ಮುಗೇರಡ್ಕ ಮೀನು ಹಿಡಿಯಲು ಹೋಗಿ ನೀರಲ್ಲಿ ಮುಳುಗಿದ ವ್ಯಕ್ತಿಯ ಶವ ಪತ್ತೆ: ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ, ಮನೆಯವರಿಗೆ ಸಾಂತ್ವನ

ಬೆಳ್ತಂಗಡಿ: ಮೊಗ್ರು ಮುಗೇರಡ್ಕ ನೇತ್ರಾವತಿ ನದಿಯ ಪಂಪ್ ಹೌಸ್ ಬಳಿ ಬಲೆ ಬಿಟ್ಟು ಮೀನು ಹಿಡಿಯಲು ಹೋದ ಯುವಕ ನೀರು ಪಾಲಾದ ಘಟನೆ ಡಿ.26ರಂದು ಸಂಜೆ ನಡೆದಿತ್ತು.‌


ಮೊಗ್ರು ಗ್ರಾಮದ ದಂಡುಗ ನಿವಾಸಿ ಗುಮ್ಮಣ್ಣ ಗೌಡರ ವಿವಾಹಿತ ಪುತ್ರ ಜನಾರ್ದನ ಗೌಡ (42) ರಾತ್ರಿ ಮೀನು ಹಿಡಿಯಲೆಂದು ಹೋದಾಗ ನದಿಯಲ್ಲಿ ಮುಳುಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ರಾತ್ರಿಯಿಂದ ಮೃತದೇಹಕ್ಕಾಗಿ‌ ಕಾರ್ಯಚರಣೆ ನಡೆಯುತ್ತಿತ್ತು. ಆದರೆ ಇಂದು‌ ಬೆಳಗ್ಗೆ ಸುಮಾರು 10 :45 ರ ವೇಳೆಗೆ ಮೃತದೇಹ ಪತ್ತೆಯಾಗಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು ರಾತ್ರಿ ಅಗ್ನಿಶಾಮಕದಳದವರು ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ಉಪ್ಪಿನಂಗಡಿ ಪೊಲೀಸರ ಮಾರ್ಗದರ್ಶನದಲ್ಲಿ ಮುಳುಗುಪಟುಗಳಿಂದ ಶೋಧ ಕಾರ್ಯ ನಡೆದಿದ್ದು. ಸದ್ಯ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

error: Content is protected !!