕೆ ನರಹರಿ ಪರ್ವತದ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಬೈಕ್ ಢಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯಾದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಗುರುವಾಯನಕೆರೆಯ ತರಕಾರಿ ನಾರಾಯಣ ಎಂಬವರ ಪುತ್ರ ವಿಜಿತ್ (35) ಗಂಭೀರ ಗಾಯಗೊಂಡಿದ್ದು ತಕ್ಷಣ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ವಿಜಿತ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!