ನಾಪತ್ತೆಯಾಗಿದ್ದ ವೃದ್ಧೆ, ಮನೆ ಬಳಿಯ ಬಾವಿ ಕಟ್ಟೆ ಬಳಿ ಪತ್ತೆ!: ರಸ್ತೆಯಲ್ಲಿ ರಕ್ತ, ಚಪ್ಪಲಿ ಕಂಡು ಗಾಬರಿಗೊಂಡಿದ್ದ ಸ್ಥಳೀಯರು:‌ ಕೊನೆಗೂ ಸುಖಾಂತ್ಯ ಕಂಡ ಪ್ರಕರಣ, ಊಹಾಪೋಹಗಳಿಗೆ ತೆರೆ

 

 

ಬೆಳ್ತಂಗಡಿ: ಹಾಲಿನ ಡಿಪೋಗೆ ಹಾಲು ಕೊಂಡುಹೋಗಿ ಅನುಮಾನಸ್ಪದ ರೀತಿಯಲ್ಲಿ ನಾಪತ್ತೆಯಾಗಿ ಸ್ಥಳೀಯವಾಗಿ ಹಲವು ಅನುಮಾನಗಳಿಗೆ ಕಾರಣವಾಗಿದ್ದ ಮೇಲಂತಬೆಟ್ಟು ಗ್ರಾಮದ ಪಡಿಬೆಟ್ಟು  ಪಡಿಬೆಟ್ಟು ಎಂಬಲ್ಲಿಯ ಯಮುನಾ ಆಚಾರ್ಯ ಅವರು ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದ್ದ ಪ್ರಕರಣ ಸುಖಾಂತ್ಯಗೊಂಡಿದೆ.
ಇವರು ಇಂದು ಬೆಳಿಗ್ಗೆ ಎಂದಿನಂತೆ ಮೇಲಂತಬೆಟ್ಟು ಹಾಲಿನ ಡಿಪೋಗೆ ಹಾಲು ಕೊಂಡೊಗಿದ್ದು ತುಂಬಾ ಹೊತ್ತಾದರೂ ಮನೆಗೆ ಬಾರದೆ ಇದ್ದಾಗ ಹಾಲಿನ ಡಿಪೋದಲ್ಲಿ ಈ ಬಗ್ಗೆ ಮನೆಯವರು ವಿಚಾರಿಸಿದಾಗ ಹಾಲು ತಂದಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ತಕ್ಷಣ ಮನೆಯವರು ಅವರನ್ನು ಹುಡುಕಿಕೊಂಡು ಹೋದಾಗ ಮನೆಯಿಂದ ಸ್ವಲ್ಪ ದೂರದಲ್ಲಿ ರಸ್ತೆಯಲ್ಲಿ ಹಾಲು ಚೆಲ್ಲಿತ್ತಲ್ಲದೆ‌ ರಕ್ತ ಹಾಗೂ ಚಪ್ಪಲಿ ಪತ್ತೆಯಾಗಿ ಹಾಲಿನ ಕ್ಯಾನ್ ಹಾಗೂ ಅವರು ನಾಪತ್ತೆಯಾಗಿದ್ದರು .ಈ ಬಗ್ಗೆ ಆತಂಕಕ್ಕೊಳಗಾದ ಮನೆಯವರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ ಅವರು ಬಂದು ನೋಡಿದಾಗ ಸುತ್ತಮುತ್ತ ಹುಡುಕಾಡಿ ಯಾವುದಾದರೂ ಅಪರಿಚಿತ ವಾಹನ ಡಿಕ್ಕಿ ಹೊಡದಿದಿಯೋ ಎಂಬ ಸಂಶಯದಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಗದಿದ್ದಾಗ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಂದ ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಅದರೆ ಅಷ್ಟೊತ್ತಿಗಾಗಲೇ ಮನೆ ಬಳಿಯ ಬಾವಿ ಸಮೀಪ ಅವರು ಪತ್ತೆಯಾಗಿದ್ದಾರೆ.ಅವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಹಾಲು ಕೊಂಡೊಗುವ ಸಂದರ್ಭ ಕಾಲು ಎಡವಿ ಬಿದ್ದು ಮುಖಕ್ಕೆ ಗಾಯವಾಗಿದ್ದು ಹಾಲು ಚೆಲ್ಲಿತ್ತು ನಂತರ ಹಾಲಿನ ಕ್ಯಾನ್ ಸಮೀಪದ ಗುಡ್ಡದಲ್ಲಿ ಇಟ್ಟು  ಬಾವಿ ಬಳಿ ಬಂದ್ದು ಕುಳಿತುಕೊಂಡಿದ್ದರು ಎನ್ನಲಾಗಿದೆ.ಮೇಲ್ನೊಟ್ಟಕ್ಕೆ ಕುಡಿದು ಈ ರೀತಿ ವರ್ತಿಸಿರಬಹುದು ಎಂಬ ಮಾಹಿತಿಯನ್ನು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಹಲವು ರೀತಿಯ ಕುತೂಹಲ ಮೂಡಿಸಿದ್ದ ಪ್ರಕರಣವು ಕೊನೆಗೂ ಸುಖಾಂತ್ಯಗೊಂಡಿದೆ.

error: Content is protected !!