ಕ್ರೀಡೆಯೊಂದಿಗೆ ತುಳುವರ ಆಚಾರ ವಿಚಾರ ಉಳಿಸುವ ಕೆಲಸ ನಡೆಯಲಿ: ಶಶಿಧರ್ ಶೆಟ್ಟಿ : ಉಜಿರೆ ಯುವ ಬಂಟರ ವಿಭಾಗದಿಂದ ‘ಬಂಟೆರೆ ಕೆಸರ್ದ ಗೊಬ್ಬು’ ಕ್ರಿಡಾಕೂಟ:

 

 

 

ಉಜಿರೆ : ವೀಳ್ಯದೆಲೆಯ ಬಳ್ಳಿ ಭೂಮಿಗೆ ಸಾಕ್ಷಿಯಾದರೆ, ವೀಳ್ಯದೆಲೆ ಆಕಾಶಕ್ಕೆ ಸಾಕ್ಷಿ, ಹೀಗೆ ಭೂಮಿ ಮತ್ತು ಆಕಾಶವನ್ನು ಸಾಕ್ಷಿಯಾಗಿ ಇಟ್ಟುಕೊಂಡು ನಾವು ಒಳ್ಳೆಯ ಕೆಲಸ ಮಾಡಬೇಕು,ಕ್ರೀಡೆಯೊಂದಿಗೆ ತುಳುವರ ಆಚಾರ ವಿಚಾರಗಳನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕು ಎಂದು ಉದ್ಯಮಿ ತುಳುಕೂಟ ಬರೋಡಾ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ನವಶಕ್ತಿ ಗುರುವಾಯನಕೆರೆ ಹೇಳಿದರು. ಅವರು ಬಂಟರ ಯಾನೆ ನಾಡವರ ಸಂಘ (ರಿ) ತಾಲೂಕು ಮಹಿಳಾ ಬಂಟರ ವಿಭಾಗ ಬೆಳ್ತಂಗಡಿ, ವಲಯ ಬಂಟರ ಸಂಘ ಉಜಿರೆ ಸಹಕಾರದಲ್ಲಿ ಬೆಳ್ತಂಗಡಿ ತಾಲೂಕು ಯುವ ಬಂಟರ ವಿಭಾಗದ ವತಿಯಿಂದ ಉಜಿರೆ ಶ್ರೀ ದುರ್ಗಾ ನಿಲಯದ ಕಂಬಲ್ದಡ್ಡ ಗದ್ದೆಯಲ್ಲಿ ಆ 02 ಆದಿತ್ಯವಾರ ನಡೆದ ಬಂಟೆರೆ ಕೆಸರ್ದ ಗೊಬ್ಬು-2022 ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

 

ಹಿಂದಿನಿಂದಲೂ ನಾವು ಭೂಮಿಯನ್ನು ತಾಯಿಯೆಂದು, ಮಣ್ಣನ್ನು ದೇವರೆಂದು ಪೂಜಿಸಿಕೊಂಡು, ಕೃಷಿಯನ್ನು ಮೂಲ ಕಸುಬಾಗಿನ್ನಾಗಿಸಿಕೊಂಡು ಬಂದವರು ಅದ್ದರಿಂದಲೇ ಮಣ್ಣನ್ನು ಪವಿತ್ರ ಎಂದು ನಂಬಿಕೊಂಡು ಬಂದವರು. ಇವತ್ತು ಕೆಸರ್ದ ಗೊಬ್ಬು ಎಂಬ ಕ್ರಿಡಾಕೂಟವನ್ನು ಆಯೋಜಿಸುವ ಮೂಲಕ ಮಣ್ಣಿನ ಪವಿತ್ರತೆಯನ್ನು ಈಗಿನ ಸಮಾಜಕ್ಕೆ ಮುಟ್ಟಿಸುವಂತಹ ಕೆಲಸವನ್ನು ಯುವಕರು ಮಾಡುತ್ತಿರುವುದು ಶ್ಲಾಘನೀಯ . ಕಂಬಳದ ಕೋಣಗಳ ಜೊತೆ ಬಂಟೆರೆ ಕೂಟಕ್ಕೆ ಸ್ವಾಗತ ಕೋರಿದ್ದು ನನಗೆ ಬಹಳ ಸಂತೋಷವಾಯಿತು ಎಂದ ಅವರು
ಇಂತಹ ಕ್ರೀಡಾಕೂಟದಲ್ಲಿ ಮಕ್ಕಳಿಗೆ ವಿಶೇಷ ಆಸಕ್ತಿ ಹುಟ್ಟಬೇಕು. ಅದರಲ್ಲೂ ಬಹಳ ಮುಖ್ಯವಾಗಿ ಮುಂಬೈ, ಬೆಂಗಳೂರಿನಲ್ಲಿರುವ ಮಕ್ಕಳಿಗೆ ಇಂತಹ ಆಟಗಳನ್ನು ಪರಿಚಯಿಸುವ ಕಾರ್ಯ ಆಗಬೇಕು. ಈ ರೀತಿಯ ಇನ್ನಷ್ಟು ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಲಿ. ಮಕ್ಕಳಿಗೆ ಈ ಮಣ್ಣಿನ ಮೇಲೆ ಪ್ರೀತಿ ಹುಟ್ಟಲಿ ಎಂದು ಹೇಳಿದರು.

 

 

 

ಹಿರಿಯರಾದ ಸದಾಶಿವ ಶೆಟ್ಟಿ ಮತ್ತು ಸುನಂದ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಈ ಗದ್ದೆಯಲ್ಲಿ ನಡೆಯುವಂತಹ ಕ್ರೀಡಾಕೂಟವು ಜಾಗದ ದೈವ ದೇವರುಗಳ ಆಶೀರ್ವಾದದಿಂದ ಯಾವುದೇ ವಿಘ್ನವಿಲ್ಲದೇ ನಡೆಯಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

 

 

 

ಈ ಸಂದರ್ಭದಲ್ಲಿ ತಾಲೂಕು ಬಂಟರ
ಸಂಘದ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪವತಿ ಆರ್ .ಶೆಟ್ಟಿ, ವಿಜಯ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯರಾಮ ಶೆಟ್ಟಿ ಪಡಂಗಡಿ, ಜಾಗತಿಕ ಬಂಟರ ಸಂಘ ಒಕ್ಕೂಟ ಮಂಗಳೂರು ನಿರ್ದೆಶಕ ಜಯಂತ್ ಶೆಟ್ಟಿ ಕುಂಟಿನಿ, ರಘುರಾಮ ಶೆಟ್ಟಿ “ಸಾಧನಾ” ಸಂಚಾಲಕರು, ಮಾತೃಸಂಘ ತಾಲೂಕು ಸಮಿತಿ,ವಿಠಲ ಶೆಟ್ಟಿ ಶ್ರದ್ಧಾ,ಲಾಯಿಲ, ಉಮೇಶ್ ಶೆಟ್ಟಿ ಶ್ರೀ ದುರ್ಗಾ ಉಜಿರೆ, ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಶೋಭಾ ವಿ. ಶೆಟ್ಟಿ, ನಡೆಯಿತು ಉಪಸ್ಥಿತರಿದ್ದರು.

 

 

 

ಕ್ರೀಡಾಕೂಟದಲ್ಲಿ ಮಹಿಳೆಯರಿಗೆ, ಪುರುಷರಿಗೆ, ಪುಟಾಣಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

 

 

ಸಂಜೆ ಯುವ ವಿಭಾಗದ ಅಧ್ಯಕ್ಚ ಸುಜಯ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಕ್ರಿಡಾಕೂಟದಲ್ಲಿ ಭಾಗವಹಿಸಿದ ತಂಡಗಳಿಗೆ ಬಹುಮಾನ ನೀಡಲಾಯಿತು.ಈ ಸಂದರ್ಭದಲ್ಲಿ ರಾಜುಶೆಟ್ಟಿ ಬೆಂಗೆತ್ಯಾರ್, ರಾಧಾಕೃಷ್ಣ ಶೆಟ್ಟಿ ಹಂಬೆಟ್ಟು, ಪುಷ್ಪರಾಜ್ ಶೆಟ್ಟಿ, ಪ್ರಕಾಶ್ ಶೆಟ್ಟಿ ನೊಚ್ಛ,ರಮೇಶ್ ಶೆಟ್ಟಿ, ಜಯಂತ ಶೆಟ್ಟಿ ಮಡಂತ್ಯಾರ್, ರವೀಂದ್ರ ಶೆಟ್ಟಿ ಉಜಿರೆ, ವನಿತಾ.ವಿ. ರೈ, ವಸಂತ ಶೆಟ್ಟಿ ಶ್ರದ್ಧಾ , ಸುರೇಶ್ ಶೆಟ್ಟಿ ಲಾಯಿಲ, ಪ್ರಸಾದ್ ಶೆಟ್ಟಿ ಎಣಿಂಜೆ, ಕಿರಣ್ ಕುಮಾರ್ ಶೆಟ್ಟಿ,   ಯುವ ವಿಭಾಗದ ಉಪಾಧ್ಯಕ್ಷ ದಿನೇಶ್ ಶೆಟ್ಟಿ, ಕೋಶಾಧಿಕಾರಿ ಶಶಿರಾಜ್ ಶೆಟ್ಟಿ, ಜತೆ ಕಾರ್ಯದರ್ಶಿ ಸಂತೋಷ್ ಚಿಬಿದ್ರೆ, ಸೇರಿಂತೆ ಸದಸ್ಯರು,  ಮಹಿಳಾ ವಿಭಾಗದ ಪದಾಧಿಕಾರಿಗಳು ಸದಸ್ಯರು ಇದ್ದರು. ನಿತೇಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.ವೆಂಕಟರಮಣ ಶೆಟ್ಟಿ ಸ್ವಾಗತಿಸಿ ಯುವ ವಿಭಾಗದ ಕಾರ್ಯದರ್ಶಿ ಅಜೇಯ್ ಮಡಂತ್ಯಾರ್ ಧನ್ಯವಾದವಿತ್ತರು.

error: Content is protected !!