ಬಿಎಸ್ ಎನ್ ಎಲ್ ನಿವೃತ್ತ ಉದ್ಯೋಗಿ ರಾಜೇಂದ್ರ ನಾಯ್ಕ್ ಪಕ್ಕಿದಕಲ ನಿಧನ

 

 

ಬೆಳ್ತಂಗಡಿ: ಬಿಎಸ್ಎನ್ಎಲ್ ನಿವೃತ್ತ ಉದ್ಯೋಗಿ ಮಂಗಳೂರಿನಲ್ಲಿ ಜೆಇ ಆಗಿದ್ದ ರಾಜೇಂದ್ರ ನಾಯ್ಕ್ ಪಕ್ಕಿದಕಲ ಅವರು ಅಲ್ಪಕಾಲದ ಅನಾರೋಗ್ಯದಿಂದ ಆ17 ರಾತ್ರಿ ನಿಧನ ಹೊಂದಿದ್ದಾರೆ.ಕಳೆದ 4 ದಿನಗಳ ಹಿಂದೆ  ಸಣ್ಣ  ಹೃದಯಾಘಾತಕ್ಕೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು .  ಅದರೆ  ಕಳೆದ ಮಧ್ಯರಾತ್ರಿ 2 ಗಂಟೆ ಸುಮಾರಿಗೆ  ಆರೋಗ್ಯದಲ್ಲಿ ಏರುಪೇರಾಗಿದ್ದು ತಕ್ಷಣ ಆಸ್ಪತ್ರೆಗೆ ಕೊಂಡೊಗುವಷ್ಟರಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತನ್ನನ್ನು ತಾನು ಗುರುತಿಸಿಕೊಂಡಿರುವ ಅವರು ಬೆಳ್ತಂಗಡಿಯ ಆಶಾ ಯಂಗ್ ಸ್ಟರ್ ಕ್ಲಬ್ ಸದಸ್ಯರಾಗಿ , ಜೆಸಿಐ ಸದಸ್ಯರಾಗಿ, ಮೇಲಂತಬೆಟ್ಟು ಬದಿನೆಡೆ ನಾಗಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ತಂಗಡಿ ಶಾರದೋತ್ಸವ ಸಮಿತಿಯ ಅಧ್ಯಕ್ಷರಾಗಿ, ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿಯಾಗಿ ಹಾಗೂ ವಿವಿಧ ಯುವಕ ಮಂಡಲಗಳ ಸದಸ್ಯರಾಗಿ ಅದಲ್ಲದೇ ನಾಟಕ ಕಲಾವಿದರಾಗಿ ಗುರುತಿಸಿಕೊಂಡಿದ್ದರು.ಎಲ್ಲರೊಂದಿಗೆ ಆತ್ಮೀಯರಾಗಿ ಇರುತಿದ್ದ ಅವರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ಅಂತಿಮ ಸಂಸ್ಕಾರ ಲಾಯಿಲದ ಮುಕ್ತಿಧಾಮದಲ್ಲಿ ಇಂದು ಮಧ್ಯಾಹ್ನ ನೆರವೇರಲಿದೆ .

error: Content is protected !!