ಚಾರ್ಲಿ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಧರ್ಮಸ್ಥಳ ಭೇಟಿ : ಉಜಿರೆಯ ” ಒಷ್ಯನ್ ಪರ್ಲ್” ಗೂ ಭೇಟಿ ನೀಡಿದ ನಾಯಕ ನಟ:

 

 

ಉಜಿರೆ: ಚಾರ್ಲಿ ಚಲನಚಿತ್ರದ ನಟ ರಕ್ಷಿತ್ ಶೆಟ್ಟಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರುಶನ ಪಡೆದು ಪೂಜೆ ಸಲ್ಲಿಸಿದರು.

 

 

ಧರ್ಮಸ್ಥಳದಲ್ಲಿ ಸುರೇಂದ್ರ ಕುಮಾರ್ ಹಾಗೂ  ಹರ್ಷೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿದ ರಕ್ಷಿತ್ ಶೆಟ್ಟಿಯವರನ್ನು ಅವರು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಉಜಿರೆ ಕಾಶೀ ಪ್ಯಾಲೇಸ್ ನ ಓಷ್ಯನ್ ಪರ್ಲ್ ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಓಷ್ಯನ್ ಪರ್ಲ್ ಮಾಲೀಕರಾದ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ದಿ. ಓಷ್ಯನ್ ಪರ್ಲ್ ನ ಜನರಲ್ ಮ್ಯಾನೇಜರ್ ನಿತ್ಯಾನಂದ ಮೊಂಡಲ್, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!