ಪಟ್ಲ ಪೌಂಡೇಶನ್ ಸೇವಾ ಕಾರ್ಯಗಳು‌ ಮಾದರಿ‌;: ಶಾಸಕ ರಾಜೇಶ್ ನಾಯ್ಕ್ : ಕಲಾವಿದರಿಗೆ ಚೈತನ್ಯ ನೀಡುವ ಕಾರ್ಯ ಟ್ರಸ್ಟ್ ಮಾಡುತ್ತಿದೆ :ಸಂಚಾಲಕ ಶಶಿಧರ ಶೆಟ್ಟಿ ನವಶಕ್ತಿ:  ಪಟ್ಲ ಪೌಂಡೇಶನ್ ಪುಂಜಾಲಕಟ್ಟೆ ಘಟಕದ  5 ನೇ ವರ್ಷದ ವಾರ್ಷಿಕೋತ್ಸವ:

 

 

ಪುಂಜಾಲಕಟ್ಟೆ: :ಕಲಾವಿದನಾಗಿದ್ದುಕೊಂಡು ಇನ್ನೊಬ್ಬ ಕಲಾವಿದನ‌ ನೋವನ್ನು ಅರ್ಥ ಮಾಡಿಕೊಂಡು ಅವರಿಗೆ ಧೈರ್ಯ ತುಂಬುವ ಕೆಲಸ ಪಟ್ಲ ಸತೀಶ್ ಶೆಟ್ಟಿಯವರು ಟ್ರಸ್ಟ್ ಮೂಲಕ ಮಾಡುತಿದ್ದಾರೆ.
ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ಅವರು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆದ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಮಂಗಳೂರು ಪುಂಜಾಲಕಟ್ಟೆ ಘಟಕದ 5 ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಲಾವಿದರ ಮೇಲೆ ಸಂಪೂರ್ಣ ಕಾಳಜಿ ವಹಿಸಿ ಮಾದರಿ ಸೇವಾ ಕಾರ್ಯ ಮಾಡುತ್ತಿರುವ ಪಟ್ಲ ಸತೀಶ್ ಶೆಟ್ಟಿಯವರ ಸ್ಥಾಪಕಾಧ್ಯಕ್ಷತೆಯ ಯಕ್ಷಧ್ರುವ ಟ್ರಸ್ಟ್ ಅಭಿನಂದನೀಯ
ದೇವರ ಪ್ರೀತ್ಯರ್ಥವಾಗಿ ನಡೆಯುವ ಯಕ್ಷಗಾನ ಸೇವೆ ಉತ್ತಮ ಕಾರ್ಯವಾಗಿದೆ.
ಎಂದು ಅವರು ಹೇಳಿದರು.

 

 

ಪಟ್ಲ ಫೌಂಡೇಶನ್ ಟ್ರಸ್ಟ್ ಸಂಚಾಲಕ ಶಶಿಧರ್ ಶೆಟ್ಟಿ ನವಶಕ್ತಿ  ಮಾತನಾಡಿ ತನ್ನೆಲ್ಲ ನೋವನ್ನು ಮರೆಮಾಚಿ ಇನ್ನೊಬ್ಬರ ಸಂತೋಷಕ್ಕಾಗಿ ಶ್ರಮ‌ಪಡುವವನು ಕಲಾವಿದ ಅಂತಹ ಕಲಾವಿದರ ಬದುಕಿಗೆ ಬೆಳಕಾಗಲು ಪಟ್ಲ ಪೌಂಡೇಶನ್ ಟ್ರಸ್ಟ್ ಸ್ಥಾಪಿಸಲಾಗಿದೆ.
ಯಕ್ಷಗಾನ ಕಲಾವಿದರಲ್ಲಿ ಅದೆಷ್ಟೋ ಮಂದಿ ಜೀವನ ಸಾಗಿಸಲು ಪರದಾಡುವ ಸ್ಥಿತಿಯಲ್ಲಿದ್ದಾರೆ ಅಂತಹ ಅಶಕ್ತ ಕಲಾವಿದರ ನೋವಿಗೆ ಧ್ವನಿಯಾಗುವ ಮೂಲಕ
ಯಕ್ಷಗಾನ ಕಲಾವಿದರಿಗೆ ಚೈತನ್ಯ ನೀಡುವ ಕಾರ್ಯವನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ಮಾಡುತ್ತಿದೆ. ಈಗಾಗಲೆ 38 ಘಟಕಗಳು ರಚನೆಯಾಗಿದ್ದು, 7 ವರ್ಷದಲ್ಲಿ ಸುಮಾರು 9 ಕೋಟಿ ರೂ. ಮೊತ್ತದ ಸೇವಾ ಯೋಜನೆಗಳನ್ನು ವಿತರಿಸಲಾಗಿದೆ ಎಂದರು.

 

ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ, ಸತೀಶ್ ಶೆಟ್ಟಿ , ಯಕ್ಷಗಾನದ ಬೆಳವಣಿಗೆಗೆ ಕಲಾಭಿಮಾನಿಗಳು ನೀಡುವ ಪ್ರೋತ್ಸಾಹ, ಪರಿಶ್ರಮ ಅಭಿನಂದನೀಯ ಎಂದ ಅವರು ಪುಂಜಾಲಕಟ್ಟೆ ಘಟಕ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

 

 

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಟ್ರಸ್ಟ್ ಪ್ರ.ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಆಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ , ಪ್ರಗತಿಪರ ಕೃಷಿಕ ಗಣೇಶ್ ಭಟ್ ಕೆದ್ದಳಿಕೆ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಪ್ರವೀಣ ಶೆಟ್ಟಿ ಕುರ್ಡುಮೆ, ಘಟಕ ಗೌರವಾಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಅಧ್ಯಕ್ಷ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ, ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಲಕ್ಷ್ಮೀ ಸಂಜೀವ ಶೆಟ್ಟಿ ಮುಗೆರೋಡಿ, ಅಧ್ಯಕ್ಷೆ ಉಮಾ ಡಿ.ಗೌಡ, ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

error: Content is protected !!