ಧರ್ಮಸ್ಥಳಕ್ಕೆ ಲೋಕಾಯಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ದಂಪತಿ: ಮಂಜುನಾಥ ಸ್ವಾಮಿ ದರ್ಶನ, ಧರ್ಮಾಧಿಕಾರಿ ಭೇಟಿ

ಬೆಳ್ತಂಗಡಿ : ಕರ್ನಾಟಕ ಲೋಕಾಯಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮತ್ತು ಪತ್ನಿ ಶೋಭಾ ಪಾಟೀಲ್ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದಾರೆ.

ಜ.7 ರಂದು ಸಂಜೆ ಧರ್ಮಸ್ಥಳಕ್ಕೆ ಆಗಮಿಸಿ ಬಳಿಕ ಸನ್ನಿಧಿ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿದ್ದರು. ಭಾನುವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.


ಮಧ್ಯಮಗಳೊಂದಿಗೆ ಮಾತಾನಾಡಿದ ನ್ಯಾಯಮೂರ್ತಿ ಬಿ.ಸಿ.ಪಾಟೀಲ್ “ನಾನು ಕರ್ತವ್ಯದ ನಿಮಿತ್ತ ಬಂದಿರುತ್ತೇನೆ ಹಾಗೆಯೇ ದೇವರ ದರ್ಶನ ಪಡೆದುಕೊಂಡು ಧರ್ಮಾಧಿಕಾರಿ ಅವರನ್ನು ಭೇಟಿ ಮಾಡಿದ್ದೇನೆ‌. ಒಳ್ಳೆಯ ವಾತಾವರಣವಿದೆ, ತುಂಬಾ ಸಂತೋಷವಾಯಿತು. ಲೋಕಾಯಕ್ತ ಸಂಸ್ಥೆಯ ಆಕ್ಟ್ ಅಡಿಯಲ್ಲಿ ನಮ್ಮ ಅಧಿಕಾರಿಗಳು ಟ್ರ್ಯಾಪ್, ರೈಡ್ ಸೇರಿದಂತೆ ಜನರ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಹೊಸ ವರ್ಷಕ್ಕೆ ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ” ಎಂದರು.
ಶ್ರೀ ಧರ್ಮಸ್ಥಳದ ಮ್ಯಾನೇಜರ್ ಪಾರ್ಶ್ವನಾಥ್, ಉಡುಪಿ ಲೋಕಾಯಕ್ತ ಎಸ್ಪಿ ಲಕ್ಷ್ಮೀ ಗಣೇಶ್ , ಎಸ್ಪಿ ಸೈಮಾನ್, ಡಿವೈಎಸ್ಪಿ ಕಲಾವತಿ , ಡಿವೈಎಸ್ಪಿ ಚೆಲುವರಾಜ್ ಮತ್ತು ತಂಡ ಉಪಸ್ಥಿತರಿದ್ದರು.

error: Content is protected !!