ಕುಡುಮಪುರದಲ್ಲಿ ಲಕ್ಷದೀಪೋತ್ಸವ ಸಂಭ್ರಮ: ವಿದ್ಯುತ್ ದೀಪಾಲಂಕಾರಗಳಿಂದ ಕಣ್ಮನ ಸೆಳೆಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ: 200ಕ್ಕೂ ಅಧಿಕ ವಸ್ತುಪ್ರದರ್ಶನ ಮಳಿಗೆ ಉದ್ಘಾಟನೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ (ನ19) ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ವಿಜೃಂಬಣೆಯಿಂದ ನಡೆಯಲಿದೆ.

ಇಂದು 43 ನೇ ವರ್ಷದ ರಾಜ್ಯಮಟ್ಟದ ವಸ್ತುಪ್ರದರ್ಶನ ಮಳಿಗೆಗಳನ್ನು ಬೆಳ್ತಂಗಡಿ ವಿಧಾಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಉದ್ಘಾಟಸಿದ್ದಾರೆ. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಅತಿಥಿ ಗಣ್ಯರು ಎಲ್ಲಾ ಮಳಿಗೆಗಳಿಗೆ ಭೇಟಿ ನೀಡಿದ್ದಾರೆ.

ಈ ಬಾರಿಯ ವಸ್ತು ಪ್ರದರ್ಶನದಲ್ಲಿರುವ ವಿಶೇಷತೆಗಳ ಬಗ್ಗೆ ಮಾಹಿತಿ ಹಂಚಿಕೊಂಡ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ‘ಕೊರೋನಾದಿಂದ ವಿಚಲಿತರಾದ ನಮಗೆ ಈ ವರ್ಷ ಮತ್ತೆ ವಸ್ತು ಪ್ರದರ್ಶನ ನಡೆಸಲು ಅವಕಾಶ ದೊರೆತಿದೆ. ಜನರಿಗೆ ಮಾಹಿತಿ ಮತ್ತು ಅನೇಕ ತಂತ್ರಜ್ಙಾನದ ಪರಿಚಯ ಮಾಡಕೊಡಲಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಾದ ಪರಿವರ್ತನೆಗಳು, ಅನೇಕ ಯಶಸ್ಸು ಯೋಜನೆಗಳ ಪರಿಚಯವನ್ನು ಗ್ರಾಮೀಣಾಭಿವೃದ್ಧಿ ಶಾಖೆಯಲ್ಲಿ ಮಾಡಲಾಗುತ್ತದೆ, ಬ್ಯಾಂಕ್, ಎಲ್ ಐ ಸಿ , ಪೋಸ್ಟ್ ಆಫೀಸ್ ಹಾಗೂ ಇನ್ನೀತರ ಸರ್ಕಾರಿ ಸಂಸ್ಥೆಗಳು ಆಗಮಿಸಿದ್ದು ಭಕ್ತಾಧಿಗಳಿಗೆ ಬಹಳ ಮಾಹಿತಿ ದೊರಕಲಿದೆ, ಜೊತೆಗೆ ಸಂಜೆ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ನೀವು ಕುಟುಂಬ ಸಮೇತರಾಗಿ ಬಂದು ಮಳಿಗೆಗಳಿಗೆ ಭೇಟಿ ನೀಡಿ ಎಂದಿದ್ದಾರೆ. ಜೊತೆಗೆ ಇಂದು ಪಾದಯಾತ್ರೆಯ ಮೂಲಕ ಸನ್ನಿಧಾನಕ್ಕೆ ಬರುವ ಪಾದಯಾತ್ರಿಗಳನ್ನು, ಹಾಗೂ ಲಕ್ಷದೀಪೋತ್ಸವಕ್ಕೆ ಬರುವ ಎಲ್ಲಾ ಭಕ್ತಾದಿಗಳನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ’ ಎಂದಿದ್ದಾರೆ.

ಧರ್ಮಸ್ಥಳ ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಆಯೋಜಿಸಿದ್ದು ಕೃಷಿ, ಬ್ಯಾಂಕ್‌ಗಳು, ವಾಣಿಜ್ಯ, ಕೈಗಾರಿಕೆಗೆ ಸಂಬಂಧಿಸಿದ 200 ಕ್ಕೂ ಹೆಚ್ಚು ಮಳಿಗೆಗಳಿವೆ. ಒಟ್ಟು 72 ಮಳಿಗೆಗಳಿಗೆ ಉಚಿತ ಪ್ರವೇಶವಿದೆ. 52 ಆಹಾರ ಮಳಿಗೆಗಳಿದ್ದು, . ಬೆಳಗ್ಗೆ ಒಂಭತ್ತು ಗಂಟೆಯಿಂದ ವಸ್ತು ಪ್ರದರ್ಶನ ವೀಕ್ಷಿಸಲು ಉಚಿತ ಅವಕಾಶವಿದೆ. ಇವುಗಳ ಮೇಲುಸ್ತುವಾರಿಯನ್ನು ರತ್ನಮಾನಸದ ನಿಲಯಪಾಲಕರಾದ ಯತೀಶ್ ಕೆ.ಬಳಂಜ ಅವರು ವಹಿಸಿಕೊಂಡಿದ್ದಾರೆ. ವಸ್ತುಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ.

error: Content is protected !!