ದಲಿತ ವ್ಯಕ್ತಿ ಮೇಲೆ ನಾಲ್ವರಿಂದ ಹಲ್ಲೆ…!: ಏಟು ತಡೆದು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಕೊಲೆ..!: ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ಘಟನೆ

ಬೆಳ್ತಂಗಡಿ : ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎಸಿ ಕುರಿಯನ್ ಮಾಲಕತ್ವದ ಸಾರ ಫಾರ್ಮ್ ತೋಟದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ (30) ಎಂಬಾತರ ಮೇಲೆ ಡಿ. 17 ರಂದು ನಾಲ್ವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಏಟು ತಿಂದು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಕೊಲೆ ಮಾಡಿ, ಬೆತ್ತಲಾಗಿ ತೋಟದಲ್ಲಿ ಎಸೆದಿದ್ದಾರೆ.ಕೊಲೆಗೈದ ದುಷ್ಕರ್ಮಿಗಳನ್ನು ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆಕೆ ಆನಂದ ಪೂಜಾರಿ, ಮಹೇಶ್ ಪೂಜಾರಿ ಎಂದು ಗುರುತಿಸಲಾಗಿದೆ.


ಮೃತ ಶ್ರೀಧರ್ ಮೇಲೆ ಈ‌ ನಾಲ್ವರು ಆರೋಪಿಗಳು ಹಲ್ಲೆ ಮಾಡಿದ್ದು, ಈ ವೇಳೆ ಕೆಲಸಗಾರರಾದ ಅಬ್ರಾಹಂ ಮತ್ತು ಪರಮೇಶ್ವರ ಸ್ಥಳಕ್ಕೆ ಬಂದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಹಲ್ಲೆಗೊಳಗಾಗಿದ್ದ ಶ್ರೀಧರನನ್ನು ಉಪಚರಿಸಿ ತೋಟದ ಮನೆಗೆ ಕರೆದುಕೊಂಡು ಬಂದು ಊಟ ನೀಡಿ ಕೊಠಡಿಯಲ್ಲಿ ವಿಶ್ರಾಂತಿಗೆ ಕಳುಹಿಸಿದ್ದರು. ಡಿ.18 ರಂದು ಬೆಳಗ್ಗೆ ಶ್ರೀಧರನನ್ನು ಕರೆದಾಗ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಅಬ್ರಾಹಂ ಹಾಗೂ ಪರಮೇಶ್ವರ ಕೊಠಡಿಗೆ ಹೋದಾಗ ಶ್ರೀಧರ್ ನಾಪತ್ತೆಯಾಗಿದ್ದರು. ಬಳಿಕ ಇಬ್ಬರೂ ತೋಟದ ಸುತ್ತಮುತ್ತ ಹುಡುಕಾಟ ನಡೆಸಿದಾಗ ಸುಮಾರು 250-300 ಮೀಟರ್ ದೂರದಲ್ಲಿ ಶ್ರೀಧರ್ ಬೆತ್ತಲೆಯಾಗಿ ಸಾವನ್ನಪ್ಪಿರುವುದು ಕಂಡು ಬಂದಿದೆ.

ತಕ್ಷಣ ತೋಟದ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತೋಟದ ಸುತ್ತಮುತ್ತಲಿನಲ್ಲಿ ಪರಿಶೀಲನೆ ಮಾಡಿದ್ದಾಗ ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿ ತುಂಡರಿಸಿ ನಾಲ್ಕು ಜನ ಆರೋಪಿಗಳು ಕೊಠಡಿಗೆ ಬಂದು ಕೊಲೆ ಮಾಡಿ ನಂತರ ತೋಟದ ಮಧ್ಯೆ ಹಾಕಿದ್ದು ಅದಲ್ಲದೆ ಕೊಲೆಯಾದವನ ಬಳಿ ಇದ್ದ 9500/- ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ‌ ಬಗ್ಗೆ ಹರೀಶ್ ಮುಗೇರ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ


ಘಟನೆ ಬಗ್ಗೆ ಮಾಹಿತಿ ಪಡೆದ ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಹೆಚ್ಚಿನ ತನಿಖೆಗಾಗಿ ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕೊಲೆ ಮಾಡಿದ ನಾಲ್ವರ ಆರೋಪಿಗಳ ಮೇಲೆ ಧರ್ಮಸ್ಥಳ ಠಾಣೆಯಲ್ಲಿ 323,302,392 ಜೊತೆಗೆ 34 IPC ಮತ್ತು ಕಲಂ 3(2) (va),3(2)(v) ಎಸ್ಟಿ /ಎಸ್ಸಿ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!