ಪ್ರಧಾನಿ ನರೇಂದ್ರ ಮೋದಿ ಸಹೋದರನ ಕಾರು ಅಪಘಾತ:ಕಾರಿನಲ್ಲಿದ್ದ ಕುಟುಂಬಸ್ಥರಿಗೆ ಗಾಯ: ಬಂಡೀಪುರ  ಸಂಚಾರಿಸುವ ವೇಳೆ ಘಟನೆ:

 

 

 

ಮೈಸೂರು:  ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್‌ ಮೋದಿ ಪ್ರಯಾಣಿಸುತ್ತಿದ್ದ ಬೆಂಜ್​ ಕಾರು ಅಪಘಾತಕ್ಕೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಬಂಡೀಪುರದ ಕಡೆಗೆ ತೆರಳುತ್ತಿದ್ದಾಗ ಕಡಕೋಳದ ಬಳಿ ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿತು ಎಂದು ತಿಳಿದುಬಂದಿದೆ.

ಕಾರಿನಲ್ಲಿ ಮೋದಿಯವರ ಸಹೋದರ, ಅವರ ಮಗ, ಸೊಸೆ ಹಾಗೂ ಮೊಮ್ಮಗ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೋದಿ ಅವರ ಸಹೋದರನ ಗಲ್ಲದ ಭಾಗಕ್ಕೆ ಪೆಟ್ಟು ಬಿದ್ದಿದೆ. ಸೊಸೆಯ ತಲೆಗೆ ಗಾಯವಾಗಿದೆ. ಮೊಮ್ಮಗನ ಕಾಲಿಗೆ ಪೆಟ್ಟಾಗಿದೆ. ಮಗ ಮತ್ತು ಚಾಲಕ ಸತ್ಯನಾರಾಯಣ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

error: Content is protected !!