ಸಾಂಧರ್ಬಿಕ ಚಿತ್ರ.
ಬೆಂಗಳೂರು: 10 ವರ್ಷಗಳ ಹಿಂದೆ ಆಧಾರ್ ಸಂಖ್ಯೆ ಪಡೆದಿರುವ ಮತ್ತು ಅಂದಿನಿಂದ ಈವರೆಗೂ ನವೀಕರಿಸದವರು ಕೊಟ್ಟಿರುವ ಮಾಹಿತಿಯನ್ನು ಪುನಃ ದೃಢೀಕರಿಸಿ ನವೀಕರಿಸಬೇಕು ಎಂದು ಯುಐಡಿಎಐ ಸೂಚಿಸಿದೆ.
ತಪ್ಪು ಮಾಹಿತಿ ಮತ್ತು ನಿಖರತೆ ಕಾಪಾಡಲು ಹತ್ತು ವರ್ಷಗಳ ಹಿಂದೆ ಆಧಾರ್ ಸಂಖ್ಯೆಗೆ ನೀಡಿದ ದಾಖಲೆ, ಮಾಹಿತಿಯನ್ನು ನವೀಕರಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮಂಗಳವಾರ ಕೋರಿದೆ.ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು,ವಿಶಿಷ್ಟ ಗುರುತಿನ ಸಂಖ್ಯೆ ಹೊಂದಿರುವವರು ನಿಗದಿತ ಶುಲ್ಕದೊಂದಿಗೆ ದಾಖಲೆಗಳನ್ನು ನವೀಕರಿಸುವ ಸೌಲಭ್ಯ ನೀಡಲಾಗಿದೆ. ಆಧಾರ್ ಡೇಟಾದಲ್ಲಿ ವೈಯಕ್ತಿಕ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಗೆ ಸಂಬಂಧಿಸಿದ ದಾಖಲೆಗಳನ್ನು ನವೀಕರಿಸಿ ಎಂದು ಹೇಳಿದೆ.ಈ ಸೌಲಭ್ಯವನ್ನು ಆನ್‌ಲೈನ್‌ನಲ್ಲಿಯೂ ಪಡೆಯಬಹುದು. ನವೀಕರಣದ ಯಾವುದೇ ಯೋಜನೆಗೆ ತೊಂದರೆ ಉಂಟಾಗದು. ನಿಖರ ಮಾಹಿತಿಯನ್ನು ಕಲೆ ಹಾಕುವ ಸಲುವಾಗಿ ಈ ನಿಯಮವಾಗಿದೆ ಎಂದು ಸಂಸ್ಥೆ ಹೇಳಿದೆ.