ವಸಂತ ಬಂಗೇರ ಭರ್ಜರಿ ಟಕ್ಕರ್…!, ಹಕ್ಕೊತ್ತಾಯ ಸಭೆ,ಕಾಲ್ನಡಿಗೆ ಜಾಥಾ ದಿಢೀರ್ ಕ್ಯಾನ್ಸಲ್: ಬೆಳ್ತಂಗಡಿ ಕಾಂಗ್ರೆಸ್ ನಲ್ಲಿ ನಾಟಕೀಯ ಬೆಳವಣಿಗೆ, ಕೈ ಹಿರಿಯ ನಾಯಕನ‌ ಹೇಳಿಕೆಗೆ ತಲೆ‌ಬಾಗಿದ ಯುವ ನಾಯಕ: ಮುಜುಗರ ತಪ್ಪಿಸುವ ಯತ್ನ, ಕಾಂಗ್ರೆಸ್ ಹೋರಾಟಕ್ಕೆ ರಕ್ಷಿತ್ ಶಿವರಾಂ ಬೆಂಬಲ: ಮುಗೇರಡ್ಕ ವಾಹನ ಜಾಥಾ, ಪ್ರತಿಭಟನಾ ಸಭೆಗೆ‌ ರಕ್ಷಿತ್ ಹಾಜರ್…!!!:

 

 

 

ಬೆಳ್ತಂಗಡಿ: ಬೆಳ್ತಂಗಡಿ ಕಾಂಗ್ರೆಸ್ಸಿನಲ್ಲಿ ದಿನಕ್ಕೊಂದು ನಾಟಕೀಯ ಬೆಳವಣಿಗೆಗಳು ನಡೆಯುತ್ತಿದೆ.‌ಕಳೆದ ಕೆಲವು ಸಮಯಗಳಿಂದ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮಗಳು ಸೇರಿದಂತೆ ಸರ್ಕಾರದ ವಿರುದ್ದ ಬೃಹತ್ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳುವ ಉದ್ಧೇಶದಿಂದ  ತಾಲೂಕಿನ ಗ್ರಾಮ ಗ್ರಾಮಗಳಲ್ಲಿ  ಈ ಬಗ್ಗೆ ಸಭೆಗಳನ್ನು ನಡೆಸಿ ಜ 08 ರಿಂದ 10 ರವರೆಗೆ  ಮುಂಡಾಜೆಯಿಂದ ಬೃಹತ್ ಕಾಲ್ನಡಿಗೆ ಜಾಥಾ, ಹಕ್ಕೊತ್ತಾಯ ಸಭೆಯೊಂದಿಗೆ ಉಪ್ಪಿನಂಗಡಿ ತನಕ ನಡಿಗೆ  ಆಯೋಜನೆ ಮಾಡಲಾಗಿತ್ತು .ಇದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆದಿತ್ತು.. ಅದರೆ ಮಾಜಿ ಶಾಸಕ ವಸಂತ ಬಂಗೇರ ಹಾಗೂ ಮಾಜಿ ಸಚಿವ ಗಂಗಾಧರ ಗೌಡ ಹಾಗೂ ಕಾಂಗ್ರೆಸ್ ಪಕ್ಷದ ನಗರ ಮತ್ತು ಗ್ರಾಮೀಣ ಅಧ್ಯಕ್ಷರು ಸೇರಿ  ಕಾಂಗ್ರೆಸ್ ಪಕ್ಷದ ವತಿಯಿಂದ ಜ 07 ರಂದು ಮುಗೇರಡ್ಕ ಚಲೋ ಪ್ರತಿಭಟನೆ ಹಮ್ಮಿಕೊಂಡಿರುವ  ಬಗ್ಗೆ  ಪತ್ರಿಕಾಗೋಷ್ಠಿ ಮಾಡಿದ್ದರು.‌ಈ ವೇಳೆ  ಮಾಧ್ಯಮದವರು ಜ 08 ರ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷದ  ಬೆಂಬಲದ‌ ಬಗ್ಗೆ ಪ್ರಶ್ನಿಸಿದಾಗ ಆ ಪ್ರತಿಭಟನೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಆದ್ದರಿಂದ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಗೆ ಬೆಂಬಲ ಇಲ್ಲ ಎಂಬ ಉತ್ತರವನ್ನು ಮಾಜಿ ಶಾಸಕ ವಸಂತ ಬಂಗೇರ ಅವರು ನೀಡಿದ್ದು. ಈ ಎಲ್ಲಾ ಬೆಳವಣಿಗೆಯಲ್ಲಿ ರಕ್ಷಿತ್ ಶಿವರಾಂ ಅವರ ನೇತೃತ್ವದ ಪ್ರತಿಭಟನೆ ಮುಂದೂಡಲಾಗಿದೆ ಎಂಬ ಹೇಳಿಕೆ  ಇದೀಗ ತಿಳಿದು ಬಂದಿದ್ದು  ಜ 07 ರಂದು ಕಾಂಗ್ರೆಸ್ ಪಕ್ಷ  ಒಂದೇ ವಿಚಾರಗಳ ಬಗ್ಗೆ  ಪ್ರತಿಭಟನೆ ಆಯೋಜನೆ ಮಾಡುವುದರಿಂದ  ಬೆಂಬಲ ನೀಡಲಾಗುವುದು ಎಂಬ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಒಟ್ಟಾರೆಯಾಗಿ ಬೆಳ್ತಂಗಡಿ ಕಾಂಗ್ರೆಸ್ಸಿನಲ್ಲಿ ಯಾವುದೂ ಸರಿ ಇಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಬಂಗೇರರ ಬೆಂಬಲ‌ ಇಲ್ಲ ಎಂಬ‌  ಹೇಳಿಕೆ ಕಳೆದ ಅದೆಷ್ಟೋ ದಿನಗಳಿಂದ ನಡೆಯುತ್ತಿರುವ ಪೂರ್ವತಯಾರಿಗೆ ತಣ್ಣೀರೆರಚಿದಂತಾಗಿದೆ. ಅದಲ್ಲದೇ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹೋಗಬಾರದು ಎಂಬ ಸಂದೇಶ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತಿದೆ.ಈ ಎಲ್ಲ ಬೆಳವಣಿಗೆಗಳಿಗೆ ತೇಪೆ ಹಚ್ಚುವ ಉದ್ಧೇಶದಿಂದ ಜ 07 ರ ಪ್ರತಿಭಟನೆಗೆ ಸಂಪೂರ್ಣ ಬೆಂಬಲವನ್ನು ರಕ್ಷಿತ್ ಶಿವರಾಂ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿರುವುದರಿಂದ ಕಾಂಗ್ರೆಸ್ಸಿನ ಬೆಳವಣಿಗೆಗಳು ಕಾರ್ಯಕರ್ತರನ್ನು ಗೊಂದಲಕ್ಕೆ ಸಿಲುಕುವಂತೆ ಮಾಡಿದೆ. ಒಂದೆಡೆಯಿಂದ ಬಂಗೇರ ಹಾಗೂ ಗಂಗಾಧರ ಗೌಡ ನಡೆಗೆ ಕೈ ಕಾರ್ಯಕರ್ತರು ಅಸಮಾಧಾನ ಹೊರಹಾಕುತಿದ್ದು ಮುಂದಿನ ದಿನಗಳಲ್ಲಿ ಯುವ ನಾಯಕನಿಗೆ ಟಿಕೆಟ್ ನೀಡದಿದ್ದಲ್ಲಿ ರಾಜೀನಾಮೆ ನೀಡುವ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.ಈ ಎಲ್ಲ ಬೆಳವಣಿಗೆಗಳು ಯಾವ ರೀತಿ ಮುಂದುವರಿಯಲಿದೆ ಎಂದು ಕಾದು ನೋಡಬೇಕಾಗಿದೆ.

error: Content is protected !!