‘ಮನುಷ್ಯನು ದೇವರುಗಳ ರಕ್ಷಣೆ ಮಾಡಬೇಕಾಗಿಲ್ಲ: ಸತ್ಯ, ಅಹಿಂಸೆ, ಸಹಬಾಳ್ವೆ ಇದ್ದರೆ ಧರ್ಮ ತನ್ನಿಂತಾನಾಗಿ ಉಳಿಯುತ್ತದೆ’: ವಂ.ಫಾ.ವಿನೋದ್ ಮಸ್ಕರೇನಸ್ ಕ್ರಿಸ್ಮಸ್ ಸಂದೇಶ

ಉಜಿರೆ: ಕಪುಚಿನ್ ಕೃಷಿಕ ಸೇವಾ ಕೇಂದ್ರ (ರಿ), ಸಂತ ಅಂತೋನಿ ಚರ್ಚ್ ಉಜಿರೆ, ಹಾಗೂ ಬೆಳ್ತಂಗಡಿ ವಲಯದ ರ‍್ಚ್ಗಳ ಜಂಟಿ ಆಶ್ರಯದಲ್ಲಿ ಕ್ರಿಸ್ಮಸ್ ಸಂದೇಶ ಕಾರ್ಯಕ್ರಮವು ಉಜಿರೆಯಲ್ಲಿ ನಡೆಯಿತು. ಸಂಜೆ 5.30 ಕ್ಕೆ ಉಜಿರೆಯ ಸಂತ ಅಂತೋನಿ ಚರ್ಚ್ ಬಳಿಯಿಂದ ಮೆರವಣಿಗೆಯ ಮೂಲಕ ಉಜಿರೆ ವೃತ್ತವನ್ನು ತಲುಪಿ 6.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ನಿರ್ದೇಶಕರಾದ ವಂ.ಫಾ.ವಿನೋದ್ ಮಸ್ಕರೇನಸ್ರವರು ಕ್ರಿಸ್ಮಸ್ ಹಬ್ಬದ ಸಂದೇಶವನ್ನು ನೀಡುತ್ತಾ, ಪ್ರಭು ಯೇಸು ಇತರರಿಗೆ ನುಡಿದ ಮಾತುಗಳನನ್ನು ಪುನರ್ ಉಚ್ಚರಿಸುತ್ತಾ (ಇತರರು ನಿನಗೆ ಏನು ಮಾಡಬೇಕು ಎಂದು ಭಾವಿಸುತ್ತಿರೋ ಅದನ್ನೇ ನೀನು ಇತರರಿಗೆ ಮಾಡು) ನಾವು ಕನಿಷ್ಟರಾದ, ದೀನದಲಿತರ ಸೇವೆ ಮಾಡಿದರೆ ಅದು ದೇವರ ಸೇವೆ ಮಾಡಿದಂತೆ ಎಂದು ಹೇಳುತ್ತಾ ಪ್ರಭು ಯೇಸು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು. ಇಂದು ದೇವರುಗಳ ರಕ್ಷಣೆ ಮನುಷ್ಯನು ಮಾಡಬೇಕಾಗಿಲ್ಲ ಜಾತಿ, ಮತ, ಭೇದಕ್ಕೆ ಹೋರಾಡುವ ಬದಲು ಮಹಿಳೆಯರ, ಮಕ್ಕಳ ಹಕ್ಕುಗಳಿಗೆ ಹೋರಾಡಿ, ಇವತ್ತು ಬೇಕಾಗಿದ್ದು ಧರ್ಮ,ಸತ್ಯ, ಅಹಿಂಸೆ, ಸಹಬಾಳ್ವೆ ಇದ್ದರೆ ಅದು ತನ್ನಿಂತಾನಾಗಿ ಉಳಿಯುತ್ತದೆ. ಇಂದಿನ ಈ ಸಂದಿಗ್ಧ ಪರಿಸ್ಧಿತಿಯಲ್ಲಿ ನಾವು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ, ನಾವು ಪುನಃ ತಾಯಿಯ ಗರ್ಭದಲ್ಲಿ ಹೋಗಿ ಹುಟ್ಟಿ ಬಂದು ಮನುಷ್ಯರಾಗಬೇಕಾಗಿದೆ ಎಂದು ಹೇಳಿದರು. ಇಂದು ನಮಗೆ ಭರವಸೆ ಇದೆ ಒಳಿತು ಮಾಡುವವರು ಸಾವಿರಾರು ಮಂದಿಯಲ್ಲ ಕೆಲವರೇ ಹಾಗೇ ಇರುವಾಗ ನಾವು ಭರವಸೆಯನ್ನು ಇಟ್ಟುಕೊಳ್ಳಬೇಕು. ಒಳಿತು ಮಾಡಲು ನಾವು ಮಾನವೀಯ ಮೌಲ್ಯಗಳನ್ನು ಮೈಗೂಡಿಸಲು ಕಲಿಯಬೇಕು ಆಗ ಮಾತ್ರ ಕ್ರಿಸ್ಮಸ್ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಪುಚಿನ್ ಕೃಷಿಕ ಸೇವಾ ಕೇಂದ್ರದ ನಿರ್ದೇಶಕರಾದ ವಂ.ಫಾ.ವಿನೋದ್ ಮಸ್ಕರೇನಸ್, ಸಂತ ಅಂತೋನಿ ಚರ್ಚ್ ಉಜಿರೆ ಇಲ್ಲಿನ ಧರ್ಮಗುರುಗಳಾದ ವಂ.ಫಾ.ಜೇಮ್ಸ್ ಡಿಸೋಜಾ ಹಾಗೂ ವಂ.ಫಾ.ವಿಜೆಯ್ ಲೋಬೋ, ಪ್ರಾಂಶುಪಾಲರು ಎಲ್ಲಾ ಸಮುದಾಯದ ಮಹಿಳೆಯರು ಮಕ್ಕಳು, ಪುಟಾಣಿ ಮಕ್ಕಳು ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಹಬ್ಬದ ಸಿಹಿಯನ್ನು ಹಂಚಿದರು. ಬಳಿಕ ಕ್ರಿಸ್ಮಸ್ ಸಂದೇಶವನ್ನು ಸಾರುವ ವಿವಿಧ ರೀತಿಯ ನೃತ್ಯ ರೂಪಕಗಳನ್ನು ಬೆಳ್ತಂಗಡಿ ವಲಯದ ಚರ್ಚ್ ಮಕ್ಕಳು ಹಾಗೂ ದಯಾಳ್ ಬಾಗ್ ಕಪುಚಿನ್ ಸಹೋದರರು ಪ್ರಸ್ತುತ ಪಡಿಸಿದರು.


ಕಾರ್ಯಕ್ರಮದಲ್ಲಿ ಅನುಗ್ರಹ ಕಾಲೇಜು ಉಜಿರೆ, ಸಿಸ್ಟರ್ಸ್ ಆಫ್ ಮೇರಿ ಇಮ್ಮಾಕ್ಯುಲೇಟ್ ಕೋನ್ವೆಂಟ್ ಉಜಿರೆ,ಸಂತ ಅನ್ನಾ ಚರ್ಚ್ ನಾಳ ಹಾಗೂ ಹೋಲಿ ಕ್ರೋಸ್ ಚರ್ಚ್ ಮಂಜೊಟ್ಟಿ ಇಲ್ಲಿನ ಮಕ್ಕಳು ಹಾಗೂ ಶಿಕ್ಷಕರು, ದಯಾ ವಿಶೇಷ ಶಾಲೆಯ ಶಿಕ್ಷಕರು, ವಿಮುಕ್ತಿ ಸಂಸ್ಧೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು,
ಸಂಸ್ಥೆಯ ಸಹ ನಿರ್ದೇಶಕರಾದ ವಂ.ಫಾ.ರೋಹನ್ ಲೋಬೋ ರವರು ಸ್ವಾಗತಿಸಿ, ಸಂಸ್ಥೆಯ ಸಿಬ್ಬಂದಿಯಾದ ಕುಮಾರಿ ಪೂರ್ಣಿಮಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

error: Content is protected !!