ಗುಂಡು ಹಾರಿಸಿಕೊಂಡು ಪಿಎಸ್ಐ ಆತ್ಮಹತ್ಯೆಗೆ ಯತ್ನ: ಮಂಗಳೂರು ಎನ್ಎಂಪಿಎ ಗೇಟ್ ಬಳಿ ಘಟನೆ:

 

 

ಮಂಗಳೂರು: ಸಿಐಎಸ್ಎಫ್ ನ ಮಹಿಳಾ ಪಿಎಸ್ಐ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನ ಎನ್​ಎಂಪಿಎ  ಪ್ರಮುಖ ದ್ವಾರದ ಗೇಟ್​ ಬಳಿ ನಡೆದಿದೆ.

ಎನ್​ಎಂಪಿಎಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಐಎಸ್ಎಫ್ ನ ಪಿಎಸ್​ಐ ಜ್ಯೋತಿ ಬಾಯಿ ಎಂಬುವರು ಇಂದು ಬೆಳಗ್ಗೆ 6 ಗಂಟೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರ ಪತಿ ಓಂಬೀರ್ ಸಿಂಗ್ ಎಂಆರ್​ಪಿಎಲ್ ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದಾರೆ. ಇವರು ರಾಜಸ್ಥಾನದ ಭಾರತ್ ಪುರ್ ಜಿಲ್ಲೆಯವರು.

ಪ್ರಾಥಮಿಕ ಮಾಹಿತಿ ಪ್ರಕಾರ, ಕುಟುಂಬದೊಳಗಿನ ವಿವಾದದಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಬರೆದಿರುವ ಸೂಸೈಡ್ ನೋಟ್ ಪೊಲೀಸರಿಗೆ ಸಿಕ್ಕಿದೆ. ಗಾಯಗೊಂಡಿರುವ ಜ್ಯೋತಿ ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !!