ವಿದ್ಯುತ್ ಶಾಕ್ ತೋಟದಲ್ಲಿ ಕೆಲಸ ಮಾಡುತಿದ್ದ ವ್ಯಕ್ತಿ ಸಾವು: ಗೇರುಕಟ್ಟೆಯ ರೇಷ್ಮೆ ರೋಡ್ ಬಳಿ ಘಟನೆ:

 

ಬೆಳ್ತಂಗಡಿ ; ಓಡಿಲ್ನಾಳ ಗ್ರಾಮದ ರೇಷ್ಮೆ ರೋಡ್ ಸಮೀಪ ತೋಟದಲ್ಲಿ ಕೆಲಸ ಮಾಡುತಿದ್ದ ಯುವಕನೊಬ್ಬ ವಿದ್ಯುತ್ ಅವಘಡದಿಂದ ಮೃತಪಟ್ಟ ಘಟನೆ ನ.15 ರಂದು ನಡೆದಿದೆ.
ಮೃತ ವ್ಯಕ್ತಿಯನ್ನು ಜಾರ್ಖಂಡ್ ಮೂಲದ ರಿತೇಶ್ ಕಿರ್ಕೆಟ್ಟಾ(22) ಎಂದು ಗುರುತಿಸಲಾಗಿದೆ.
ನ.15 ರಂದು 11.45 ವೇಳೆ ಗೇರು ಕಟ್ಟೆಯ ರೇಷ್ಮೆ ರೋಡ್ ಸಮೀಪದ ಜಾನ್ ತೋಮಸ್ ಎಂಬವರಿಗೆ ಸೇರಿದ್ದ ತೋಟದಲ್ಲಿ ಅಡಿಕೆ ಕೀಳುತ್ತಿದ್ದಾಗ ರಿತೇಶ ಕಿರ್ಕೆಟ್ಟ ಅವರಿಗೆ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯಿಂದ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರೂ ಅಷ್ಟೊತ್ತಿಗಾಗಲೇ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾಗಿ ದೃಢಪಡಿಸಿದ್ದಾರೆ.
ಈ ಬಗ್ಗೆ ಅವರ ಜೊತೆ ಕೆಲಸ ಮಾಡಿಕೊಂಡಿದ್ದ ಜಾರ್ಖಂಡ್ ನ ಲುಕಾಸ್ ಡುಂಗ್ ಡುಂಗ್ ಎಂಬವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

error: Content is protected !!