ಬೆಳ್ತಂಗಡಿ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಡಾಯಿಬೆಟ್ಟು ಇಲ್ಲಿ ಲಯನ್ಸ್ ಅಮೃತ ಬಿಂದು ಸೇವಾ ಯೋಜನೆ ಯಡಿಯಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮುರಳಿ ಬಲಿಪ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ರಶ್ಮಿ ಹೆಚ್. ಎಸ್., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪದ್ಮನಾಭ ಗೌಡ, ಶಾಲಾ ಶಿಕ್ಷಕ ಕಿಶೋರ್ ಕುಮಾರ್, ಲಯನ್ಸ್ ಕ್ಲಬ್ ಬೆಳ್ತಂಗಡಿ ಜತೆ ಕಾರ್ಯದರ್ಶಿ ನಾಣ್ಯಪ್ಪ ನಾಯ್ಕ್, ಕಾರ್ಯಕ್ರಮ ಸಂಯೋಜಕ ವಸಂತ್ ಶೆಟ್ಟಿ ಶ್ರದ್ದಾ, ಲಯನ್ಸ್ ಸದಸ್ಯರುಗಳಾದ ರಾಮಕೃಷ್ಣ ಗೌಡ, ಭುಜಬಲಿ ಧರ್ಮಸ್ಥಳ, ಗೋಪಾಲಕೃಷ್ಣ ಕಾಂಚೋಡು, ಪ್ರವೀಣ್ ಹೆಚ್. ಎಸ್., ಸುಂದರಿ ನಾಣ್ಯಪ್ಪ ನಾಯ್ಕ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಲಯನ್ ಗೋಪಾಲಕೃಷ್ಣ ಕಾಂಚೋಡು ಇವರ ಪ್ರಾಯೋಜಕತ್ವದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಡ್ರ್ಯಾಗನ್ ಹಣ್ಣು ವಿತರಿಸಲಾಯಿತು.ಮಂದಾರ ಬಲಿಪ ಸಹಕರಿಸಿದರು