ಬೆಳ್ತಂಗಡಿ: ಪ್ರತೀಯೊಬ್ಬರಿಗೆ ಶಿಕ್ಷಣ ತುಂಬಾ ಅಗತ್ಯ, ಶಿಕ್ಷಕರು ಉತ್ತಮವಾಗಿ ಮಕ್ಕಳನ್ನು ಬೆಳೆಸುವಂತವರು ಮಕ್ಕಳಲ್ಲಿ ಆತ್ಮಸ್ಧರ್ಯ ಬೆಳೆಸುವವರು, ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು, ಉತ್ತಮ ಶಿಕ್ಷಣವನ್ನು ನೀಡುವ ಉತ್ತಮ ಶಿಕ್ಷಕರಾಗೋಣ ಎಂದು ಸಂಸ್ಧೆಯ ನಿರ್ದೇಶಕರಾದ ವಂ.ಫಾ ವಿನೋದ್ ಮಸ್ಕರೇನ್ಹಸ್ ಹೇಳಿದರು ಅವರು ಡಿ 19 ರಂದು ವಿಮುಕ್ತಿ ಕಚೇರಿಯಲ್ಲಿ ನಡೆದ ಕಪುಚಿನ್ ಕೃಷಿಕ್ ಸೇವಾ ಕೇಂದ್ರ(ರಿ) ಸಹಯೋಗ ವೋಲ್ಕ್‍ರ್ಟ್ ಫೌಂಡೇಶನ್ ಇಂಡಿಯಾನ್ ಟ್ರಸ್ಟ್ ವತಿಯಿಂದ ಓದುವ ಹಾಗೂ ಗಣಿತ ಕೌಶಲ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಮಾನವೀಯ ಮೌಲ್ಯಗಳಾದ ನಡೆ ನುಡಿ, ಸ್ವಚ್ಚತೆ, ಸಹಬಾಳ್ವೆ, ಪರರ ಸೇವೆ ಮೈಗೂಡಿಸಲು ಪ್ರೇರಣೆ ನೀಡಬೇಕು ಎಂದು ಎಲ್ಲಾ ಶಿಕ್ಷಕರಿಗೆ ಕರೆಯಿತ್ತರು.
ಶ್ರೀಯುತ ಶಂಭು ಶಂಕರ್ ಸಮನ್ವಯ ಅಧಿಕಾರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಇವರು ಮಾತನಾಡುತ್ತಾ ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಅವಶ್ಯಕತೆ ಇದೆ ಕೆಲವೊಂದು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಬಡ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಲು ಸಾದ್ಯವಾಗುತ್ತಿಲ್ಲ ಸರಕಾರಿ ಶಾಲೆಗಳಿಗೆ ಈ ರೀತಿ ಶಿಕ್ಷಕರನ್ನು ಒದಗಿಸುವುದು ಸಂತೋಷವಾಗುತ್ತಿದೆ ಬಹಳ ವರ್ಷದಿಂದ ಕಪುಚಿನ್ ಕೃಷಿಕ್ ಸೇವಾ ಕೇಂದ್ರವು ಸರಕಾರಿ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸುತ್ತಿರುವುದು ಶ್ಲಾಘನೀಯವಾಗಿದ್ದು. ಗೌರವಯುತ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿ ಎಂದು ಶುಭಹಾರೈಸಿದರು.
ಶ್ರೀಯುತ ಜಗನ್ನಾಥ್ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿ ಇವರು ವೇದಿಕೆಯಲ್ಲಿ ಉಪಸ್ದಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಿಕ್ಷಕರ ಪ್ರತಿನಿಧಿಯಾಗಿ ಕು.ಸುಜಾತ ಇವರು ವೇದಿಕೆಯಲ್ಲಿ ಉಪಸ್ದಿತಿದ್ದರು.ಸಂಸ್ದೆಯ ಸಹನಿದೇಶಕರಾದ ವ.ಫಾ ರೋಹನ್ ಲೋಬೊ ಇವರು ಓದುವ ಹಾಗೂ ಗಣಿತ ಕೌಶಲ್ಯ ಚಟುವಟೆಕೆ ಕುರಿತು ಶಿಕ್ಷಕರಿಗೆ ತರಬೇತಿ ನೀಡಿದರು.ಶ್ರೀಮತಿ ಲವೀನಾ ಫೆರ್ನಾಂಡಿಸ್ ಸಂಸ್ಧೆಯ ಲೆಕ್ಕಾಕಿ ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.ಶ್ರೀಮತಿ ಮೇರಿನ್ ಸಂಯೋಜಕರು ಸರ್ವರಿಗೆ ಧನ್ಯವಾದವಿತ್ತು.ಶ್ರೀಮತಿ ಎಮಿಲ್ಡಾ ಪಾಯ್ಸ್ ಶಿಕ್ಷಣ ಸಂಯೋಜಕಿ ಕಾರ್ಯಕ್ರವನ್ನು ನಿರೂಪಿಸಿದರು.ಕಾರ್ಯಕ್ರಮದಲ್ಲಿ ಅಯ್ದಾ 25 ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು, ಶಾಲಾ ಮೇಲುಸ್ತುವರಿ ಸಮಿತಿ ಸದಸ್ಯರು, ಗೌರವ ಶಿಕ್ಷಕರು,ವಿಮುಕ್ತಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ದಿತರಿದ್ದರು.