ಪ್ರತಿಷ್ಠಿತ ಹೋಟೆಲ್ ನಿರ್ಮಾಣ ಉಜಿರೆಗೆ ಹೆಮ್ಮೆ: ಹರ್ಷೇಂದ್ರ ಕುಮಾರ್ ಉಜಿರೆಯ ಹಿರಿಮೆ ಹೆಚ್ಚಿಸಿದ ದಿ ಓಷ್ಯನ್ ಪರ್ಲ್: ಸಂಸದ ನಳಿನ್ ಕುಮಾರ್ ಧರ್ಮಸ್ಥಳದ ಹೆಬ್ಬಾಗಿಲು ಉಜಿರೆಯ ‘ಕಾಶೀ ಪ್ಯಾಲೇಸ್’ ನಲ್ಲಿ ಐಷಾರಾಮಿ ಹೋಟೆಲ್ ಶುಭಾರಂಭ

 

 

 

 

ಬೆಳ್ತಂಗಡಿ: ಅತಿಥಿ ಸೇವೆ ಮತ್ತು ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿಯಾದ ಹೋಟೆಲ್‌ ಓಷ್ಯನ್ ಪರ್ಲ್‌ ಉಜಿರೆಯ ಕಾಶೀ ಪ್ಯಾಲೇಸ್ ನಲ್ಲಿ ಸೆ. 30 ಶುಕ್ರವಾರ ಶುಭಾರಂಭಗೊಂಡಿತು.
ಎಸ್. ಡಿ. ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಉದ್ಘಾಟಿಸಿ, ಅಭಿವೃದ್ಧಿ ಹೊಂದುತ್ತಿರುವ ಉಜಿರೆಯಲ್ಲಿ ಇಂತಹ ಉದ್ಯಮವನ್ನು ಪ್ರಾರಂಭಿಸಲಾಗಿದೆ. ಒಳ್ಳೆಯ ಸುಸಜ್ಜಿತ ಹೋಟೆಲ್‌ ಇಲ್ಲ ಎಂಬ ಕೊರತೆಯನ್ನು ಬರೋಡ ಶಶಿಧರ್ ಶೆಟ್ಟಿ ಮತ್ತು ಜಯರಾಮ್ ಬನನ್ ಅವರು ನೀಗಿಸಿದ್ದಾರೆ. ಪ್ರತಿಷ್ಠಿತ ಹೋಟೆಲ್ ಇಲ್ಲಿ ನಿರ್ಮಾಣವಾಗಿರುವುದು ಉಜಿರೆಗೆ ಹೆಮ್ಮೆ ತಂದಿದೆ ಸಾಗರರತ್ನ ಹೋಟೆಲ್‌ಗಳು ಇಡೀ ದೇಶದೆಲ್ಲೆಡೆ ಸ್ಥಾಪಿಸಲ್ಪಟ್ಟಿದ್ದು ಹೆಸರೇ ಹೇಳುವಂತೆ ಓಷ್ಯನ್ ಪರ್ಲ್ ಸಾಗರದ ಮುತ್ತಿನಂತೆ ನಿರಂತರ ಹೊಳೆಯುತ್ತಿರಲಿ ಎಂದು ಶುಭ ಹಾರೈಸಿದರು.

 

 

ಸಂಸದ ನಳೀನ್ ಕುಮಾರ್ ಮಾತನಾಡಿ, ಲಾಭದ ಉದ್ದೇಶವಿಲ್ಲದೆ ಹುಟ್ಟೂರಿನಲ್ಲಿ ಸೇವೆ ನೀಡುವ ಉದ್ದೇಶದಿಂದ ಇಬ್ಬರು ಖ್ಯಾತ ಉದ್ಯಮಿಗಳಾದ ಶಶಿಧರ್ ಶೆಟ್ಟಿ ಮತ್ತು ಜಯರಾಮ್ ಬನನ್ ಅವರು ನಿರ್ಮಿಸಿರುವ ಐಷಾರಾಮಿ ಹೋಟೆಲ್ ಉಜಿರೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.

 

ಆರ್. ಎಸ್. ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಶುಭ ಹಾರೈಸಿ, ಸೋಲನ್ನು ಯಶಸ್ಸಿನತ್ತ ಕೊಂಡುಹೋದ ಎರಡು ಮುತ್ತುಗಳು ಶಶಿಧರ್ ಶೆಟ್ಟಿ ಮತ್ತು ಜಯರಾಮ ಬನನ್. ದೂರದೃಷ್ಟಿ ಇಟ್ಟುಕೊಂಡು ಉತ್ತಮವಾದ ಉದ್ಯಮವನ್ನು ಪ್ರಾರಂಭಿಸಿ ಇಲ್ಲಿನ ಜನರಿಗೆ ಉತೃಷ್ಟ ಸೇವೆ ನೀಡುವ ಉದ್ದೇಶ ಶ್ಲಾಘನೀಯ ಎಂದರು.

 

 

ಉದ್ಯಮಿ ಶಶಿಧರ್ ಶೆಟ್ಟಿ ಮಾತನಾಡಿ
ಗುಜರಾತ್‌ ಸೇರಿಂತೆ ದೇಶದ ವಿವಿಧ ಭಾಗಗಳಲ್ಲಿ ಕೇಟರಿಂಗ್‌ ಉದ್ಯಮದಲ್ಲಿ ತೊಡಗಿಸಿಕೊಂಡು
ಹುಟ್ಟೂರಿನ ಜನತೆಗೆ ಉತ್ತಮ ಸೇವೆ ನೀಡಬೇಕು ಎಂಬ ಉದ್ದೇಶದಿಂದ ತಾಯಿ ಕಾಶೀ ಶೆಟ್ಟಿ  ಹೆಸರಲ್ಲಿ ‘ಕಾಶೀ ಪ್ಯಾಲೇಸ್’  ಕಟ್ಟಡವನ್ನು ಉಜಿರೆಯಲ್ಲಿ ನಿರ್ಮಿಸಿ ಸುಸಜ್ಜಿತ ಹೋಟೆಲ್‌ ಉದ್ಯಮ, ವಸತಿ ಸೌಲಭ್ಯ ಪ್ರಾರಂಭಿಸಲಾಗಿದೆ.ಅವಕಾಶಗಳು ಬೆಳವಣಿಗೆಗೆ ಕಾರಣ ಎಂಬ ಧ್ಯೇಯದೊಂದಿಗೆ ಇಲ್ಲಿನ ಸಂಪೂರ್ಣ ಕಾಮಗಾರಿಯನ್ನು ಸ್ಥಳೀಯರಿಂದಲೇ ಮಾಡಿಸಿ ಹೆಚ್ಚಿನ ಸಂಖ್ಯೆಯ‌ ಉದ್ಯೋಗವನ್ನು ಸ್ಥಳೀಯರಿಗೆ ಇಲ್ಲಿ ನೀಡಲಾಗಿದೆ ಎಂದರು.

 

 

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನಂತ ಅಸ್ರಣ್ಣ,  ಕಾಶೀ ಅಮ್ಮ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ,ಉಜಿರೆ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್.ಪ್ರಭಾಕರ್, ಎಸ್‌ ಡಿಎಂಇ ಐಟಿ ಮತ್ತು ವಸತಿ ನಿಲಯಗಳ ಆಡಳಿತ ವಿಭಾಗದ ಸಿಇಒ ಪೂರನ್ ಯಶೋವರ್ಮ, ಶಾಸಕರಾದ ಉಮಾನಾಥ ಎ. ಕೋಟ್ಯಾನ್ ಡಾ.ವೈ. ಭರತ್ ಶೆಟ್ಟಿ,ಯು.ರಾಜೇಶ್ ನಾಯ್ಕ್, ಎಂಎಲ್ ಸಿ ಪ್ರತಾಪ ಸಿಂಹ ನಾಯಕ್, ಕೃಷ್ಣ ಪಾಲೇಮಾರ್, ಹರಿಕೃಷ್ಣ ಬಂಟ್ವಾಳ   ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಉಜಿರೆ ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಮತ್ತಿತರರು ಶುಭ ಹಾರೈಸಿದರು.

 

 

ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿವೇಕ್ ರೈ, ಓಷ್ಯನ್ ಪರ್ಲ್ ಗ್ರೂಪ್ ಆಫ್ ಹೋಟೆಲ್ಸ್ ನ ಅಧ್ಯಕ್ಷ ಜಯರಾಮ ಬನನ್,
ಉಪಾಧ್ಯಕ್ಷ ಗಿರೀಶ್ ಬಿ. ಎನ್, ಜನರಲ್ ಮ್ಯಾನೇಜರ್ ಶಿವಕುಮಾರ್, ಪ್ರಾಜೆಕ್ಟ್ ಜನರಲ್ ಮ್ಯಾನೇಜರ್ ನಿತ್ಯಾನಂದ ಮಂಡಲ್ ಮತ್ತಿತರರು ಉಪಸ್ಥಿತರಿದ್ದರು. ಉದ್ಯಮಿ ಶಶಿಧರ ಶೆಟ್ಟಿ ಹಾಗೂ ಕುಟುಂಬಸ್ಥರು ಸ್ವಾಗತಿಸಿದರು.ಪ್ರಕಾಶ್ ಶೆಟ್ಟಿ ನೊಚ್ಚ ವಂದಿಸಿದರು.

 

ಡಾ. ಹೆಗ್ಗಡೆ ದಂಪತಿಗಳಿಂದ ಮೆಚ್ಚುಗೆ :

ಸೆ 29 ಗುರುವಾರ ರಾತ್ರಿ ಜರಗಿದ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ.ಹೇಮಾವತಿ ವೀ. ಹೆಗ್ಗಡೆಯವರು ಇಲ್ಲಿನ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು.

 

ಓಷ್ಯನ್ ಪರ್ಲ್ ವಿಶೇಷತೆ:

ಉಜಿರೆ ಲಲಿತನಗರದ ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಬಳಿ ನಿರ್ಮಾಣವಾಗಿದ್ದು, 3 ಮಹಡಿಗಳ ಐಷಾರಾಮಿ ಹೋಟೆಲ್ ಆಗಿದೆ. 34 ಕೊಠಡಿಗಳನ್ನು ಹೊಂದಿದ್ದು. ಇಲ್ಲಿ 34 ರೂಮುಗಳಿದ್ದು, 31 ಎಕ್ಸ್ ಕ್ಯೂಟಿವ್ ಸೂಟು ರೂಮ್ ಗಳು, 2 ಸೂಟ್ ರೂಮ್ ಗಳು ಮತ್ತು 1ಪ್ರೆಸಿಡೆಂಟ್ ಸೂಟ್ ರೂಮ್ ಹೊಂದಿದೆ.

ಪೆಸಿಫಿಕ್

ಸುಮಾರು 200 ಜನರಿಗೆ ಅವಕಾಶ ಕಲ್ಪಿಸುವ ಅತ್ಯಾಧುನಿಕ ಕಾನ್ಫರೆನ್ಸ್ ಹಾಲ್
ಹೊಂದಿದೆ ಎಂದು‌ ಮಾಹಿತಿ ನೀಡಿದರು.

ಸಾಗರ ರತ್ನ’ ಬ್ರಾಂಡ್ ಸಸ್ಯಾಹಾರಿ ರೆಸ್ಟೋರೆಂಟ್:

140 ಮಂದಿಯ ಆಸನ ವ್ಯವಸ್ಥೆ ಸಾಮರ್ಥ್ಯ ಹೊಂದಿರುವ ‘ಸಾಗರ ರತ್ನ’ ಬ್ರಾಂಡ್ ಸಸ್ಯಾಹಾರಿ ರೆಸ್ಟೋರೆಂಟ್, 50 ಮಂದಿ ಕುಳಿತುಕೊಂಡು ತಿನ್ನುವ ಮಾಂಸಾಹಾರಿ ರೆಸ್ಟೋರೆಂಟ್ ಇದೆ. ಜೊತೆಗೆ ಆರೋಗ್ಯ ವರ್ಧನೆಗೆ ಸಹಕಾರಿಯಾಗುವಂತೆ ಓಷ್ಯನ್ ಪರ್ಲ್ ಜಿಮ್ ನಿರ್ಮಿಸಲಾಗಿದೆ. ಮುಖ್ಯವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತರು, ಯಾತ್ರಾರ್ಥಿಗಳಿಗೆ ಮಂಜುನಾಥನ ದೇವಸ್ಥಾನ ಭೇಟಿ ನೀಡುವವರಿಗೆ ಓಷ್ಯನ್ ಪರ್ಲ್‌ ಸಹಕಾರಿಯಾಗಲಿದೆ

 

 

error: Content is protected !!