ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ : ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ ಆಯ್ಕೆ: ಫೆ.19 ರಿಂದ 27ರ ತನಕ ಬ್ರಹ್ಮಕಲಶೋತ್ಸವ:

 

 

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ‌ ಪ್ರಥಮ ಪೂರ್ವಭಾವಿ ಸಭೆಯು ವೇಣೂರು ಶ್ರೀ ಭರತೇಶ ಸಮುದಾಯ ಭವನದಲ್ಲಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಅಳದಂಗಡಿಯ ಶಿವಪ್ರಸಾದ್ ಅಜಿಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

 

 

ಈ ಸಂದರ್ಭದಲ್ಲಿ ಫೆ 19 ರಿಂದ 27 ರವರೆಗೆ ನಡೆಯುವ  ದೇವಸ್ಥಾನದ  ಅಷ್ಟಬಂಧ ಬ್ರಹ್ಮಕಲಶೋತ್ಸವದ  ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ  ಶಾಸಕ ಹರೀಶ್ ಪೂಂಜ, ಕಾರ್ಯಧ್ಯಕ್ಷರಾಗಿ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಯಜ್ಞ ನಾರಾಯಣ್ ಭಟ್ , ಇವರನ್ನು ಸರ್ವಾನುಮತದಿಂದ  ಆಯ್ಕೆ ಮಾಡಲಾಯಿತು.

ಬಳಿಕ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ ಅವರು, ಸಮಿತಿಯ ಪರಿಪೂರ್ಣತೆಯ ದೃಷ್ಟಿಯಿಂದ ಇನ್ನೊಂದು ವಾರದೊಳಗೆ ಸಭೆ ಕರೆದು ಉಪಸಮಿತಿಗಳನ್ನು ರಚನೆ ಮಾಡಲಾಗುವುದು ಎಂದರು.ಸೀಮೆಯ ದೇವಸ್ಥಾನದ ಈ ಬ್ರಹ್ಮಕಲಶೋತ್ಸವದಲ್ಲಿ ಸೇರುವ ಭಕ್ತರಿಗೆ ಆತಿಥ್ಯ ನೀಡುವ ಕೆಲಸ ನಮ್ಮಿಂದ ಆಗಬೇಕು. ಪರಿಶ್ರಮದ ಮೂಲಕ ನಾವೆಲ್ಲರೂ ಒಂದಾಗಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಬೇಕಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ವೇಣೂರು ಸೀಮೆಗೆ ಸಂಬಂಧಿತ 12 ಗ್ರಾಮದ ಗ್ರಾಮಸ್ಥರು ಸಹಕಾರ ನೀಡುವುದಾಗಿ ಅಲ್ಲಿನ ಶಾಸಕರು ಭರವಸೆ ನೀಡಿದ್ದಾರೆ. ಸೀಮೆಯ ದೇಗುಲದ ಜೀರ್ಣೋದ್ಧಾರ ಇದು ನಮ್ಮ ಯೋಗಭಾಗ್ಯ ಎಂದರು. ಸಮಿತಿಯ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.

 

 

ಸಭೆಯಲ್ಲಿ ಡಾ. ಪ್ರದೀಪ್ ನಾವೂರು ಅವರು ದಿಕ್ಸೂಚಿ ಭಾಷಣದ ಮೂಲಕ ಸನಾತನ ಹಿಂದೂ ಧರ್ಮಗಳ ಬಗ್ಗೆ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಗ್ರಾಮಸ್ಥರು ಸೇರಿದಂತೆ ಸಾರ್ವಜನಿಕರು ಸೇರಿ ಯಾವ ರೀತಿ ಯಶಸ್ವಿಗೊಳಿಸಬಹುದು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ

ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಆನಂದ ಶೆಟ್ಟಿ, ಸೋಮಯ್ಯ ಹನೈನಡೆ, ಪ್ರ. ಕಾರ್ಯದರ್ಶಿ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ, ಕೋಶಾಧಿಕಾರಿ ಎ. ಜಯರಾಮ್ ಶೆಟ್ಟಿ, ಗುರುವಾಯನಕೆರೆ ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಯಶವಂತ ಎಸ್. ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ವಂದಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ನಿರೂಪಿಸಿದರು.

 

error: Content is protected !!