ಬೆಳ್ತಂಗಡಿ : ಕಲಾವಿದ ರಘುರಾಮ್ ಶೆಟ್ಟಿ ಲಾಯಿಲ‌ ಹೃದಯಾಘಾತದಿಂದ ನಿಧನ:

 

 

 

ಬೆಳ್ತಂಗಡಿ :  ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಗಂಪದಡ್ಡ ನಿವಾಸಿ ರಘುರಾಮ್ ಶೆಟ್ಟಿ(58) ಡಿ.2 ರಂದು ರಾತ್ರಿ ಮನೆಯಲ್ಲಿ ಹೃದಯಾಘಾತವಾಗಿದ್ದು ತಕ್ಷಣ ಅವರನ್ನು  ಆಸ್ಪತ್ರೆಗೆ ದಾಖಲಿಸಿದ್ದರೂ ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ.

ಡಿ.2 ರಂದು ರಾತ್ರಿ ಸುಮಾರು 10 ಗಂಟೆ ವೇಳೆಗೆ ಮನೆಯಲ್ಲಿ ಊಟ ಮಾಡಿ ನಂತರ ನೀರು ಕುಡಿಯಲು ಹೋದಾಗ ಏಕಾಏಕಿ ನೆಲಕ್ಕೆ ಬಿದ್ದಿದ್ದು ತಕ್ಷಣ ಮನೆಯವರು ಆಸ್ಪತ್ರೆಗೆ ದಾಖಲಿಸಿದಾಗ ಹೃದಯಾಘಾತದಿಂದ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಉತ್ತಮ ಕಲಾವಿದರಾಗಿರುವ ಇವರು  ಚಲನಚಿತ್ರ, ಧಾರವಾಹಿ ಸೇರಿದಂತೆ  ನಾಟಕಗಳಲ್ಲಿ ನಟಿಸಿರುವ ರಘುರಾಮ್ ಶೆಟ್ಟಿಯವರು ಮನೆಯಲ್ಲಿ ಕೃಷಿಕರಾಗಿದ್ದರು ಇವರಿಗೆ ಪತ್ನಿ ಹಾಗೂ  ಪುತ್ರರಿಬ್ಬರಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

error: Content is protected !!