ಡಿಸೆಂಬರ್ 06 ಮತ್ತು 07ರಂದು ಮಡಂತ್ಯಾರು ಚರ್ಚ್ ನ ವಾರ್ಷಿಕ ಮಹೋತ್ಸವ

ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್ ಇದರ ವಾರ್ಷಿಕ ಮಹೋತ್ಸವ ಡಿಸೆಂಬರ್ 07ನೇ ಬುಧವಾರ ನಡೆಯಲಿದೆ. ಈ ಪಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಡಿಸೆಂಬರ್ 04ನೇ ಆದಿತ್ಯವಾರ ಬೆಳಗ್ಗೆ 8ರಿಂದ ಸಹೋದರತೆಯ ಪ್ರತೀಕವಾಗಿ ದಿವ್ಯ ಬಲಿಪೂಜೆ ನಡೆಯುಲಿದೆ. ಸೈಂಟ್ ಜೋಸೆಫ್ ವರ್ಕ್ಶಾಫ್, ಜೆಪ್ಪುವಿನ ಸಹಾಯ ನಿರ್ದೇಶಕ ಮತ್ತು ಸಹಾಯಕ ಮೆನೇಜರ್ ವಂ. ಸ್ವಾಮಿ ಕೆನೆಟ್ ಆರ್, ಕ್ರಾಸ್ತರವರು ಅಂದಿನ ವಿದಿವಿಧಾನವನ್ನು ನಡೆಸಲಿದ್ದಾರೆ. ಸಂಸ್ಕಾರ ರೂಪದಲ್ಲಿರುವ ಪ್ರಭು ಏಸು ಕ್ರಿಸ್ತರಿಗೆ, ಬಹಿರಂಗ ಆರಾಧನೆ ಮತ್ತು ಪರಮ ಕ್ರಿಸ್ತ ಪ್ರಸಾದದ ಭವ್ಯ ಮೆರವಣಿಗೆ ನಡೆಯಲಿದೆ.

ಡಿಸೆಂಬರ್ 06ನೇ ಮಂಗಳವಾರ ಸಂಜೆ 6ರಿಂದ ಪವಿತ್ರ ದೇವರ ವಚನಗಳ ಹಾಗೂ ಕೀರ್ತನೆಗಳ ಸಂಭ್ರಮ, ಅಸ್ವಸ್ಥರಿಗೆ ವಿಶೇಷ ಪ್ರಾರ್ಥನೆ ನಡೆಯಲಿದೆ. ಮಡಂತ್ಯಾರು ಪೇಟೆಯ ವೆಲಂಕನಿ ಮಾತೆಯ ಆವರಣದಿಂದ ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿAಗ್ ಕಾಲೇಜಿನ ಸಹ ನಿರ್ದೇಶಕರಾದ ವಂ. ಸ್ವಾಮಿ ಆಲ್ವಿನ್ ರಿಚರ್ಡ್ ಡಿ’ಸೋಜರವರು ಕನ್ನಡ ಭಾಷೆಯಲ್ಲಿ ದೇವರ ವಾಕ್ಯದ ಸಂದೇಶ ನೀಡಲಿರುವರು. ನಂತರ ಯೇಸು ಕ್ರಿಸ್ತರ ಪವಿತ್ರ ಹೃದಯದ ಪವಾಡ ಪ್ರತಿಮೆಯನ್ನು ಇಗರ್ಜಿಗೆ ಮೊಂಬತ್ತಿ ಮೆರವಣಿಗೆ ಮೂಲಕ ತರಲಾಗುವುದು. ನಂತರ ಈ ದಿನದ ಪವಿತ್ರ ವಿಧಿವಿಧಾನಗಳು ನಡೆಯಲಿವೆ.

 

 

ಡಿಸೆಂಬರ್ 07ನೇ ಬುಧವಾರ ವಾರ್ಷಿಕ ಮಹೋತ್ಸವದ ಸಂಭ್ರಮ ನಡೆಯಲಿದ್ದು, ಪೂಜಾ ವಿಧಿವಿಧಾನವನ್ನು ಮಂಗಳೂರು ಪೆರ್ಮನ್ನೂರು ಸಂತ ಸೆಬೆಸ್ಟಿಯಾನ್ ಚರ್ಚ್ನ ಸಹಾಯಕ ಧರ್ಮಗುರುಗಳಾದ ವಂದನೀಯ ಸ್ವಾಮಿ ಸ್ಟೀವನ್ ಜೋಯಲ್ ಕುಟಿನ್ನಾರವರು ನೆರವೇರಿಸಲಿದ್ದಾರೆ. ವಿವಿಧ ಇಗರ್ಜಿಗಳ ವಿಶೇಷ ಆಮಂತ್ರಿತ ಧರ್ಮಗುರುಗಳು ಈ ದಿವ್ಯ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಸಾರ್ವಜನಿಕರಿಗೆ ಇಗರ್ಜಿಯ ಮುಂಭಾಗದಲ್ಲಿ ವಿಶೇಷ ಮೊಂಬತ್ತಿ ಸೇವೆ ಮತ್ತು ಪವಿತ್ರ ಹೂ ಪ್ರಸಾದದ ವಿತರಣೆಯ ವ್ಯವಸ್ಥೆ ಕಲ್ಪಿಸಲಾಗಿದೆ.

error: Content is protected !!