ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಳವು ಪ್ರಕರಣ: 2 ತಿಂಗಳು ಕಳೆದರೂ ಪತ್ತೆಯಾಗದ ಕಳ್ಳರ ಸುಳಿವು ..!? ಹಿತರಕ್ಷಣಾ ವೇದಿಕೆ ಮುಂಡೂರು ಸಮಿತಿಯಿಂದ ವಿವಿಧ ಅಧಿಕಾರಿಗಳಿಗೆ ಮನವಿ:

 

 

ಬೆಳ್ತಂಗಡಿ: ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ದೇವರ ವಿಗ್ರಹದ ರಜತ ಕವಚ ,ಬಂಗಾರದ ತಾಳಿ ಇನ್ನಿತರ ಬೆಳ್ಳಿ ವಸ್ತುಗಳು 2 ತಿಂಗಳ ಹಿಂದೆ ಕಳವಾಗಿದ್ದು, ಇಲ್ಲಿಯವರೆಗೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲಿಲ್ಲ. ಇದರಿಂದ ನೊಂದ ಭಕ್ತಾಧಿಗಳು ಹಿಂದೂ ಹಿತರಕ್ಷಣಾ ವೇದಿಕೆ ಮುಂಡೂರು ಎಂಬ ಸಮಿತಿ ರಚಿಸಿ ದೇವಸ್ಥಾನದಲ್ಲಿ ಆದ ಕಳ್ಳತನದ ಆರೋಪಿಗಳನ್ನು ಶೀಘ್ರ ಪತ್ತೆ ಮಾಡಲು ಬೆಳ್ತಂಗಡಿ ಠಾಣಾಧಿಕಾರಿ ಸಹಿತ ಮೇಲಾಧಿಕಾರಿಗಳಿಗೆ ,ತಹಶೀಲ್ದಾರ್ ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ನೀಡಿ ಒತ್ತಡ ತಂದು ತನಿಖೆಯನ್ನು ತೀವ್ರಗೊಳಿಸಿ ಆರೋಪಿಗಳನ್ನು ಹಾಗೂ , ಕಳವಾದ ವಸ್ತುಗಳನ್ನು ಪತ್ತೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

 

ಜುಲೈ 29ರಂದು ರಾತ್ರಿ ಕ್ಷೇತ್ರದಿಂದ ಸುಮಾರು 3,28,000 ರೂ ಮೌಲ್ಯದ ದೇವರ ವಸ್ತುಗಳು ಕಳವಾಗಿತ್ತು. ಮಾರನೇ ದಿನವೇ ಅರ್ಚಕರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಇಲ್ಲಿಯವರೆಗೆ ಕಳ್ಳನನ್ನು ಪತ್ತೆಹಚ್ಚದೆ, ವಿಚಾರಿಸಿದಾಗ ಮಾತ್ರ ಪ್ರಕರಣ ತನಿಖೆಯಲ್ಲಿದೆ ಎಂಬ ಉತ್ತರ ನೀಡುತ್ತಿದ್ದಾರೆ. ಇದರಿಂದ ಬೇಸರಗೊಂಡ ಭಕ್ತಾಧಿಗಳು ಕಳ್ಳರನ್ನು ಶೀಘ್ರವೇ ಪತ್ತೆಹಚ್ಚುವಂತೆ ವಿವಿಧ ಅಧಿಕಾರಿಗಳಿಗೆ ಹಿತರಕ್ಷಣಾ ವೇದಿಕೆ ಮುಂಡೂರು ಸಮಿತಿ ವತಿಯಿಂದ ಮನವಿ ನೀಡಿದ್ದಾರೆ.

.ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಸಂಚಾಲಕ ರಮಾನಂದ ಸಾಲಿಯಾನ್, ದೇವಸ್ಥಾನದ ಅರ್ಚಕ ಹಾಗೂ ಸಮಿತಿಯ ಸಂಚಾಲಕ ರಾಘವೇಂದ್ರ ಭಟ್ ,ಸಂಚಾಲಕರಾದ ಹರಿಶ್ಚಂದ್ರ ಹೆಗ್ಡೆ, ಅಶೋಕ್ ಕುಮಾರ್ ಜೈನ್ ಚಾಮರಾಜ ಸೇಮಿತ ,ಅಶೋಕ್ ಕುಮಾರ್ ಕೊಡಕ್ಕಾಲು,ರಮೇಶ್ ದೇವಾಡಿಗ ಶ್ರೀದರ್ ಅಂಚನ್ ಹಾಗೂ ಸಲಹೆಗಾರ ರಾಜೀವ ಸಾಲಿಯಾನ್ ಇನ್ನಿತರರು ಉಪಸ್ಥಿತರಿದ್ದರು.

error: Content is protected !!