ಉಜಿರೆಯಲ್ಲಿ ಯಕ್ಷ ಧ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ ಘಟಕದಿಂದ “ಯಕ್ಷ ಸಂಭ್ರಮ” ಕುಣಿತ ಭಜನೆ ಚೆಂಡೆ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ: ಯಕ್ಷ ಪ್ರೇಮಿಗಳಿಗೆ ಸೋಜಿ ಚರುಂಬುರಿ ಸೇರಿದಂತೆ ವಿಶೇಷ ರೀತಿಯ ಆಹಾರ ಸವಿಯುವ ಅವಕಾಶ:

 

 

 

ಬೆಳ್ತಂಗಡಿ:  ಯಕ್ಷ ಧ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ಉಜಿರೆ ರಥ ಬೀದಿಯಲ್ಲಿ ನವೆಂಬರ್ 19 ಶನಿವಾರ ಯಕ್ಷ ಸಂಭ್ರಮ ಕಾರ್ಯಕ್ರಮ ಅಭೂತಪೂರ್ವವಾಗಿ ನಡೆಯಲಿದೆ. ಸಂಜೆ 5 ಗಂಟೆಗೆ ಉಜಿರೆ ಒಷ್ಯನ್ ಪರ್ಲ್ ಹೋಟೆಲಿನಿಂದ ಕುಣಿತ ಭಜನಾ ತಂಡಗಳು, ಚೆಂಡೆ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯು ಜನಾರ್ಧನ ಸ್ವಾಮಿ ದೇವಸ್ಥಾನದ ರಥ ಬೀದಿಯವರೆಗೆ ಆಗಮಿಸಲಿದೆ ಈ ಸಂದರ್ಭದಲ್ಲಿ ಪಟ್ಲ ಪೌಂಡೇಶನ್ ಘಟಕದ ಪದಾಧಿಕಾರಿಗಳು ಸದಸ್ಯರುಗಳು ಹಾಗೂ ಅಭಿಮಾನಿಗಳು ಜೊತೆಯಾಗಲಿದ್ದಾರೆ.ಸಂಜೆ  6 ಗಂಟೆಯಿಂದ ಪಾವಂಜೆ ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ರಾತ್ರಿ 8 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.ಗೌರವಾಧ್ಯಕ್ಷ ಶಶಿಧರ್ ಶೆಟ್ಟಿಯವರ ಸೂಚನೆಯಂತೆ ಯಕ್ಷಾಭಿಮಾನಿಗಳಿಗೆ  ಸೋಜಿ ಚರುಂಬುರಿ ಸೇರಿದಂತೆ ಕಾರ್ಯಕ್ರಮದಲ್ಲಿ ವಿಶೇಷ ಆಹಾರ ಖಾದ್ಯಗಳಿರಲಿದೆ. ಕಡ್ಲೆ-ಅವಲಕ್ಕಿ, ಇಡ್ಲಿ- ಸಾಂಬಾರ್ ಚಪಾತಿ, ಕೂರ್ಮ,ಪತ್ರಡೆ,ಜೈನ್ ಕೇಕ್, ಸೇಮಿಗೆ, ಪಲವು, ಅಂಬಡೆ-ಚಟ್ನಿ, ಹೋಳಿಗೆ ರಸಾಯನ,ಜೊತೆಗೆ , ಟಿ,ಕಾಫಿ,ಚಟ್ಟಂಬಡೆ ಕಷಾಯ ಸೇರಿದಂತೆ ಊಟದ ವ್ಯವಸ್ಥೆ ಇರಲಿದೆ.ರಾತ್ರಿ  ಸುಡುಮದ್ದು ಪ್ರದರ್ಶನವೂ ನಡೆಯಲಿದೆ.

error: Content is protected !!