ಗ್ರಾಮ ಪಂಚಾಯತ್ ಪ್ರತಿನಿಧಿಗಳಿಗೆ ಗುಡ್ ನ್ಯೂಸ್: ಮಾಸಿಕ ಗೌರವಧನ ಹೆಚ್ಚಿಸಿದ ಸರಕಾರ..!

 

 

ಬೆಳ್ತಂಗಡಿ:   ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳಿಗೆ ಗೌರವಧನ‌ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳಿಗೆ 3000 ರೂ , ಉಪಾಧ್ಯಕ್ಷರುಗಳಿಗೆ 2000 ರೂ ಹಾಗೂ ಸದಸ್ಯರುಗಳಿಗೆ 1000ರೂ ಮಾಸಿಕ ಗೌರವಧನವನ್ನು ನಿಗದಿಪಡಿಸಲಾಗಿತ್ತು.

ಪ್ರಸ್ತುತ ಗೌರವಧನವನ್ನು ಪರಿಷ್ಕರಿಸಲಾಗಿದ್ದು, ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳಿಗೆ
6,000ರೂ, ಉಪಾಧ್ಯಕ್ಷರುಗಳಿಗೆ 4,000 ರೂ, ಹಾಗೂ ಸದಸ್ಯರುಗಳಿಗೆ 2,000ರೂಗಳ ಮಾಸಿಕ
ಗೌರವಧನವನ್ನು ನಿಗದಿಗೊಳಿಸಲು ಆದೇಶಿಸಿದೆ.

 

ಸರ್ಕಾರದ ಸ್ಪಂದನೆಗೆ ಸ್ವಾಗತ:

ಸರ್ಕಾರ ಗ್ರಾಮ‌ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನವನ್ನು ದ್ವಿಗುಣಗೊಳಿಸಿ ಆದೇಶ ಹೊರಡಿಸಿದೆ. ಗ್ರಾಮ ಪಂಚಾಯತಿ ಸದಸ್ಯರ ಬೇಡಿಕೆಗೆ ಸ್ಪಂದಿಸಿದ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
ಆದರೆ ನಾವು ಕೇರಳ ಮಾದರಿಯಲ್ಲಿ ಅಧ್ಯಕ್ಷರಿಗೆ, 15,000-00, ಉಪಾಧ್ಯಕ್ಷರಿಗೆ 12000-00 ಹಾಗೂ ಸದಸ್ಯರಿಗೆ 10000-00 ಗೌರವಧನವನ್ನು ಹೆಚ್ಚಿಸಿ ಸರ್ಕಾರದ ಆದೇಶವನ್ನು ಪರಷ್ಕರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಹೇಳಿದ್ದಾರೆ.

 

error: Content is protected !!