ಮೀನು ಹಿಡಿಯಲು ಹೋದ ವ್ಯಕ್ತಿ ನೀರು ಪಾಲು..!: ಮೊಗ್ರು ಮುಗೇರಡ್ಕ ನೇತ್ರಾವತಿ ನದಿಯ ಪಂಪ್ ಹೌಸ್ ಬಳಿ ಘಟನೆ..! ಎಣ್ಣೆ ಏಟಿನಲ್ಲಿ ಸತ್ಯ ಬಿಚ್ಚಿಟ್ಟ ಸ್ನೇಹಿತ..!?

ಬೆಳ್ತಂಗಡಿ: ಮೊಗ್ರು ಮುಗೇರಡ್ಕ ನೇತ್ರಾವತಿ ನದಿಯ ಪಂಪ್ ಹೌಸ್ ಬಳಿ ಬಲೆ ಬಿಟ್ಟು ಮೀನು ಹಿಡಿಯಲು ಹೋದ ಯುವಕ ನೀರು ಪಾಲಾದ ಘಟನೆ ಡಿ.26ರಂದು ಸಂಜೆ ನಡೆದಿದೆ.

ಮೊಗ್ರು ಗ್ರಾಮದ ದಂಡುಗ ನಿವಾಸಿ ಗುಮ್ಮಣ್ಣ ಗೌಡರ ವಿವಾಹಿತ ಪುತ್ರ ಜನಾರ್ದನ ಗೌಡ (42) ರಾತ್ರಿ ಮೀನು ಹಿಡಿಯಲೆಂದು ಹೋದಾಗ ನದಿಯಲ್ಲಿ ಮುಳುಗಿದ್ದಾರೆ. ಸಂಜೆ ಈ ಘಟನೆ ನಡೆದಿದ್ದು , ಆದರೆ ರಾತ್ರಿ ವೇಳೆ ಈ ವಿಚಾರ ತಿಳಿದು ಬಂದಿದೆ. ಮೃತ ಜನಾರ್ಧನಗೌಡರ ಜೊತೆಗಿದ್ದ ಸ್ನೇಹಿತ ಈ ವಿಷಯವನ್ನು ಯಾರಿಗೂ ಹೇಳದೆ ಅಲ್ಲಿಂದ ಪರಾರಿಯಾಗಿದ್ದನು. ಬಳಿಕ ರಾತ್ರಿ ಉಪ್ಪಿನಂಗಡಿ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಮಾಹಿತಿ ಪಡೆದಿದ್ದಾರೆ.

ಅದಕ್ಕೂ ಮುನ್ನ ಮದ್ಯಪಾನ‌ ಮಾಡಿ ಬಾರ್ ನಲ್ಲಿಯೇ ಈ ವಿಚಾರವನ್ನು ಬಾಯಿ ಬಾಯಿಬಿಟ್ಟಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ಮೃತನ ಸ್ನೇಹಿತನಿಗೆ ಸ್ಥಳೀಯರು ಗೂಸಾ ನೀಡಿದ್ದಾರೆ. ಅಷ್ಟೇ ಅಲ್ಲದೆ ಮುಳುಗಿದ ನಂತರ ನೇರವಾಗಿ ಮೃತರ ಪತ್ನಿಯಲ್ಲಿ ನಿನ್ನ ಗಂಡ ನೀರಿನಲ್ಲಿ ಮುಳುಗಿದ್ದಾನೆ ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ.

ರಾತ್ರಿಯಿಂದ ಅಗ್ನಿಶಾಮಕ ತಂಡ ಶೋಧ ನಡೆಸುತ್ತಿದ್ದರೂ ಮೃತದೇಹ ಸಿಕ್ಕಿಲ್ಲ. ಹೀಗಾಗಿ
ಉಪ್ಪಿನಂಗಡಿ ಪೊಲೀಸರ ಮಾರ್ಗದರ್ಶನದಲ್ಲಿ ಮುಳುಗುಪಟುಗಳಿಂದ ಶೋಧ ಕಾರ್ಯ ಮುಂದುವರಿದಿದೆ. ಸದ್ಯ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

error: Content is protected !!