ಕಾಶೀ ಪ್ಯಾಲೇಸ್’, ‘ದಿ ಓಷ್ಯನ್ ಪರ್ಲ್’ಗೆ ಶಾಸಕ ಸಂಜೀವ ಮಠಂದೂರು ಭೇಟಿ:ಸಂಸ್ಥೆಗೆ ಶುಭ ಹಾರೈಸಿದ ಉಜಿರೆಯ ವಿಜಯರಾಘವ ಪಡುವೆಟ್ನಾಯ:

 

 

ಉಜಿರೆ: ನೂತನವಾಗಿ‌ ಲೋಕಾರ್ಪಣೆಗೊಂಡ ಉಜಿರೆಯ ‘ಕಾಶೀ ಪ್ಯಾಲೇಸ್’ನ ದಿ ಓಷ್ಯನ್ ಪರ್ಲ್ ಗೆ ಪುತ್ತೂರು ಶಾಸಕ ಸಂಜೀವ ಮಠಂದೂರು  ಭೇಟಿ ನೀಡಿದರು.

 

 

 

 

ಹೋಟೆಲಿನ ಪ್ರತಿಯೊಂದು   ವ್ಯವಸ್ಥೆಗಳನ್ನು ವೀಕ್ಷಿಸಿದರಲ್ಲದೇ   ಸ್ವಚ್ಛತೆ ಹಾಗೂ ಕಡಿಮೆ ದರದಲ್ಲಿ ಉತ್ತಮ    ಗುಣಮಟ್ಟದ ಆಹಾರ ನೀಡುವ   ಬಗ್ಗೆ  ಶಾಸಕರು   ಮೆಚ್ಚುಗೆ ವ್ಯಕ್ತಪಡಿಸಿ ಶಶಿಧರ್ ಶೆಟ್ಟಿ ಹಾಗೂ ಹೋಟೆಲಿನ ಆಡಳಿತವನ್ನು ಅಭಿನಂದಿಸಿ ಶುಭ ಹಾರೈಸಿದರು.

 

ವಿಜಯರಾಘವ ಪಡುವೆಟ್ನಾಯ ಶುಭಾಶೀರ್ವಾದ:

ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ವಿಜಯರಾಘವ ಪಡುವೆಟ್ನಾಯ ಭೇಟಿ ನೀಡಿ ಶುಭಾಶೀರ್ವಾದ ಮಾಡಿದರು.

 

ಗಣ್ಯರನ್ನು   ಓಷ್ಯನ್ ಪರ್ಲ್ ಮಾಲೀಕರಾದ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ  ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ‘ದಿ ಓಷ್ಯನ್ ಪರ್ಲ್’ನ ಜನರಲ್ ಮ್ಯಾನೇಜರ್ ನಿತ್ಯಾನಂದ ಮೊಂಡಲ್, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಉಪಸ್ಥಿತರಿದ್ದರು.

error: Content is protected !!