ಬೆಳ್ತಂಗಡಿ ಸೇತುವೆ ಬಳಿ ಆ್ಯಂಬುಲೆನ್ಸ್ ಪಲ್ಟಿ..!: ವಾಹನದಲ್ಲಿದ್ದ ಮೂವರಲ್ಲಿ ಒಬ್ಬರಿಗೆ ಗಂಭೀರ ಗಾಯ:

 

 

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ಸೇತುವೆ ಬಳಿ ಆ್ಯಂಬುಲೆನ್ಸ್ ಒಂದು ಪಲ್ಟಿಯಾದ ಘಟನೆ ಇಂದು ರಾತ್ರಿ ನಡೆದಿದೆ.


ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಕಕ್ಕಿಂಜೆಯ ರೋಗಿಯೊಬ್ಬರನ್ನು ಕರೆತರಲು ಕಕ್ಕಿಂಜೆ ಆಸ್ಪತ್ರೆಯೊಂದರ ಅಂಬುಲೆನ್ಸ್  ಹೊರಟಿದ್ದು ಮಡಂತ್ಯಾರ್ ಹೋಗುತ್ತಿರುವ  ಸಂದರ್ಭ ಬರುವುದು ಬೇಡ ಎಂಬ ಕರೆ ಮಂಗಳೂರಿನಿಂದ  ಬಂದಿದ್ದು ಅಲ್ಲಿಂದ ಹಿಂತಿರುಗುತ್ತಿರುವ ವೇಳೆ ಈ  ಘಟನೆ ನಡೆದಿದೆ. ಎನ್ನಲಾಗಿದ್ದು .
ಆ್ಯಂಬುಲೆನ್ಸ್ ಬೆಳ್ತಂಗಡಿ ಸೇತುವೆ ಬದಿಗೆ ಡಿಕ್ಕಿ ಹೊಡೆದು   ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಜೀವರಕ್ಷಕ‌ ವಾಹನದಲ್ಲಿ ಮೂರು ಮಂದಿ ಇದ್ದು ಅವರಿಗೆ ಗಾಯಗಳಾಗಿವೆ  ಅವರನ್ನು ತಕ್ಷಣ ಬೆಳ್ತಂಗಡಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.ಅದರಲ್ಲಿ  ಒಬ್ಬರಿಗೆ  ಗಂಭೀರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯ‌ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.

 

 

error: Content is protected !!