ಕಳೆಂಜ ನಂದಗೋಕುಲಕ್ಕೆ ವರ್ಷಂಪ್ರತೀ 10 ಸಾವಿರದಂತೆ 2.50ಲಕ್ಷ ರೂ ಘೋಷಿಸಿದ ಶಶಿಧರ ಶೆಟ್ಟಿ‌ ಬರೋಡಾ: ವಿಶೇಷ ರೀತಿಯಲ್ಲಿ ಗೋವುಗಳ ರಕ್ಷಣೆಗೆ ನೆರವಾದ ಉದ್ಯಮಿ

 

ಕಳೆಂಜ: ಪ್ರಧಾನಿ ನರೇಂದ್ರ ಮೋದಿಯವರ ಮಾತು ಇಡೀ ದೇಶದ ಜನರಿಗೆ ಎಷ್ಟು ಪರಿಣಾಮಕಾರಿಯಾಗಿರುತ್ತೊ ಅದೇ ರೀತಿ ಶಾಸಕ ಹರೀಶ್ ಪೂಂಜ ಅವರ ಮಾತು ಕೂಡ ತಾಲೂಕಿನ ಜನರಿಗೆ ಪರಿಣಾಮಕಾರಿಯಾಗಿರುತ್ತದೆ ಎಂದು ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಹೇಳಿದರು.‌

ಅವರು ಕಳೆಂಜ ನಂದ ಗೋಕುಲ ಗೋಶಾಲೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸನ್ಮಾನ್ಯ ನರೇಂದ್ರ ಮೋದಿಯವರು ಒಂದು ಮಾತು ಹೇಳಿದ್ದಾದಲ್ಲಿ ಇಡೀ ದೇಶದ ಜನರು ಅವರ ಮಾತನ್ನು ಕೇಳುತ್ತಾರೆ. ಉದಾಹರಣೆಗೆ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ. ಒಬ್ಬ ವಿದ್ಯಾರ್ಥಿಯೂ ತಾನು ತಿಂದ ಚಾಕಲೇಟಿನ ಪೊಟ್ಟಣವನ್ನು ಕಿಸೆಯಲ್ಲಿರಿಸಿ ಮತ್ತೆ ಸಮರ್ಪಕವಾದ ಜಾಗದಲ್ಲಿ ಅದನ್ನು ಹಾಕುತ್ತಾರೆ. ಅದೇ ರೀತಿ ಬೆಳ್ತಂಗಡಿ ತಾಲೂಕಿನಲ್ಲಿ ಶಾಸಕ ಹರೀಶ್ ಪೂಂಜ ಅವರ ಮಾತನ್ನೂ ಎಲ್ಲ ಜನತೆ ಕೇಳುತ್ತಾರೆ.ಸುಮಾರು 2.5 ಲಕ್ಷ ಜನ ತಲಾ 100 ರೂ ನಂತೆ‌ ನೀಡಿದರೂ ಈ ಗೋಶಾಲೆ ಯಾವುದೇ ಸಮಸ್ಯೆ ಇಲ್ಲದೆ ಮುನ್ನಡೆಯಲಿದೆ. ನನ್ನ ವಯಕ್ತಿಕ ನೆಲೆಯಲ್ಲಿ ಪ್ರತೀ ವರುಷ 10 ಸಾವಿರದಂತೆ ಬದುಕುಳಿದರೆ 25 ವರ್ಷ 2.50 ಲಕ್ಷ ದೇಣಿಗೆಯನ್ನು ಗೋಶಾಲೆಗೆ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ವಿನಯಚಂದ್ರ ಉಜಿರೆ, ಅಮೇರಿಕಾ ವೆಂಚರ್‌ಸಾಫ್ಟ್ ಗ್ಲೋಬಲ್ ಸಂಸ್ಥೆಗಳ ಸಂಸ್ಥಾಪಕ ವೆಂಕಟ್ರಮಣ ಭಟ್ ಅಗರ್ತ, ಕಳೆಂಜ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ, ಭಾ.ಜ.ಪ ಅಧ್ಯಕ್ಷ ಕೆ. ಜಯಂತ್ ಕೋಟ್ಯಾನ್, ಉದ್ಯಮಿ ನಾರಾಯಣ ಗೌಡ, ಉದ್ಯಮಿ ಎಚ್.ಆರ್.ಪಟೇಲ್, ದೀಪೋತ್ಸವ ಪ್ರಧಾನ ಸಂಚಾಲಕ ಮೋಹನ್ ಕುಮಾರ್, ಸ್ವಾಮಿ ಶ್ರೀ.ವಿ.ಸೇ. ಟ್ರಸ್ಟ್ ಟ್ರಸ್ಟಿ ರಮೇಶ್ ಪ್ರಭು, ರಾಜೇಶ್ ಪೈ, ಡೀಕಯ್ಯ ಗೌಡ ಬಂಡೇರಿ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಅಗರ್ತ ಪ್ರಾಸ್ತಾವಿಸಿದರು.
ನಂದಗೋಕುಲ ದೀಪೋತ್ಸವ ಸಂಚಲನಾ ಸಮಿತಿ ಅಧ್ಯಕ್ಷ ಪೂರಣ್ ವರ್ಮ ಸ್ವಾಗತಿಸಿದರು. ಟ್ರಸ್ಟ್‌ನ ಅಧ್ಯಕ್ಷ ಉಜಿರೆಯ ಡಾ. ಎಂ.ಎಂ. ದಯಾಕರ್ ವಂದಿಸಿದರು. ಹರೀಶ್ ನೆರಿಯ, ಟ್ರಸ್ಟಿ ನವೀನ್ ನೆರಿಯ ನಿರೂಪಿಸಿದರು.

error: Content is protected !!