ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹೃಷಿಕೇಶ್, ಕಾರ್ಯದರ್ಶಿಯಾಗಿ ಪ್ರಸಾದ್ ಶೆಟ್ಟಿ ಎಣಿಂಜೆ ಆಯ್ಕೆ

ಬೆಳ್ತಂಗಡಿ: ತಾಲೂಕು ಪತ್ರಕರ್ತರ ಸಂಘದ ಮಹಾಸಭೆಯು ಇಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದಿದ್ದು 2023ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಹೃಷಿಕೇಶ್  ಧರ್ಮಸ್ಥಳ

ಸಂಘದ ಅಧ್ಯಕ್ಷ ಗಣೇಶ್ ಬಿ ಶಿರ್ಲಾಲ್ ರವರ ಅಧ್ಯಕ್ಷತೆಯಲ್ಲಿ ನೂತನ ಅಧ್ಯಕ್ಷರಾಗಿ ಜೈಕನ್ನಡಮ್ಮ ಪತ್ರಿಕೆ ವರದಿಗಾರರಾದ ಹೃಷಿಕೇಶ್  ಧರ್ಮಸ್ಥಳ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಈ ಸಂಜೆ ಪತ್ರಿಕೆಯ ವರದಿಗಾರ ಪ್ರಸಾದ್ ಶೆಟ್ಟಿ ಏಣಿಂಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಸಾದ್ ಶೆಟ್ಟಿ ಏಣಿಂಜೆ

ಕೋಶಾಧಿಕಾರಿ ಸುದ್ಧಿಬಿಡುಗಡೆ ಪತ್ರಿಕೆಯ ವರದಿಗಾರ ತುಕರಾಮ್ ,ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ವರದಿಗಾರ ಅರವಿಂದ್ ಹೆಬ್ಬಾರ್,ಜತೆ ಕಾರ್ಯದರ್ಶಿ ಉದಯವಾಣಿ ವೇಣೂರು ವರದಿಗಾರ ಪದ್ಮನಾಭ ಕುಲಾಲ್ ಆಯ್ಕೆಗೊಂಡರು.

ಕೋಶಾಧಿಕಾರಿ ತುಕರಾಮ್

ಚುನಾವಣೆ ಅಧಿಕಾರಿಯಾಗಿ ಹಿರಿಯ ಪತ್ರಕರ್ತ ನಾಭಿರಾಜ್ ಪೂವಣಿ ನಿರ್ವಹಿಸಿದರು. ಕಾರ್ಯದರ್ಶಿ ಚೈತ್ರೆಶ್ ಇಳಂತಿಲ ವರದಿ ವಾಚಿಸಿ, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ ಲೆಕ್ಕ ಪತ್ರ ಮಂಡಿಸಿದರು.

error: Content is protected !!