ಉಜಿರೆ ಅಗ್ನಿ ಅವಘಡ,ಅಂಗಡಿಗಳಿಗೆ ಹಾನಿ:

 

 

ಬೆಳ್ತಂಗಡಿ:ಉಜಿರೆ ಪೇಟೆಯ  ಚಾರ್ಮಾಡಿ ರಸ್ತೆಯಲ್ಲಿರುವ ಹಾಸಿಗೆ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ದಾಸ್ತಾನು ಇರಿಸಿದ್ದ ಹತ್ತಿಗೆ ಬೆಂಕಿ ತಗುಲಿದ ಘಟನೆ ನಡೆದಿದೆ.
ಅದಲ್ಲದೇ ಅಂಗಡಿ ಸಮೀಪದ ತರಕಾರಿ, ಮೊಬೈಲ್, ಜ್ಯೂಸ್ ಹಾಗೂ ಬಟ್ಟೆ ಅಂಗಡಿಗಳಿಗೆ ಬೆಂಕಿ ಆವರಿಸಿದೆ.ತಕ್ಷಣ  ಅಗ್ನಿ ಶಾಮಕ  ಇಲಾಖೆಗೆ ಮಾಹಿತಿ ನೀಡಿ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದೆ. ಬೆಂಕಿ ಅವಘಡದಿಂದ   ಲಕ್ಷಾಂತರ ರೂ. ಮೌಲ್ಯದ ಸ್ವತ್ತು ನಾಶವಾಗಿದೆ ಎಂದು ತಿಳಿದು ಬಂದಿದೆ.

 

error: Content is protected !!