ಆನೆಯ ಕಾಲ್ತುಳಿತಕ್ಕೆ ಸಿಲುಕಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ ಶಿರಾಡಿ ಗ್ರಾಮದ ತಿಮ್ಮಪ್ಪ: ಅರಣ್ಯ ಇಲಾಖೆಯಿಂದ 15 ಲಕ್ಷ ರೂ. ಮಂಜೂರು: ಮೃತ ತಿಮ್ಮಪ್ಪ ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರ

ಕಡಬ: ಕಾಡಾನೆ ದಾಳಿಯಲ್ಲಿ ಮೃತಪಟ್ಟ ಕಡಬ ತಾಲೂಕಿನ ಶಿರಾಡಿ ಗ್ರಾಮದ ಜನತಾ ಕಾಲೋನಿ ನಿವಾಸಿ ತಿಮ್ಮಪ್ಪ ಎಂಬವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಮಂಜೂರಾದ 15 ಲಕ್ಷ ರೂಪಾಯಿ ಮೊತ್ತದಲ್ಲಿ 5 ಲಕ್ಷ ರೂ. ಪರಿಹಾರ ಮೊತ್ತದ ಚೆಕ್ ಅನ್ನು ಕುಟುಂಬಸ್ಥರಿಗೆ ಡಿ.4ರಂದು ಹಸ್ತಾಂತರಿಸಲಾಯಿತು.

ಡಿ.31ರಂದು ತಿಮ್ಮಪ್ಪ ಮತ್ತು ಅವರ ಮಗ ಶರಣ್ ಕಾರ್ಯ ನಿಮಿತ್ತ ತೆರಳುತ್ತಿದ್ದ ವೇಳೆ ತಿಮ್ಮಪ್ಪ ಅವರ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಈ ವೇಳೆ ತಿಮ್ಮಪ್ಪ ಅವರ ರಕ್ಷಣೆಗೆ ಧಾವಿಸಿದ ಮಗನ ಮೇಲೂ ಕಾಡಾನೆ ದಾಳಿ ನಡೆಸಿತ್ತು. ಘಟನೆಯಲ್ಲಿ ಕಾಡಾನೆ ತಿವಿತದಿಂದ ಗಂಭೀರ ಗಾಯಗೊಂಡಿದ್ದ ತಿಮ್ಮಪ್ಪ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮಗ ಶರಣ್ ಅವರು ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಕರ್ನಾಟಕ ಅರಣ್ಯ ಇಲಾಖೆಯಿಂದ ಸುಮಾರು 15 ಲಕ್ಷ ರೂಪಾಯಿ ಪರಿಹಾರ ಧನವು ಮಂಜೂರು ಆಗಿದ್ದು, ಈ ಪೈಕಿ 5 ಲಕ್ಷ ರೂಪಾಯಿ ಮೊತ್ತದ ಚೆಕ್ ಅನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಿಮ್ಮಪ್ಪ ಅವರ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

ವೇಳೆ ಮಾತನಾಡಿದ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್ ಅವರು, ಈಗಾಗಲೇ ಭದ್ರಾ ಟೈಗರ್ ಫೌಂಡೇಷನ್ ಚಿಕ್ಕಮಗಳೂರು ಇವರ ಸಹಕಾರದೊಂದಿಗೆ ಸುಮಾರು 5ಲಕ್ಷ ಮೊತ್ತದ ಚೆಕ್ ಅನ್ನು ಸಂತ್ರಸ್ತರಿಗೆ ಹಸ್ತಾಂತರ ಮಾಡಲಾಗಿದ್ದು, ಉಳಿದ 10ಲಕ್ಷ ಮೊತ್ತವನ್ನು ಕೆಲವು ದಾಖಲೆ ಪತ್ರಗಳು ಸರಿಯಾದ ಕೂಡಲೇ ಮೃತರ ಕುಟುಂಬಕ್ಕೆ ನೀಡಲಾಗುವುದು ಎಂದಿದ್ದಾರೆ.

ಈ ವೇಳೆ ಅರಣ್ಯ ಇಲಾಖೆಯ ಡಿಸಿಎಫ್ ಡಾ.ದಿನೇಶ್‌ಕುಮಾರ್, ಎಸಿಎಫ್ ವಿ.ಪಿ.ಕಾರ್ಯಪ್ಪ, ಆರ್‌ಎಫ್ಒ ಜಯಪ್ರಕಾಶ್ ಕೆ.ಕೆ., ಡಿಆರ್‌ಎಫ್ಒ ಧೀರಜ್, ಫಾರೆಸ್ಟರ್ ಸುನಿಲ್ ನಾಯ್ಕ್ ರವರು  ಉಪಸ್ಥಿತರಿದ್ದರು.

error: Content is protected !!