ರೋಟರಿ ಸಾರ್ವಜನಿಕ ಸಂಬಂಧ ಹಾಗೂ ದೇಶಭಕ್ತಿ ಜಾಗೃತಿಗಾಗಿ ಕಾರು ಮತ್ತು ಬೈಕ್ ರ‍್ಯಾಲಿ ನಿವೃತ್ತ ಯೋಧರಿಗೆ ಗೌರವಾರ್ಪಣೆ:

ಉಜಿರೆ: ದೇಶರಕ್ಷಣೆಗಾಗಿ ನಿರಂತರ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಶ್ರಮಿಸುತ್ತಿರುವ ಯೋಧರ ಸೇವೆಯನ್ನು ಗುರುತಿಸಿ ಕೃತಜ್ಞತೆಯೊಂದಿಗೆ ಅವರ ಕರ್ತವ್ಯ ಪ್ರಜ್ಞೆಯನ್ನು ಗೌರವಿಸಿ ಪ್ರೋತ್ಸಾಹಿಸುವುದೇ ರೋಟರಿ ಸಾರ್ವಜನಿಕ ಸಂಬAಧ ಹಾಗೂ ದೇಶಭಕ್ತಿ ಜಾಗೃತಿಗಾಗಿ ಭಾನುವಾರ ಮಂಗಳೂರಿನಿಂದ ಉಜಿರೆಗೆ ಆಯೋಜಿಸಿದ ಕಾರು ಮತ್ತು ಬೈಕ್ ರ‍್ಯಾಲಿಯ ಉದ್ದೇಶವಾಗಿದೆ ಎಂದು ರ‍್ಯಾಲಿಯ ಜಿಲ್ಲಾ ಸಂಚಾಲಕ ಮಂಗಳೂರಿನ ಶ್ರೀಕಾಂತ ಶೆಟ್ಟಿ ಬಾಳ ಹೇಳಿದರು.

ಅವರು ಭಾನುವಾರ ಉಜಿರೆಯಲ್ಲಿ ರೋಟರಿ ಸೇವಾ ಭವನದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಮಾತನಾಡಿದರು.
ಮಿತ್ರತ್ವ ಮತ್ತು ಭ್ರಾತೃತ್ವ ವೃದ್ಧಿಗಾಗಿ 1905ರಲ್ಲಿ ಆರಂಭಿಸಿದ ರೋಟರಿ ಕ್ಲಬ್ ಇಂದು ಸೇವಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದು, ವಿಶ್ವದ ಇನ್ನೂರು ದೇಶಗಳಲ್ಲಿ ನಲ್ವತ್ತಾರು ಸಾವಿರ ರೋಟರಿ ಕ್ಲಬ್‌ಗಳು ನಿರಂತರ ಸಾರ್ವಜನಿಕ ಸೇವೆಯಲ್ಲಿ ನಿರತವಾಗಿವೆ. ಪ್ರತಿ ವರ್ಷವೂ ನಿವೃತ್ತ ಯೋಧರನ್ನು ಗೌರವಿಸಲಾಗುವುದು ಎಂದು ಅವರು ಹೇಳಿದರು.

ಮುಂಡಾಜೆಯ ನಿವೃತ್ತ ಯೋಧ ಶಿಸ್ತಿನ ಸಿಪಾಯಿ ಮೇಜರ್ ಜನರಲ್ ಎಂ.ವಿ. ಭಟ್ ಮಾತನಾಡಿ, ದೇಶ ರಕ್ಷಣೆ ಜೊತೆಗೆ ಪ್ರತಿಯೊಬ್ಬ ಪ್ರಜೆಯೂ ಶಿಸ್ತು, ಸೇವೆಯೊಂದಿಗೆ ನೆಲ, ಜಲ ಮತ್ತು ಪ್ರಕೃತಿ-ಪರಿಸರ ಸಂರಕ್ಷಣೆಗೆ ಕಟಿಬದ್ಧರಾಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ  ನಿವೃತ್ತ ಯೋಧರಾದ ಮೇಘಶ್ಯಾಂ, ಶಿವಪ್ರಸಾದ್ ಮತ್ತು ಉಜಿರೆಯ ಎ.ಕೆ. ಶಿವನ್ ಅವರನ್ನು ಗೌರವಿಸಲಾಯಿತು. ಜೊತೆಗೆ ಮಂಗಳೂರಿನಲ್ಲಿ 2, ಬಂಟ್ವಾಳದಲ್ಲಿ 5, ಉಜಿರೆಯಲ್ಲಿ 3, ಬಳಂಜದಲ್ಲಿ 2, ಮೂಡಬಿದ್ರೆಯಲ್ಲಿ 2, ಕಿನ್ನಿಗೋಳಿಯಲ್ಲಿ 2, ಚಿತ್ರಾಪುರದಲ್ಲಿ 3 ಮಂದಿ ಸೇರಿದಂತೆ ಒಟ್ಟು 19 ಮಂದಿ ನಿವೃತ್ತ ಯೋಧರನ್ನು ಗೌರವಿಸಲಾಯಿತು.ರ‍್ಯಾಲಿಯು ಉಜಿರೆಯಿಂದ ಬಳಂಜ, ಮೂಡಬಿದ್ರೆ, ಕಿನ್ನಿಗೋಳಿ ಮೂಲಕ ಸಾಗಿ ಚಿತ್ರಾಪುರ ಬೀಚ್‌ನಲ್ಲಿ ಸಮಾಪನಗೊಂಡಿತು. ಮೂವತ್ತು ಬೈಕ್ ಮತ್ತು ಹತ್ತು ಕಾರುಗಳಲ್ಲಿ 120 ಮಂದಿ ರೋಟರಿ ಕ್ಲಬ್ ಸದಸ್ಯರು ರ‍್ಯಾಲಿಯಲ್ಲಿ ಉಜಿರೆಗೆ ಆಗಮಿಸಿದರು.ಮೇಜರ್ ಜನರಲ್ ಎಂ.ವಿ. ಭಟ್ ಸ್ವಾಗತಿಸಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಮನೋರಮಾ ಭಟ್ ಧನ್ಯವಾದವಿತ್ತರು.

error: Content is protected !!