ಯಾತ್ರಾರ್ಥಿಗಳ ಟೆಂಪೋ ಚರಂಡಿಗೆ ಬಿದ್ದು ಹಲವರಿಗೆ ಗಾಯ: ಕೊಕ್ಕಡ ಬಳಿ ನಡೆದ ಘಟನೆ: ಅಪಾಯದಿಂದ ಪಾರಾದ ಪ್ರಯಾಣಿಕರು:

 

 

ಬೆಳ್ತಂಗಡಿ: ಟೆಂಪೋವೊಂದು ರಸ್ತೆ ಬದಿಯ ಚರಂಡಿಗೆ ಬಿದ್ದು ಹಲವರಿಗೆ ಗಾಯಗಳಾದ ಘಟನೆ ಕೊಕ್ಕಡ ಬಳಿ ನಡೆದಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರಾರ್ಥಿಗಳಾಗಿ ಆಗಮಿಸಿ ದೇವರ ದರುಶನ ಪಡೆದು  ನಂತರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳುತಿದ್ದ ಟೆಂಪೊವೊಂದು ಚಾಲಕನ ನಿಯಂತ್ರಣ ತಪ್ಪಿ ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಮೂಡುಬೈಲು ಎಂಬಲ್ಲಿ ಚರಂಡಿಗೆ ಬಿದ್ದಿದೆ. ಈ ಸಂದರ್ಭ ವಾಹನದಲ್ಲಿದ್ದ ಸುಮಾರು 8 ಮಂದಿಗೆ ಗಾಯಗಳಾಗಿದ್ದು ತಕ್ಷಣ ಸ್ಥಳೀಯರ ಸಹಕಾರದಿಂದ ಅವರನ್ನು ಕೊಕ್ಕಡದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ .ಅಲ್ಲಿಂದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು  ಬರಬೇಕಾಗಿದೆ.

error: Content is protected !!