ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದಂತ ವಿದ್ಯಾಲಯಕ್ಕೆ ನೂತನ ಸಂಚಾರಿ ದಂತ ಚಿಕಿತ್ಸಾಲಯ ಕೊಡುಗೆ: ಸುಸಜ್ಜಿತ ವ್ಯವಸ್ಥೆಯೊಂದಿಗೆ ಗ್ರಾಮೀಣ ಜನರಿಗೆ ದಂತ ಚಿಕಿತ್ಸೆ ಸೌಲಭ್ಯ

ಧರ್ಮಸ್ಥಳ:  ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಧಾರವಾಡದ ಸತ್ತೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದಂತ ಮಹಾವಿದ್ಯಾಲಯಕ್ಕೆ ನೂತನ ಹವಾನಿಯಂತ್ರಿತ ಸಂಚಾರಿ ದಂತ ಚಿಕಿತ್ಸಾಲಯವನ್ನು ಕೊಡುಗೆಯಾಗಿ ನೀಡಲಾಯಿತು.

ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸಂಚಾರಿ ದಂತ ಚಿಕಿತ್ಸಾಲಯದೊಳಗೆ ದಂತ ಪರೀಕ್ಷೆ, ದಂತ ಶುಚಿಗೊಳಿಸುವಿಕೆ, ದಂತ ಬೇರ್ಪಡನೆ, ಎಕ್ಸ್ ರೇ, ದಂತಕ್ಕೆ ಸಂಬಂಧಪಟ್ಟ ರೋಗದ ಸ್ಕ್ರೀನಿಂಗ್ ಸೇರಿದಂತೆ ಇತರ ವ್ಯವಸ್ಥೆಗಳಿವೆ. ಇದರ ಜೊತೆಗೆ 10 ರಿಂದ 12 ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ವಾಶ್ ಬೇಸಿನ್ ಹಾಗೂ ಶೌಚಾಲಯ ವ್ಯವಸ್ಥೆ, ವಿದ್ಯುತ್ ವ್ಯತ್ಯಯಗೊಂಡಲ್ಲಿ ಜನರೇಟರ್ ವ್ಯವಸ್ಥೆನ್ನೊಳಗೊಂಡು ಸುಸಜ್ಜಿತವಾಗಿ ರೂಪುಗೊಂಡಿದೆ. ಗ್ರಾಮೀಣ ಜನರ ಮನೆಗೆ ತೆರಳಿ ಸೂಕ್ತ ಚಿಕಿತ್ಸೆ ಕೊಟ್ಟು ಆ ಭಾಗದಲ್ಲಿರುವ ದಂತ ಚಿಕಿತ್ಸಾಲಯಗಳ ಕೊರತೆಯನ್ನು ನೀಗುವಲ್ಲಿ ಇದು ಸಹಕಾರಿಯಾಗಲಿದೆ.

error: Content is protected !!