ಧರ್ಮಸ್ಥಳ-ಪೆರಿಯಶಾಂತಿ ರಾಜ್ಯ ಹೆದ್ದಾರಿಯ 35 ಅನಧಿಕೃತ ಅಂಗಡಿಗಳು ತೆರವು : ಅಧಿಕಾರಿಗಳ ನೇತೃತ್ವದಲ್ಲಿ ಅಂಗಡಿ ನೆಲಸಮ: ಅನುಮತಿ ಇಲ್ಲದೆ ಅಂಗಡಿಗಳನ್ನು ನಿರ್ಮಿಸಿದ್ರೆ ಕೇಸ್..

ಬೆಳ್ತಂಗಡಿ: ರಾಜ್ಯ ಹೆದ್ದಾರಿಯ ರಸ್ತೆ ಪಕ್ಕದಲ್ಲಿ ಸುಮಾರು ಮೂವತ್ತೈದಕ್ಕೂ ಅಧಿಕ ಅನಧಿಕೃತ ಅಂಗಡಿಗಳನ್ನು ಲೊಕೊಪಯೋಗಿ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪೊಲೀಸರ ಸಹಕಾರದಲ್ಲಿ ಧ್ವಂಸ ಮಾಡಲಾಗಿದೆ.

ಧರ್ಮಸ್ಥಳ-ಪೆರಿಯಶಾಂತಿ ರಾಜ್ಯ ಹೆದ್ದಾರಿ 37ರ ಪಕ್ಕ ಗ್ರಾಮ ಪಂಚಾಯತಿನಿಂದ ಅನುಮಾತಿ ಪಡೆಯದೆ ಕೆಲವರು ಅನಧಿಕೃತ ಅಂಗಡಿಗಳನ್ನು ಹಾಕಿಕೊಂಡು ವ್ಯವಹಾರ ನಡೆಸುತ್ತಿದ್ದರು. ಹೀಗಾಗಿ ಪ್ರವಾಸಿಗರು ರಸ್ತೆಯಲ್ಲಿ ವಾಹನ ನಿಲ್ಲಿಸಿ ಅಂಗಡಿಗೆ ಹೋಗುತ್ತಿದ್ದು ಇದರಿಂದ ರಸ್ತೆಯಲ್ಲಿ ಹೋಗುವ ಇತರೆ ಸವಾರರಿಗೆ ತೊಂದರೆಯಾಗುತ್ತಿದೆ.

ಕಳೆದ 15 ದಿನದಲ್ಲಿ ಇದೇ ರಾಜ್ಯ ಹೆದ್ದಾರಿಯಲ್ಲಿ 10 ಅಪಘಾತಗಳು ಸಂಭವಿಸಿದ್ದು ನ.23ರಂದು ನಡೆದ ಅಪಘಾತದಲ್ಲಿ ಓರ್ವ ಸಾವನಪ್ಪಿದ್ದಾರೆ. ಈ ಅಪಘಾತಗಳಿಗೆ ಅನಧಿಕೃತ ಅಂಗಡಿಗಳೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪ್ರಕರಣದ ಬಳಿಕ ಎಚ್ಚೆತ್ತುಕೊಂಡ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್.ಎಮ್.ಆರ್ ಬುಧವಾರ ರಾತ್ರಿ ಹತ್ತು ಗಂಟೆಗೆ ಪುತ್ತೂರಿನಲ್ಲಿ ಲೋಕೋಪಯೋಗಿ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ತಕ್ಷಣ ಅನಧಿಕೃತ ಅಂಗಡಿಗಳನ್ನು ತೆರವು ಮಾಡಲು ಸೂಚಿಸಿದ್ದಾರೆ. ಬಳಿಕ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರಿಂಗ್  ಕಡಬ ಮತ್ತು ಬೆಳ್ತಂಗಡಿ ಕಂದಾಯ ಇಲಾಖೆಯ ನೇತೃತ್ವದಲ್ಲಿ ಧರ್ಮಸ್ಥಳ ,ಉಪ್ಪಿನಂಗಡಿ ಪೊಲೀಸರ ಸಹಕಾರದಲ್ಲಿ ಅಂಗಡಿಗಳನ್ನು ಕಟ್ಟಿಂಗ್ ಮೇಷಿನಿಂದ ತುಂಡರಿಸಿ ನಂತರ ಜೆಸಿಬಿ ಮೂಲಕ ಕಾರ್ಯಾಚರಣೆ ಮಾಡಿ ಧ್ವಂಸ ಮಾಡಲಾಗಿದೆ. ಜೊತೆಗೆ ಇನ್ನೂ ಮುಂದೆ ಇಲ್ಲಿ ಮತ್ತೆ ಅಂಗಡಿಗಳನ್ನು ನಿರ್ಮಿಸಿ ವ್ಯವಹಾರ ಮಾಡಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಬೆಳ್ತಂಗಡಿ ಲೊಕಪಯೋಗಿ ಇಲಾಖೆಯ ಇಂಜಿನಿಯರ್ ಗುರುಪ್ರಸಾದ್ ಅವರು ತಿಳಿಸಿದ್ದಾರೆ.


ಇನ್ನೂ ಧ್ವಂಸ ಮಾಡಿದ ವಿಚಾರಕ್ಕೆ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು ‘ನಾವು ಸಾಲ ಮಾಡಿ ಹಣ್ಣು ಹಂಪಲು ತಂದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದೇವೆ’, ಈ ಮೊದಲು ನಿಡ್ಲೆ ಗ್ರಾಮ ಪಂಚಾಯತ್ ಪರವಾನಿಗೆ ನೀಡಿದ್ದರು, ನಂತರ ಅದನ್ನು ನೀಡಲ್ಲಿಲ್ಲ, ಈಗ ಏಕಾಏಕಿ ಬಂದು ನಮ್ಮ ವ್ಯವಹಾರಕ್ಕೆ ತೊಂದರೆ ನೀಡಿದ್ದಾರೆ, ನಮಗೆ ಬೇರೆ ಪರಿಹಾರ ನೀಡಬೇಕೆಂದು’ ಎಂದು ಮನವಿ ಮಾಡಿದ್ದಾರೆ.

ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಲೊಕಪಯೋಗಿ ಇಲಾಖೆಯ ಇಂಜಿನಿಯರ್ ಗುರುಪ್ರಸಾದ್ ಮತ್ತು ತೌಸಿಫ್ ಅಹಮ್ಮದ್, ತಹಶೀಲ್ದಾರ್ ಪೃಥ್ವಿ ಸಾನಿಕಾಂ, ಕಡಬ ಕಂದಾಯ ನಿರೀಕ್ಷಕ ಪೃಥ್ವಿ , ಗ್ರಾಮಲೆಕ್ಕಿಗ ಸಂತೋಷ್ , ಉಪ್ಪಿನಂಗಡಿ ಪಿಎಸ್ಐ ರಾಜೇಶ್ ಮತ್ತು ತಂಡ , ಧರ್ಮಸ್ಥಳ ಪೊಲೀಸರ ತಂಡ ಭಾಗವಹಿಸಿದರು.

error: Content is protected !!