ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ವಿರುದ್ಧ ಮಾಜಿ ಸಚಿವ ಗಂಗಾಧರ ಗೌಡ ಗರಂ: “ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಅನಾಥವಲ್ಲ, ದೂರದ ಬೆಂಗಳೂರಿನವರಿಗೆ ಟಿಕೆಟ್ ಇಲ್ಲ”!: “ವಸಂತ ಬಂಗೇರ ಅಥವಾ ನನಗೆ ಮುಂದಿನ ಟಿಕೆಟ್”, ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಕಾಂಗ್ರೆಸ್ ಹಿರಿಯ ಮುಖಂಡ:

 

ಬೆಳ್ತಂಗಡಿ: “ಕಳೆದ ನಾಲ್ಕುವರೇ ವರುಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ವಸಂತ ಬಂಗೇರರು ಸೇರಿದಂತೆ ನಾವು ಹಾಗೂ ಇತರರು ರಾತ್ರಿ ಹಗಲು ಪ್ರಾಮಾಣಿಕವಾಗಿ ದುಡಿದಿದ್ದೇವೆ. ಅದರೆ ಮೊನ್ನೆ ಎಲ್ಲಿಂದಲೋ ಬಂದು ಬೆಳ್ತಂಗಡಿಯಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಆಸಕ್ತಿ ತೋರುತ್ತಿರುವುದು ಸರಿಯಲ್ಲ” ಎಂದು ಮಾಜಿ ಸಚಿವ ಹಿರಿಯ ಕಾಂಗ್ರೆಸ್ ನಾಯಕ ಗಂಗಾಧರ ಗೌಡ ಬಹಿರಂಗವಾಗಿ ಬೆಸ್ಟ್ ಪೌಂಡೇಶನ್ ನ ರಕ್ಷಿತ್ ಶಿವರಾಂ  ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅವರು ಮತ್ತು ಮಾಜಿ ಶಾಸಕ ವಸಂತ ಬಂಗೇರ ಅವರು  ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿ ಮಾತನಾಡಿದರು.
ಬೆಳ್ತಂಗಡಿಯಲ್ಲಿ ಹಲವಾರು ಮಂದಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಅನೇಕ ನಾಯಕರುಗಳಿದ್ದಾರೆ.ಅದರೆ. ಯಾರೋ ಬೆಂಗಳೂರಿನ ಉದ್ಯಮಿ ಇಲ್ಲಿ ಬಂದು ಚುನಾವಣೆಗೆ ನಿಲ್ಲುವಷ್ಟು ಅನಾಥವಾಗಿಲ್ಲ.ನಾಯಕರುಗಳಿಗೆ ಬರಗಾಲನೂ ಬಂದಿಲ್ಲ ಬೆಳ್ತಂಗಡಿಯ ಕಾಂಗ್ರೆಸ್ಸಿನಿಂದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ವಸಂತ ಬಂಗೇರ ಅಥವಾ ನಾನು ಸ್ಪರ್ಧಿಸುವುದು ಖಚಿತ ಈ ಬಗ್ಗೆ ಎಂಎಲ್ ಸಿ  ಹರೀಶ್ ಕುಮಾರ್ ಸೇರಿದಂತೆ ಬ್ಲಾಕ್ ಸಮಿತಿ ಮಹಿಳಾ ಸಮಿತಿಗಳು  ಹಾಗೂ   ಸಂಬಂಧ ಪಟ್ಟ ಎಲ್ಲ ಮುಖಂಡರುಗಳು  ಮಾತುಕತೆ ನಡೆಸಿ ತೀರ್ಮಾನಿಸಲಾಗಿದೆ. ಅದ್ದರಿಂದ ಹೊರಗಿನವರಿಗೆ ಟಿಕೇಟ್ ಕೊಡುವ ಪ್ರಶ್ನೆಯೇ ಇಲ್ಲ  ಅನಗತ್ಯ ಗೊಂದಲ ಬೇಡ ಎಂದು ಸ್ಪಷ್ಟ ಪಡಿಸಿದರು.

 

 

 

 

ಈ ಮೂಲಕ ಬಹಿರಂಗವಾಗಿ ಮುಂದಿನ ಬೆಳ್ತಂಗಡಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿರುವ ರಕ್ಷಿತ್ ಶಿವರಾಂ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈಗಾಗಲೇ ಮುಂದಿನ ಅಭ್ಯರ್ಥಿಯಾಗಿ ನಾನೇ ಚುನಾವಣೆಗೆ ಸ್ಪರ್ಧಿಸುವುದಾಗಿ ತಾಲೂಕಿನಾದ್ಯಂತ ಪ್ರಚಾರದ  ತಯಾರಿಲ್ಲಿರುವ  ರಕ್ಷಿತ್ ಶಿವರಾಂ ಅವರಿಗೆ ದೊಡ್ಡ ಹೊಡೆತ ನೀಡಿದಂತಾಗಿದೆ.ಅದಲ್ಲದೇ ಅಭಿನಂದನ್ ಹರೀಶ್ ಕುಮಾರ್ ಕೂಡ ಟಿಕೇಟ್ ಆಕಾಂಕ್ಷಿ ಎಂಬ ಬಗ್ಗೆಯೂ ಮಾತುಗಳು ಕೇಳಿ ಬರುತಿದ್ದು ಒಟ್ಟಾರೆಯಾಗಿ   ಬೆಳ್ತಂಗಡಿ ಕಾಂಗ್ರೆಸ್ಸಿನಲ್ಲಿ ಭಿನ್ನಮತವಿದೆ,   ಮನೆಯೊಂದು ನಾಲ್ಕು ಬಾಗಿಲು ಆದಂತಾಗಿದೆ ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.ಅದಲ್ಲದೇ  ರಂಜನ್ ಗೌಡ ಅವರಿಗೆ ಟಿಕೇಟ್ ನೀಡುವ ವರಸೆ ಇದಾಗಿರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ ಒಟ್ಟಿನಲ್ಲಿ ಬೆಳ್ತಂಗಡಿ ಕಾಂಗ್ರೆಸ್ಸಿನಲ್ಲಿ  ಯಾವುದೂ ಸರಿ ಇಲ್ಲ, ಎಲ್ಲವೂ ಗೊಂದಲದ ಗೂಡಾಗಿದೆ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ‌ಇತ್ತ ಕಾರ್ಯಕರ್ತರೂ ಯಾರನ್ನು ಬೆಂಬಲಿಸಬೇಕು, ಯಾರನ್ನು  ನಾಯಕ ಎಂದು  ಒಪ್ಪಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ.

 

 

 

ಯಾರಿಗೆ ಬಿ ಫಾರಂ?:

ಕಾಂಗ್ರೆಸ್ ಪಕ್ಷವು ಈ ಬಾರಿ ಟಿಕೆಟ್‌ಗಾಗಿ ಅರ್ಜಿಗೆ ₹ 5,000 ಶುಲ್ಕ ನಿಗದಿಪಡಿಸಿದ್ದು ಜೊತೆಗೆ ಅರ್ಜಿಯೊಂದಿಗೆ ₹ 2 ಲಕ್ಷ ಡಿಡಿ ನೀಡಬೇಕು ಎಂದು ಷರತ್ತು ವಿಧಿಸಿದೆ. ಸದ್ಯ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಬಿ ಫಾರಂ ಯಾರ ಕೈಗೆ ಸಿಗಲಿದೆ . ಸಮರ್ಥ ನಾಯಕನಿಲ್ಲದ ಬೆಳ್ತಂಗಡಿ ಕಾಂಗ್ರೆಸ್ಸಿನಲ್ಲಿ ಬಂಡಾಯದ ವೇದಿಕೆ ಸಜ್ಜಾಗುವ ಲಕ್ಷಣಗಳು ಕಂಡು ಬಂದಿದೆ. ಈಗಾಗಲೇ ತಾಲೂಕಿನಾದ್ಯಂತ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿಕೊಂಡು ಜನ ಮನ್ನಣೆಯನ್ನು ಪಡೆದುಕೊಂಡಿರುವ ಯುವ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಪ್ರತಿಸ್ಪರ್ಧಿಯಾಗಿ ಯಾವ ರೀತಿಯಲ್ಲಿ ಪೈಪೋಟಿ ನೀಡಬಹುದು ಎಂಬುವುದು ಎಲ್ಲರೂ ಕುತೂಹಲದಿಂದ ಕಾಯುವಂತಾಗಿದೆ.

error: Content is protected !!