ಸುಳ್ಯ ತಾಲೂಕಿನಲ್ಲಿ ಮತ್ತೆ ಭೂಕಂಪದ ಅನುಭವ: ಎರಡು ತಿಂಗಳ ನಂತರ ಭಯಭೀತರಾದ ಜನ: ಭಾರೀ ಶಬ್ದದೊಂದಿಗೆ ನಡುಗಿದ ಭೂಮಿ..!

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮತ್ತೆ ಲಘು ಭೂಕಂಪನದ ಅನುಭವವಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಸರಣಿ ಭೂಕಂಪನದ ಹೊಡೆತಕ್ಕೆ ಸಿಲುಕಿ ಬಳಿಕ ಶಾಂತವಾಗಿದ್ದ ಸುಳ್ಯ ತಾಲೂಕಿನಲ್ಲಿ ಮತ್ತೆ ನಿನ್ನೆ ಸಂಜೆ ಭೂಕಂಪನದ ಅನುಭವವಾಗಿದೆ. ಮಡಪ್ಪಾಡಿಯಲ್ಲಿ ಸಂಜೆ ಸುಮಾರು 7:32ರ ಹೊತ್ತಿಗೆ ಭುವಿಯೊಡಲು ಕಂಪಿಸಿದ ಅನುಭವವಾಗಿದ್ದು, ಮಡಪ್ಪಾಡಿ ಗ್ರಾಮದ ಕಡ್ಯ, ಹಾಡಿಕಲ್ಲು ಗ್ರಾಮದಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ನಡುಗಿದಂತಾಯಿತು ಎಂದು ಜನರು ಹೇಳಿದ್ದಾರೆ. ಈ ಘಟನೆ ಜನರಲ್ಲಿ ಆತಂಕ ಮೂಡಿಸಿದೆ. ಆದರೆ ನಿನ್ನೆಯ ಘಟನೆಯ ಬಗ್ಗೆ ಭೂವಿಜ್ಞಾನ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ.

 

 

ಕೆಲವು ತಿಂಗಳುಗಳ ಹಿಂದೆ ಇಲ್ಲಿನ ಸಂಪಾಜೆ, ಚೆಂಬು, ಕರಿಕೆ, ಅರಂತೋಡು, ತೊಡಿಕಾನ, ಪೆರಾಜೆ, ಗೂನಡ್ಕ ಸೇರಿದಂತೆ ಹಲವೆಡೆಗಳಲ್ಲೂ ಸರಣಿ ಭೂಕಂಪನವಾಗಿತ್ತು.

error: Content is protected !!