ಉಜಿರೆ “ಓಷ್ಯನ್ ಪರ್ಲ್” ನಲ್ಲಿ ಡಿ.ಹರ್ಷೇಂದ್ರ ಕುಮಾರ್ ಹುಟ್ಟುಹಬ್ಬ ಆಚರಣೆ:ಹೊಟೇಲಿನ ಆತಿಥ್ಯ ಸತ್ಕಾರಕ್ಕೆ ಮೆಚ್ಚುಗೆ:

 

 

ಬೆಳ್ತಂಗಡಿ:ನೂತನವಾಗಿ ಲೋಕಾರ್ಪಣೆಗೊಂಡ ದಿ ಓಷ್ಯನ್ ಪರ್ಲ್ ಉಜಿರೆ, ಧರ್ಮಸ್ಥಳ ಹೋಟೆಲ್ ನಲ್ಲಿ ಎಸ್.ಡಿ. ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅವರ ಹುಟ್ಟುಹಬ್ಬ ಆಚರಣೆ ಅತ್ಯಂತ ಸಂಭ್ರಮದಿಂದ ಜರಗಿತು.

ಡಿ.ಹರ್ಷೇಂದ್ರ ಕುಮಾರ್ ಹಾಗೂ ಸುಪ್ರೀಯಾ ಹರ್ಷೇಂದ್ರ ಕುಮಾರ್ ದಂಪತಿಗಳನ್ನು ಒಷ್ಯನ್ ಪರ್ಲ್ ಉಜಿರೆಯ ಮಾಲೀಕರಾದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅವರು ಹಾಗೂ ಒಷ್ಯನ್ ಪರ್ಲ್ ಗ್ರೂಪ್ ನ ವೈಸ್ ಪ್ರೆಸಿಡೆಂಟ್ ಶ್ರೀ ಬಿ ಎನ್ ಗಿರೀಶ್ ಆತ್ಮೀಯವಾಗಿ ಸ್ವಾಗತಿಸಿ ಹುಟ್ಟು ಹಬ್ಬದ ಶುಭಾಶಯ ಕೋರಿ ಅಭಿನಂದಿಸಿದರು.

 

 

ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ತಂಡ ಯಕ್ಷಗಾನ ನಾಟ್ಯ ವೈಭವದ ಮೂಲಕ ವಿಶೇಷವಾಗಿ ದಂಪತಿಗಳಿಗೆ ದೀಪಾರತಿ ಬೆಳಗುವ ಮೂಲಕ ಶುಭಾಶಯ ಸಲ್ಲಿಸಿದರು.

ಈ ವೇಳೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಮೈತ್ರಿ, ಮಾನ್ಯ, ಆರ್ಯಾಮಾನ್, ಕಿಯಾಂಶ್, ಹಾಗೂ‌ ಹರ್ಷೇಂದ್ರ ಕುಮಾರ್ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದು ಅತ್ಯಂತ ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಖುಷಿ ಪಟ್ಟರಲ್ಲದೇ ಅತಿಥಿ ಸತ್ಕಾರ,ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 

 

 

ಈ ಸಂದರ್ಭದಲ್ಲಿ ಓಷ್ಯನ್ ಪರ್ಲ್ ಸಂಸ್ಥೆಯವರು ವಿಶೇಷವಾಗಿ ನಿರ್ಮಿಸಿದ ಡಿ. ಹರ್ಷೇಂದ್ರ ಕುಮಾರ್ ಅವರ ಜೀವನದ ಹಲವು ಮಜಲುಗಳನ್ನು ಪರಿಚಯಿಸುವ ಕಿರು ಚಿತ್ರವನ್ನು  ಪ್ರಸ್ತುತ ಪಡಿಸಿದರು.

error: Content is protected !!