ಒಂಟಿ ಮಹಿಳೆಯಿದ್ದ ಮನೆಯೊಂದಕ್ಕೆ ನುಗ್ಗಿದ ಕಳ್ಳರು: ಮಹಿಳೆಯ ಕೈ-ಕಾಲು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ ಖದೀಮರು: ನಾರಾವಿ ಸಮೀಪದಲ್ಲಿ ಘಟನೆ

ನಾರಾವಿ: ಮಹಿಳೆಯನ್ನು‌ ಕಟ್ಟಿಹಾಕಿ ಚಿನ್ನಾಭರಣ ದೋಚಿರುವ ಘಟನೆ ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದ ಅರಸಿಕಟ್ಟೆ ಎಂಬಲ್ಲಿ ನಡೆದಿದೆ.

ನ.12 ರಂದು ಸುಮಾರು ಸಂಜೆ 7-00 ಗಂಟೆಗೆ ಶಿವಪ್ರಭಾ ಮನೆಯಲ್ಲಿ ಪ್ರಭಾವತಿ ಎಂಬವರು ಒಂಟಿಯಾಗಿದ್ದ ಸಂದರ್ಭ 4 ಜನ ಮುಸುಕುದಾರಿಗಳು ಮನೆಗೆ ಬಂದು ‘ಬಂಗಾರ್ ಪೂರಾ ಕೊರ್ಲೆ’ಎಂದು ಮಹಿಳೆಗೆ ದಮ್ಕಿ ಹಾಕಿದ್ದಲ್ಲದೆ ಕೈ-ಕಾಲು ಕಟ್ಟಿ , ಬಾಯಿಗೆ ಬಟ್ಟೆ ತುರುಕಿಸಿ ಮಹಿಳೆಯ ಕುತ್ತಿಗೆಯಲ್ಲಿದ್ದ ಒಂದು ಚಿನ್ನದ ಸರ, ಕಿವಿಯಲ್ಲಿದ್ದ ಒಂದು ಜೊತೆ ಬೆಂಡೋಲೆಯನ್ನು ಬಲಾತ್ಕಾರವಾಗಿ ತೆಗೆದಿದ್ದಾರೆ. ಅಲ್ಲದೆ 3 ಚಿನ್ನದ ಬಳೆಗಳು,3 ಚಿನ್ನದ ಉಂಗುರಗಳು , ಮೂರು ಚಿನ್ನದ ಚೈನ್ ಹಾಗೂ ಒಂದು ಮೊಬೈಲ್ ದೋಚಿದ್ದಾರೆ. ಸುಮಾರು 15.25 ಪವನ್ ಚಿನ್ನ ಹಾಗೂ , ಮೊಬೈಲ್ , ಒಟ್ಟು 4,60,000ರೂ ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿದ್ದಾರೆ.

ಬಳಿಕ ಮಹಿಳೆ ಕಟ್ಟಿಹಾಕಿದ ಹಗ್ಗದಿಂದ ಬಿಡಿಸಿಕೊಂಡು ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

error: Content is protected !!