ಬೆಳ್ತಂಗಡಿ ಗುಂಪು ರಾಜಕೀಯಕ್ಕೆ ಬೇಸತ್ತ ಕೈ ಕಾರ್ಯಕರ್ತರು: ಹಿರಿಯ ಕಾಂಗ್ರೆಸ್ ಮುಖಂಡರ ಪ್ರತಿಭಟನೆಗೆ ಜನ ಬೆಂಬಲ ಇಲ್ಲ…! ಪ್ರತಿಭಟನೆಯಲ್ಲಿ ಕಾರ್ಯಕರ್ತರ ಕೊರತೆ, ಭಣಗುಟ್ಟಿದ ಜಾಥಾ..!

 

 

ಬೆಳ್ತಂಗಡಿ:  ಮುಗೇರಡ್ಕದಲ್ಲಿ 250 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವರಿ ಕಾಮಗಾರಿ ಸಮರ್ಪಕವಾಗಿಲ್ಲ ಸೇರಿದಂತೆ ಸರ್ಕಾರದ ಜನ ವಿರೋಧಿ ಯೋಜನೆಗಳ ವಿರುದ್ಧ ಜ 07 ರಂದು ಬೆಳ್ತಂಗಡಿ ಕಾಂಗ್ರೆಸ್ ವತಿಯಿಂದ  ಪ್ರತಿಭಟನೆ ನಡೆಯಿತು. ಬೆಳ್ತಂಗಡಿಯಿಂದ  ವಾಹನ ಜಾಥದ ಮೂಲಕ ಮುಗೇರಡ್ಕಕ್ಕೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಲಾಯಿತು. ಆದರೆ ಪ್ರತಿಭಟನೆಯಲ್ಲಿ ಕೆಲವೇ ಕೆಲವು ಜನ ಭಾಗವಹಿಸಿದ್ದು ಕಾಂಗ್ರೆಸ್ಸಿನ ಪರಿಸ್ಥಿತಿ ಸರಿ ಇಲ್ಲ ಎಂದು  ತಾಲೂಕಿನ ಜನತೆಗೆ ಮತ್ತೆ ಗೊತ್ತಾಗಿದೆ.

 

 

 

 

 

 

ಜ.8ರಂದು ಕಾಂಗ್ರೆಸ್ ಯುವ ನಾಯಕ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಆಯೋಜಿಸಿದ್ದ ನೇತ್ರಾವತಿ ಉಳಿಸಿ ಪ್ರತಿಭಟನೆಗೆ ಸಾಕಷ್ಟು ದಿನಗಳ ಪೂರ್ವ ತಯಾರಿ ನಡೆಸಲಾಗಿತ್ತು. ಈ ಪ್ರತಿಭಟನೆಗೆ ಜನ ಸೇರುವ ನಿರೀಕ್ಷೆ ಕೂಡ ಇತ್ತು ಅದರೆ ಧಿಡೀರ್ ಆಗಿ ಕಾಂಗ್ರೆಸ್ ಹಿರಿಯ ಮುಖಂಡರುಗಳಾದ ವಸಂತ ಬಂಗೇರ ಹಾಗೂ ಗಂಗಾಧರ ಗೌಡ ಅವರು ಜ 07ರಂದು ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಲ್ಲದೇ ರಕ್ಷಿತ್ ಶಿವರಾಂ ಪ್ರತಿಭಟನೆಗೆ ಬೆಂಬಲ ಇಲ್ಲ ಎಂಬ ಗೊಂದಲಕಾರಿ ಹೇಳಿಕೆಯನ್ನು ನೀಡಿದ್ದರು.
ಆದರೆ ಜ.06ರಂದು ರಕ್ಷಿತ್ ಶಿವಾರಂ ಕಾಂಗ್ರೆಸ್ ಹಿರಿಯ ಮುಖಂಡರ ನೇತೃತ್ವದ ಪ್ರತಿಭಟನೆಗೆ ಸಾಥ್ ಕೊಡಲು ನಿರ್ಧರಿಸಿದರು.

 

 

ಹೀಗಾಗಿ ಪ್ರತಿಭಟನೆಯಲ್ಲಿ ಸಾವಿರಾರು ಜನ ಸೇರುವ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆ ಕೂಡ ಸುಳ್ಳಾಗಿದೆ.ಅದಲ್ಲದೇ ರಕ್ಷಿತ್ ಶಿವರಾಂ ಕೂಡ ಈ ಪ್ರತಿಭಟನೆಯಲ್ಲಿ ಭಾಗವಹಿಸದೇ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಡಿ.17ರಂದು ಪ್ರಸನ್ನ ಕಾಲೇಜ್ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆತಿಥಿಯಾಗಿ ಭಾಗವಹಿಸಿದ ಕಬಡ್ಡಿ ಪಂದ್ಯಾಟದಲ್ಲೂ ಕಾಂಗ್ರೆಸ್ ಶಕ್ತಿ ಪ್ರದರ್ಶನ ವಿಫಲವಾಗಿತ್ತು.
ಪ್ರತೀ ಬಾರಿಯೂ ಕಾಂಗ್ರೆಸ್ ನ ಲೆಕ್ಕಾಚಾರ ತಲೆಕೆಳಗಾಗುತ್ತಿದೆ.

 

 

 

ಈಗಾಗಲೇ ಮುಂದಿನ ವಿಧಾನ ಸಭಾ ಚುನಾವಣೆಗೆ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯುವ ನಾಯಕ ರಕ್ಷಿತ್ ಶಿವರಾಂ ಅವರ ಹೆಸರು ಕೇಳಿಬರುತಿದ್ದು ಅದರೆ ಇಬ್ಬರು ಹಿರಿಯ ನಾಯಕರುಗಳಾದ ವಸಂತ ಬಂಗೇರ ಹಾಗೂ ಗಂಗಾಧರ ಗೌಡ ಯಾವುದೇ ಕಾರಣಕ್ಕೂ ಹೊರಗಿನಿಂದ ಬಂದವರಿಗೆ ಇಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ ಏನಿದ್ದರೂ ನಮ್ಮಿಬ್ಬರಲ್ಲಿ ಒಬ್ಬರಿಗೆ ಹೈಕಮಾಂಡ್ ಟಿಕೇಟ್ ನೀಡುತ್ತದೆ.ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ.ಅದಲ್ಲದೇ ಪ್ರತಿಯೊಂದು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಣ ರಾಜಕೀಯ ಎದ್ದು ಕಾಣುತ್ತಿದ್ದು ನಾಯಕನ ಗೊಂದಲದಲ್ಲಿ ಕಾರ್ಯಕರ್ತರಿದ್ದಾರೆ. ಈ ಎಲ್ಲ ಬೆಳವಣಿಗೆಯಿಂದ ಈಗಾಗಲೇ ಕೈ ಕಾರ್ಯಕರ್ತರು ಭ್ರಮನಿರಸನಗೊಂಡಿದ್ದು ಈಗಾಗಲೇ ಹಲವಾರು ಮುಖಂಡರುಗಳು ಕಾಂಗ್ರೆಸ್ಸಿನಿಂದ ಬಿಜೆಪಿಗೆ ವಲಸೆ ಹೋಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕರ್ತರು ಪಕ್ಷ ಬಿಡುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದೆ. ಅದಲ್ಲದೇ ಒಂದಷ್ಟು ಯುವ ಪಡೆಯನ್ನು ಹೊಂದಿರುವ ರಕ್ಷಿತ್ ಶಿವರಾಂ ಅವರಿಗೆ ಮುಂದಿನ ಟಿಕೇಟ್ ನೀಡಬೇಕು ನೀಡದಿದ್ದಲ್ಲಿ ಕಾಂಗ್ರೆಸ್ ಪತನ ಖಂಡಿತ ಎಂಬ ಮಾತುಗಳು ಕೂಡ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಅದಲ್ಲದೇ ಮಾಜಿ ಶಾಸಕ ವಸಂತ ಬಂಗೇರ ಮಾಜಿ ಸಚಿವ ಗಂಗಾಧರ ಗೌಡ ಅವರ ನೇತೃತ್ವದ ಪ್ರತಿಭಟನೆ ಮುಂದಿನ ಚುನಾವಣೆಯ ಶಕ್ತಿ ಪ್ರದರ್ಶನ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು ಅದರೆ ಇನ್ನೂರಷ್ಟೂ ಜನ ಸೇರದಿರುವುದು ಹಿರಿಯ ನಾಯಕರುಗಳ ಜನಪ್ರಿಯತೆ ಎಷ್ಟಿದೆ ಎಂಬುವುದು ಸಾಬೀತಾಗಿದೆ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ. ಇನ್ನೇನು ಕೆಲವೇ ತಿಂಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು ನಾಯಕರುಗಳ ಕಚ್ಚಾಟಗಳಿಂದ ಬೆಳ್ತಂಗಡಿ ಕಾಂಗ್ರೆಸ್ ಮಾತ್ರ ಶೋಚನೀಯ ಸ್ಥಿತಿಗೆ ತಲುಪುತ್ತಿದೆ ಎಂದು ಕೆಲವು ಹಿರಿಯ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತಿದ್ದಾರೆ. ಈ ಎಲ್ಲ ಕಾರಣಗಳಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಿಂದ ಬಿಜೆಪಿ ಅಭ್ಯರ್ಥಿ ಶಾಸಕ ಹರೀಶ್ ಪೂಂಜ ಅವರು 50 ಸಾವಿರ ಮತಗಳಿಗಿಂತಲೂ ಅಧಿಕ ಅಂತರದಲ್ಲಿ ಗೆಲ್ಲಲಿದ್ದಾರೆ ಎಂಬ ಬಗ್ಗೆಯೂ ಈಗಲೇ ಚರ್ಚೆ ಪ್ರಾರಂಭವಾಗಿದೆ.

error: Content is protected !!