ಲಂಚ ಪಡೆದು ಇಂಡಸ್ಟ್ರೀಸ್ ಗೆ ಪರವಾನಿಗೆ ಪತ್ರ: ಭ್ರಷ್ಟಾಚಾರ ಪ್ರಕರಣದ  ಆರೋಪಿ ಸುರೇಶ್‌ಗೆ 4 ವರ್ಷ ಜೈಲು ಶಿಕ್ಷೆ ಮತ್ತು 4 ಲಕ್ಷ ದಂಡ: ದ.ಕ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಮಂಗಳೂರು : ವರ್ಗಾವಣೆ ಆಗಿದ್ದರು ಲಂಚ ಪಡೆದು ಇಂಡಸ್ಟ್ರೀಸ್ ಗಳಿಗೆ ಪರವಾನಿಗೆ ಪತ್ರ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟ ಅಧಿಕಾರಿಯೊಬ್ಬರಿಗೆ ಮಂಗಳೂರಿನ ಮೂರನೇ ಹೆಚ್ಚುವರಿ ವಿಶೇಷ ಸೆಕ್ಷನ್ ಕೋರ್ಟ್ ಶಿಕ್ಷೆ ವಿಧಿಸಿದೆ.

ಮಂಗಳೂರಿನ ಉರ್ವ ಸ್ಟೋರಿ ಬಳಿ ಇರುವ ಪ್ಯಾಕ್ಟ್ರಿ & ಬಾಯ್ಲರ್ ಇದರ ಅಸಿಸ್ಟೆಂಟ್ ಡೈರೆಕ್ಟರ್ ಸುರೇಶ್ ಇವರಿಗೆ ಬೆಂಗಳೂರಿಗೆ ವರ್ಗಾವಣೆ ಆಗಿದ್ದರು ಇಂಡಸ್ಟ್ರೀಸ್ ಗಳಿಗೆ ಲಂಚ ಪಡೆದು ಪರವಾನಿಗೆ ನೀಡುತ್ತಿದ್ದರು. ಈ ಬಗ್ಗೆ 2016 ರಲ್ಲಿ ಮಂಗಳೂರು ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಅದರಂತೆ ಎಸಿಬಿ ಪೊಲೀಸ್ ಠಾಣೆಯಲ್ಲಿ ಅಂದಿನ ಡಿವೈಎಸ್ಪಿ ಸುಧೀರ್ ಎಮ್ ಹೆಗ್ಡೆ ಅವರು ಪ್ರಕರಣ ದಾಖಲಿಸಿಕೊಂಡು ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಪರವಾನಿಗೆ ನೀಡಿದ ದಾಖಲೆಗಳು ಹಾಗೂ ಲಂಚವಾಗಿ ಪಡೆದ 3 ಲಕ್ಷದ 40 ಸಾವಿರ ಹಣ ಪತ್ತೆಯಾಗಿತ್ತು. ಇದನ್ನು ವಶಕ್ಕೆ ಪಡೆದು ಅಂದಿನ ಎಸಿಬಿ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ಬಿಸಿ ಹಾಗೂ ತನಿಖಾ ಸಹಾಯಕರಾಗಿ ಹೆಡ್ ಕಾನ್ಟೇಬಲ್ ಹರಿಪ್ರಸಾದ್ ತನಿಖೆ ನಡೆಸಿ ಮಂಗಳೂರು ಕೋರ್ಟ್ಗೆ ದೋಷರೋಪ ಪಟ್ಟಿ ಸಲ್ಲಿಸಿದ್ದರು.

 

 

ಇಂದು ಮಂಗಳೂರಿನ ಮೂರನೇ ಹೆಚ್ಚುವರಿ ವಿಶೇಷ ಸೆಕ್ಷನ್ ಕೋರ್ಟ್ನ ಜಡ್ಜ್ ಜಕಾತಿಯವರು ಆರೋಪಿ ಸುರೇಶ್‌ಗೆ 4 ವರ್ಷ ಜೈಲು ಶಿಕ್ಷೆ ಮತ್ತು 4 ಲಕ್ಷ ದಂಡ ವಿಧಿಸಿದ್ದು ದಂಡ ತಪ್ಪಿದ್ದಲ್ಲಿ 6 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ಆದೇಶ ಮಾಡಿದೆ. ಇದು ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಕರಣ ದಾಖಲಾಗಿ ಶಿಕ್ಷೆ ಆಗುತ್ತಿರುವ ಮೊದಲ ಪ್ರಕರಣವಾಗಿದೆ.

ಮಂಗಳೂರು ಎಸಿಬಿ ಪರವಾಗಿ ರವೀಂದ್ರ ಮುನಿಪಾಡಿ ವಾದ ಮಂಡಿಸಿದ್ದರು. ಡಿವೈಎಸ್ಪಿ ಸುಧೀರ್ ಎಮ್ ಹೆಗ್ಡೆ ಪ್ರಕರಣ ದಾಖಲಿಸಿಕೊಂಡು, ಪ್ರಕರಣದ ತನಿಖೆಯನ್ನು ಅಂದಿನ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ಬಿಸಿ ಮತ್ತು ಹೆಡ್ ಕಾನ್ಟೇಬಲ್ ಹರಿ ಪ್ರಸಾದ್ ಸಹಾಯಕರಾಗಿದ್ದರು ಕೆಲಸ ಮಾಡಿದ್ದರು.

ಭ್ರಷ್ಟಾಚಾರ ನಿಗ್ರಹ ದಳ ವಿಲಿನವಾಗಿ ಲೋಕಯುಕ್ತಕ್ಕೆ ಎಲ್ಲಾ ಪ್ರಕರಣ ಹಸ್ತಾಂತರವಾಗಿದ್ದು ಆರೋಪಿ ಸುರೇಶ್‌ನನ್ನು ಲೋಕಯುಕ್ತ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದು ಇದೀಗ ಜೈಲಿಗೆ ಕಳುಹಿಸಿದ್ದಾರೆ

error: Content is protected !!