ಮನೆಯೊಳಗಿನ ಟೇಬಲ್ ಫ್ಯಾನ್ ಪಕ್ಕದಲ್ಲಿ ಕಾಳಿಂಗ ಸರ್ಪ ಪತ್ತೆ.!: ಹತ್ಯಡ್ಕದ ಉಮೇಶ್ ಮನೆಯಲ್ಲಿ ಕಾಳಿಂಗ ಪ್ರತ್ಯಕ್ಷ..!: 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

ಬೆಳ್ತಂಗಡಿ: ನಾವೂರ ಗ್ರಾಮದ ಹತ್ಯಡ್ಕದ ಮನೆಯೊಂದಲ್ಲಿ ಕಾಳಿಂಗ ಸರ್ಪ ಪತ್ತೆಯಾಗಿದೆ.

ಉಮೇಶ್ ಎಂಬವರ ಮನೆಯ ರೂಂ ನ ಫ್ಯಾನ್ ಪಕ್ಕದಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಮಲಗಿತ್ತು. ಇದನ್ನು ನೋಡಿದ ಮನೆಯವರು ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣ ಮನೆಗೆ ಬಂದ ಸ್ನೇಕ್ ಅಶೋಕ್ ಲಾಯಿಲ ಅವರು ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

error: Content is protected !!