ದಿಡುಪೆ ಫಾಲ್ಸ್ ಗೆ ತೆರಳಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು:

 

 

ಬೆಳ್ತಂಗಡಿ: ದಿಡುಪೆ ಸಮೀಪದ ಎರ್ಮಾಯಿ ಫಾಲ್ಸ್ ನಲ್ಲಿ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ಮುಳುಗಿ
ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
ಕಾಲೇಜೊಂದರ 7 ಮಂದಿ ವಿದ್ಯಾರ್ಥಿಗಳು ಮಲವಂತಿಗೆ ಬಳಿಯ ಎರ್ಮಾಯಿ ಫಾಲ್ಸ್ ಗೆ ಇಂದು ಮದ್ಯಾಹ್ನ ತೆರಳಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕನ್ಯಾಡಿ ಸಮೀಪದ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿವೇಕ್ (17) ಆಕಸ್ಮಿಕವಾಗಿ ಕಾಲು ಜಾರಿ   ನೀರಿನಲ್ಲಿ ಮುಳುಗಿದ್ದು ಜೊತೆಯಲ್ಲಿದ್ದವರು ರಕ್ಷಣೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ತಕ್ಷಣ ಜೊತೆಯಲ್ಲಿದ್ದವರು ಬೊಬ್ಬೆ ಹೊಡೆದಾಗ ಸ್ಥಳೀಯರೊಬ್ಬರ ಸಹಕಾರದಲ್ಲಿ ವಿದ್ಯಾರ್ಥಿಯನ್ನು ಮೇಲಕ್ಕೆತ್ತಿ  ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಅದರೆ ಅಷ್ಟೊತ್ತಿಗಾಗಲೇ ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

error: Content is protected !!