ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ನಡ: ಆಟಿಡೊಂಜಿ ದಿನ ಕಾರ್ಯಕ್ರಮ :

 

 

ಬೆಳ್ತಂಗಡಿ:ನಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ಮಹಿಳಾ ಘಟಕ ಹಾಗೂ ಯುವ ವೇದಿಕೆ ವತಿಯಿಂದ  ಆಟಿಡೊಂಜಿ ದಿನ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಆಗಸ್ಟ್ 14 ರಂದು ನಡ ಅಂಬೇಡ್ಕರ್ ಸಭಾಭವನದಲ್ಲಿ  ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಘಟಕದ ಅಧ್ಯಕ್ಷರಾದ ಹೇಮಾವತಿ ಸೋಮನಾಥ ಗೌಡ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾದ ಶ್ರೀಯುತ ಕುಶಾಲಪ್ಪ ಗೌಡ ಪೂವಾಜೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಟಿ ತಿಂಗಳ ಆಚರಣೆಯ ಬಗ್ಗೆ ಮೆಚ್ಚುಗೆಯ ಮಾತನಾಡಿ ಮಹಿಳಾ ಘಟಕ ಹಾಗೂ ಸಂಘಟನೆ ಇನ್ನಷ್ಟು ಬಲಗೊಳ್ಳಲು ಸೂಕ್ತ ಮಾರ್ಗದರ್ಶನವನ್ನು ತಮ್ಮ ಭಾಷಣದ ಮೂಲಕ ನೀಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ ಕಡಿರುದ್ಯಾವರ ಮಾತನಾಡಿ ಸಂಘದ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆ ಕಾರ್ಯದರ್ಶಿಗಳಾದ ಶ್ರೀನಾಥ್ ಕೆಎಂ ಕಾರ್ಯಕ್ರಮದಲ್ಲಿ ಭಾಗವಹಿಸಿ ನಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಉಮಾ ಡಿ ಗೌಡ ಪಾಲ್ಗೊಂಡು ಆಟಿಯ ಮಹತ್ವದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು ಈ ವರ್ಷದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು ನಾಟಿ ವೈದ್ಯರುಗಳಾದ ಆನಂದ ಗೌಡ ಹೊಕ್ಕಿಲ ಶ್ರೀಮತಿ ಈರಮ್ಮ ಜನಪದ ಕಲೆ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಯುವ ವೇದಿಕೆ ಅಧ್ಯಕ್ಷರಾದ ಶ್ರೀಯುತ ಯಶವಂತ ಗೌಡ ಬನಂದೂರ್ ಗ್ರಾಮದ ಉಸ್ತುವಾರಿ ಪ್ರಮೋದ್ ದಿಡುಪೆ ಯುವ ವೇದಿಕೆ ಅಧ್ಯಕ್ಷರಾದ ವಸಂತ್ ವಿಜಿ ಕೂಲ್ ಗೌರವಾಧ್ಯಕ್ಷರಾದ ವಿವೇಕಾನಂದ ಗೌಡ ಗ್ರಾಮ ಸಮಿತಿ ಅಧ್ಯಕ್ಷರಾದ ಪದ್ಮನಾಭ ಗೌಡ ಉಪಸ್ಥಿತರಿದ್ದರು ಸ್ವಜಾತಿ ಬಾಂಧವರ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಯಾರಿಸಿದ ಬಗೆಬಗೆಯ ಆಟಿ ತಿಂಗಳ ವಿಶೇಷ ತಿನಿಸುಗಳನ್ನು ತಂದು ಒಟ್ಟಿಗೆ ಎಲ್ಲರಿಗೂ ಹಂಚಿ ಸಹಭೋಜನವನ್ನು ಸವಿಯಲಾಯಿತು ಕಾರ್ಯಕ್ರಮದಲ್ಲಿ ಹೊಸ ವಧು-ವರರನ್ನು ಗುರುತಿಸಲಾಯಿತ ಕಾರ್ಯಕ್ರಮದ ಸ್ವಾಗತವನ್ನು ಮಹಿಳಾ ಘಟಕದ ಗೌರವಾಧ್ಯಕ್ಷರಾದ ಮಮತ ಶ್ರೀನಾಥ್ ಅವರು ಮಾಡಿದರು ಪ್ರಾರ್ಥನೆಯನ್ನು ಕುಮಾರಿ ದೀಕ್ಷಿತ ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಶ್ರೀಮತಿ ತುಳಸಿ ಹರಿಚಂದ್ರ ಗೌಡ ಇವರು ವಾಚಿಸಿದರು ಸನ್ಮಾನಿತರ ಪರಿಚಯವನ್ನು ಶ್ರೀಮತಿ ಪವಿತ್ರ ದಿನೇಶ್ ಗೌಡ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ಶ್ರೀಮತಿ ವಿನುತಾ ಹಾಗೂ ಪ್ರತಿಭಾ ಪುರಸ್ಕಾರಗಳ ವಿದ್ಯಾರ್ಥಿಗಳ ವರದಿಯನ್ನು ಶ್ರೀಮತಿ ಲಲಿತಾ ಸುಭಾಷ್,ಇವರು ಮಾಡಿದರು ಧನ್ಯವಾದವನ್ನು ರತ್ನಾವತಿ ಲೋಕೇಶ್ ಹಾಗೂ ಕಾರ್ಯಕ್ರಮದ ನಿರ್ವಹಣೆಯನ್ನು ಉಪನ್ಯಾಸಕಿಯಾದ ಶ್ರೀಮತಿ ಉಮಾ ರುಕ್ಮಯ ಗೌಡ ನಡೆಸಿಕೊಟ್ಟರು

error: Content is protected !!