ಬೆಳ್ತಂಗಡಿ :ಅಂಗವೈಕಲ್ಯವನ್ನು ಮೆಟ್ಟಿ ನಿಂತು ಯಕ್ಷಗಾನದಲ್ಲಿ ಅಪ್ರತಿಮ ಸಾಧನೆಗೈಯುತ್ತಿರುವ ಪಾವಂಜೆ ಮೇಳದ ಕಲಾವಿದ ಮನೋಜ್ ವೇಣೂರು ಮನೆಗೆ ಕಿರುತೆರೆ ನಿರ್ದೆಶಕ ವಿನು ಬಳೆಂಜ ಭೇಟಿ ನೀಡಿದರು.ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮೀಣ ಪ್ರದೇಶದ ಕಲಾವಿದ ಕೃತಕ ಕಾಲಿನಲ್ಲಿ ಯಕ್ಷಗಾನ ವೇಷಧಾರಿಯಾಗಿ ಇತರ ಕಲಾವಿದರಂತೆ ಅಭಿನಯಿಸುತಿದ್ದಾರೆ. ಬಡ ಕಲಾವಿದನ ಹಾಗೂ ಮನೆಯ ಬಗ್ಗೆ ಕಳೆದ ಕೆಲವು ದಿನಗಳ ಹಿಂದೆ ಪ್ರಜಾಪ್ರಕಾಶ ನ್ಯೂಸ್ ವಿಸ್ಕ್ತತ ವರದಿಯೊಂದನ್ನು ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೆ ಉದ್ಯಮಿ ಕೊಡುಗೈದಾನಿ ಪಟ್ಲ ಪೌಂಡೇಶನ್ ಟ್ರಸ್ಟ್ ಸಂಚಾಲಕ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅವರು ಉಜಿರೆಯಲ್ಲಿ ನಡೆದ ಪಟ್ಲ ಪೌಂಡೇಶನ್ ಬೆಳ್ತಂಗಡಿ ಘಟಕದ ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಮನೆ ನವೀಕರಣಕ್ಕಾಗಿ 2 ಲಕ್ಷ ಅರ್ಥಿಕ ಸಹಾಯವನ್ನು ನೀಡಿ ಕಲಾವಿದನ ಬಾಳಿಗೆ ಬೆಳಕಾಗಿದ್ದಾರೆ.ಈ ಎಲ್ಲದರ ಬಗ್ಗೆ ಮಾಹಿತಿ ಪಡೆದ ಖ್ಯಾತ ಕಿರುತೆರೆ ನಿರ್ದೆಶಕ ವಿನು ಬಳೆಂಜ ಡಿ 18 ರಂದು ಮನೋಜ್ ಮನೆಗೆ ಭೇಟಿ ನೀಡಿ ಕೆಲವೊಂದು ಮಾಹಿತಿಗಳನ್ನು ಅವರಲ್ಲಿ ಹಾಗೂ ಕುಟುಂಬಸ್ಥರೊಂದಿಗೆ ಪಡೆದುಕೊಂಡರು.
ಅದಲ್ಲದೇ ಮುಂದಿನ ದಿನಗಳಲ್ಲಿ ಮನೋಜ್ ಅವರ ಪ್ರತಿಭೆ ಉತ್ತಮ ವೇದಿಕೆಯನ್ನು ಕಲ್ಪಿಸುವ ಬಗ್ಗೆ ಯೋಚನೆ ಮಾಡಲಾಗುವುದು ಈ ಮೂಲಕ ಅವನ ಪ್ರತಿಭೆಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ಯೋಗೀಶ್, ರಾಜಶೇಖರ್ ಹಾಗೂ ಪತ್ರಕರ್ತ ಪ್ರಸಾದ್ ಶೆಟ್ಟಿ ಎಣಿಂಜೆ ಜೊತೆಗಿದ್ದರು.