ಕೊಕ್ಕಡ: ಮಹಿಳೆಯ ಸಂಶಯಾಸ್ಪದ ಸಾವು ಪ್ರಕರಣ: ಕುಡಿದ ಮತ್ತಿನಲ್ಲಿ ಪತ್ನಿಗೆ ಹೊಡೆದು ಗಂಡನಿಂದಲೇ ಕೊಲೆ:

 

 

ಬೆಳ್ತಂಗಡಿ:  ಮಹಿಳೆಯೊಬ್ಬರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಕೊಕ್ಕಡ ಸಮೀಪ ಆ 30 ರಂದು ನಡೆದಿದ್ದು ಇದು ಆಕಸ್ಮಿಕವಲ್ಲ ಕೊಲೆ ಎಂದು ತಿಳಿದು ಬಂದಿದೆ. ಕುಡಿತದ ಮತ್ತಿನಲ್ಲಿ ಗಂಡನೇ ಹೆಂಡತಿಗೆ ಹೊಡೆದು ಕೊಂದಿರುವ ಬಗ್ಗೆ  ತನಿಖೆಯಿಂದ ತಿಳಿದು ಬಂದಿದ್ದು ಆರೋಪಿಯನ್ನು ಕೊಲೆ ಪ್ರಕರಣ ದಾಖಲಿಸಿ ಪೊಲೀಸರು ನ್ಯಾಯಾಲಕ್ಕೆ ಹಾಜರಿಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

 

 

 

ಘಟನೆಯ ವಿವರ:

ಕೊಕ್ಕಡದ ಸಮೀಪದ  ಅಗರ್ತ ಎಂಬಲ್ಲಿಯ ಗಣೇಶ್ ಗೌಡ ಎಂಬವರ ಪತ್ನಿ ಮೋಹಿನಿ ಎಂಬವರು ಆಗಸ್ಟ್‌ 30 ರಂದು ಬೆಳಿಗ್ಗೆ  ಸಂಶಯಾಸ್ಪದ ರೀತಿಯಲ್ಲಿ ಬಿದ್ದು ಸಾವನ್ನಪ್ಪಿದ್ದ ರೀತಿಯಲ್ಲಿ  ಮಹಿಳೆ ಪತ್ತೆಯಾಗಿದ್ದು ಹಣೆಗೆ ಗಾಯಗಳಾಗಿದ್ದವು ಕಳೆದ ಎರಡು ವರ್ಷಗಳಿಂದ ಅನಾರೋಗ್ಯವಿತ್ತು ಅಲ್ಲದೇ ದಂಪತಿಗಳು ಕುಡಿತದ ಚಟ ಹೊಂದಿದ್ದರು ಇದರಿಂದಾಗಿ ರಾತ್ರಿ ಮನೆಯಲ್ಲಿ ಜಗಳ ನಡೆಯುತಿತ್ತು ಅದಲ್ಲದೇ   ಮಹಿಳೆ ಕಳೆದ ಕೆಲವು ದಿನಗಳ ಹಿಂದೆ ಬಿದ್ದು ಗಾಯಮಾಡಿಕೊಂಡಿದ್ದರು  ಎಂದು ಸ್ಥಳೀಯರು ಮಾಹಿತಿ ನೀಡಿದ್ದು   ಈ ಹಿನ್ನೆಲೆಯಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರಬಹುದು ಎಂದು ಅನುಮಾನಿಸಲಾಗಿತ್ತು. ಅದರೆ ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತಿದ್ದ ಗಂಡ ಗಣೇಶ ಗೌಡನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಕುಡಿತದ ಮತ್ತಿನಲ್ಲಿ ಹೆಂಡತಿಗೆ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.ಅದಲ್ಲದೇ ಮರಣೋತ್ತರ ಪರೀಕ್ಷೆಯಲ್ಲೂ ಮೃತ ದೇಹದಲ್ಲಿ ಅಲ್ಲಲ್ಲಿ ಗಾಯವಾಗಿರುವ ಬಗ್ಗೆ ವೈದ್ಯರು ಧೃಡಪಡಿಸಿದ್ದಾರೆ. ಎಂದು ತಿಳಿದು ಬಂದಿದೆ. ಇವರ 6 ವರ್ಷದ ಮಗನನ್ನು ಮಕ್ಕಳ ಪೋಷಣಾ ಕೇಂದ್ರಕ್ಕೆ ಈಗಾಗಲೇ ಸೇರಿಸಲಾಗಿದೆ.

error: Content is protected !!