ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ಆಂಬುಲೆನ್ಸ್ ಮತ್ತು ಆಟೋ ಮುಖಾಮುಖಿ ಡಿಕ್ಕಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಮುಗಿಸಿ ಹಿಂತಿರುಗುತ್ತಿದ್ದ ಪ್ರಯಾಣಿಕರು ಆಟೋದಲಿದ್ದ ನಾಲ್ವರು ಪ್ರಾಣಾಪಾಯದಿಂದ

 

 

ಬೆಳ್ತಂಗಡಿ: ಚಾರ್ಮಾಡಿ ಘಾಟ್ ನ ಒಂದನೇ ತಿರುವಿನಲ್ಲಿ ಆಟೋಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಘಟನೆ ಇಂದು ನಡೆದಿದೆ.
ಮಂಗಳೂರಿನಿಂದ ಮೂಡಿಗೆರೆಗೆ ರೋಗಿಯನ್ನು ಬಿಟ್ಟು ಹೋಗುತ್ತಿದ್ದ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಚಾರ್ಮಾಡಿ ಘಾಟ್ ನ ಒಂದನೇ ತಿರುವಿನಲ್ಲಿ ಆಟೋಗೆ ಡಿಕ್ಕಿ ಹೊಡಿದ್ದಾನೆ.

ಆಟೋದಲಿದ್ದ ಪ್ರಯಾಣಿಕರು ಧರ್ಮಸ್ಥಳಕ್ಕೆ ಹೋಗಿ ದರ್ಶನ ಮುಗಿಸಿ ಬರುವಾಗ ಈ ಅಪಘಾತ ನಡೆದಿದ್ದು, ಸದ್ಯ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಆಟೋದಲಿದ್ದ ನಾಲ್ವರಿಗೆ ಗಾಯವಾಗಿದ್ದು ಕಕ್ಕಿಂಜೆ ಆಸ್ಪತ್ರೆಗೆ ರವಾನಿಸಲಾಗಿದೆ.

ಬಣಕಲ್ ಪಟ್ಟಣದ ಆಟೋವಾಗಿದ್ದು ಅಪಘಾತದ ತೀವ್ರತೆಗೆ 2 ವಾಹನಗಳು ಜಖಂಗೊಂಡಿದೆ.

error: Content is protected !!