ಮೇಲಂತಬೆಟ್ಟು ಹಾಲು ಕೊಂಡೋಗಿದ್ದ ಮಹಿಳೆ ಅನುಮಾನಸ್ಪದ ರೀತಿಯಲ್ಲಿ ನಾಪತ್ತೆ: ರಕ್ತದ ಕಲೆ, ಚಪ್ಪಲಿ ಮಾರ್ಗದಲ್ಲಿ ಪತ್ತೆ

 

 

 

ಬೆಳ್ತಂಗಡಿ: ಹಾಲಿನ ಡಿಪೋಗೆ ಹಾಲು ಕೊಂಡುಹೋಗಿದ್ದ ವೃದ್ಧೆಯೊಬ್ಬರು ಅನುಮಾನಸ್ಪದ ರೀತಿಯಲ್ಲಿ ನಾಪತ್ತೆಯಾದ ಘಟನೆ ಮೇಲಂತಬೆಟ್ಟು ಗ್ರಾಮದ ಪಡಿಬೆಟ್ಟು ಎಂಬಲ್ಲಿ ಸೆ 03 ಬೆಳಿಗ್ಗೆ  ನಡೆದಿದೆ.
ಎಂದಿನಂತೆ ಬೆಳಿಗ್ಗೆ 6.30 ರ ಸುಮಾರಿಗೆ ಪಡಿಬೆಟ್ಟು ಎಂಬಲ್ಲಿಯ ಯಮುನಾ ಆಚಾರ್ಯ (63) ಎಂಬವರು ಮನೆಯಿಂದ ಸ್ವಲ್ಪ ದೂರದಲ್ಲಿರುವ  ಮೇಲಂತಬೆಟ್ಟು ಹಾಲಿನ ಡಿಪೋಗೆ  ಹಾಲು ಕೊಂಡೊಗಿದ್ದು ತುಂಬಾ ಹೊತ್ತಾದರೂ ಮನೆಗೆ ಹಿಂತಿರುಗದೇ ಇದ್ದಾಗ ಹಾಲಿನ ಡಿಪೋದಲ್ಲಿ   ಮನೆಯವರು ವಿಚಾರಿಸಿದಾಗ  ಹಾಲು ತಂದಿಲ್ಲ ಎಂಬ ಮಾಹಿತಿ  ತಿಳಿಸಿದರೆನ್ನಲಾಗಿದೆ.

 

 

ಮನೆಯರು ಈ ಬಗ್ಗೆ ಹುಡುಕಿಕೊಂಡು ಹೋದಾಗ  ರಸ್ತೆ ಬದಿಯಲ್ಲಿ  ಹಾಲು  ಚೆಲ್ಲಿತ್ತು ಅದಲ್ಲದೆ  ರಕ್ತದ ಕಲೆ ಹಾಗೂ  ಅವರ ಚಪ್ಪಲಿ ಪತ್ತೆಯಾಗಿದ್ದು   ಅದರೆ ಅವರೂ ಎಲ್ಲೂ ಪತ್ತೆಯಾಗಿಲ್ಲ  ಅದಲ್ಲದೇ ಹಾಲಿನ ಕ್ಯಾನ್ ಕೂಡ ಇರಲಿಲ್ಲ  ತಿಳಿದು ಬಂದಿದೆ.ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆಯೋ ಅಥವಾ  ಇನ್ನೇನಾದರೂ  ಅನಾಹುತ  ಆಗಿದೆಯೇ ಎಂದು ತನಿಖೆಯಿಂದ ತಿಳಿದು ಬರಬೇಕಾಗಿದೆ.

 

 

 

ಸ್ಥಳೀಯ ಆಸ್ಪತ್ರೆಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಅಲ್ಲೂ  ಪತ್ತೆಯಾಗಿಲ್ಲ ಸ್ಥಳೀಯರು ಸುತ್ತಮುತ್ತ ಹುಡುಕಾಟ ನಡೆಸುತಿದ್ದಾರೆ.  ಸ್ಥಳಕ್ಕೆ ಬೆಳ್ತಂಗಡಿ  ಪೊಲೀಸರು  ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದಾರೆ.

error: Content is protected !!