ಸಂಘಟನೆ ಬಲಿಷ್ಠವಾದಲ್ಲಿ ಸಮುದಾಯದ ಅಭಿವೃದ್ಧಿ: ರಾಮಚಂದ್ರ ಕೆಂಬಾರೆ ತಾಲೂಕು ಮರಾಟಿ ಸಮಾಜ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ, ಮರಾಟಿ ಆರೋಗ್ಯ ನಿಧಿ ಹಸ್ತಾಂತರ ಮರಾಟಿ ಗೋಲ್ಡನ್ ಸ್ಟಾರ್ ಪದಕ ಪುರಸ್ಕಾರ ಘೋಷಣೆ

 

 

ಬೆಳ್ತಂಗಡಿ: ಮರಾಟಿ ಸಮುದಾಯದ ಯುವ ಪೀಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುವ ಮೂಲಕ ಸಂಘದ ಬೆಳವಣಿಗೆಗೆ ಕೊಡುಗೆ ನೀಡಬೇಕಾದ ಅವಶ್ಯಕತೆ ಇದೆ. ಸಂಘಟನೆ ಬಲಿಷ್ಠವಾದಲ್ಲಿ ಸಮುದಾಯದ ಅಭಿವೃದ್ಧಿ‌ ಸಾಧ್ಯ. ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಸಾಧನೆಗೆ ಪ್ರೇರೇಪಣೆ ನೀಡುವ ಕಾರ್ಯವಾಗಿದೆ ಎಂದು ಮೂಡಬಿದಿರೆ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಚಂದ್ರ ಕೆಂಬಾರೆ ಹೇಳಿದರು.
ಅವರು ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಮರಾಟಿ ಆರೋಗ್ಯ ನಿಧಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ನಮ್ಮ ನಮ್ಮ ಕೆಲಸಗಳನ್ನು ಶಿಸ್ತು, ಕರ್ತವ್ಯ ಪ್ರಜ್ಞೆ ವಹಿಸಿ ನಿರ್ವಹಿಸಿದಾಗ ಯಶಸ್ಸು ನಮ್ಮದಾಗುತ್ತದೆ. ನಾವು ಸ್ವಾಭಿಮಾನದಿಂದ ಜೀವನ ರೂಪಿಸಿಕೊಂಡು ಸಮಾಜದ ಗಣ್ಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಮರಾಟಿ ಸಂಘದ ಪ್ರತಿಯೊಬ್ಬ ಸದಸ್ಯರು ಸಂಘವನ್ನು ಬಲಿಷ್ಠಗೊಳಿಸುವ ಜೊತೆಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದು ಸಮಾಜದಲ್ಲಿ ಗೌರವಯುತ ನಾಗರಿಕರಾಗಿ ಛಲದಿಂದ ಬದುಕು ಮುಂದುವರಿಸಬೇಕು ಎಂದು ಕಿವಿಮಾತು ಕೇಳಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಶ್ರೀಮತಿ ರಶ್ಮಿನಾರಾಯಣ, ಬೆಳ್ತಂಗಡಿ ಮರಾಟಿ ಸಂಘದ ಗೌರವ ಸಲಹೆಗಾರರಾದ ನ್ಯಾಯವಾದಿ ಮತ್ತು ನೋಟರಿ ಸಂತೋಷ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಮುಖ್ಯ ಅತಿಥಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ರಶ್ಮಿನಾರಾಯಣ, ಪರಿಶ್ರಮ ಪಡೆದು ಓದಿದ ಪರಿಣಾಮ ಉತ್ತಮ ಅಂಕ ಲಭಿಸಿದೆ. ವಿದ್ಯಾರ್ಥಿಗಳು ಮುಂದಿನ ಜೀವನದ ಕುರಿತು ಗಂಭೀರ ಆಲೋಚನೆ ನಡೆಸಿ ಅಧ್ಯಯನ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದರು.
ಮರಾಟಿ ಗೋಲ್ಡನ್ ಸ್ಟಾರ್ ಪದಕ:
ಬೆಳ್ತಂಗಡಿ ಮರಾಟಿ ಸಂಘದ ಗೌರವ ಸಲಹೆಗಾರ ಸಂತೋಷ್ ಕುಮಾರ್ ಲಾಯಿಲಾ ಮಾತನಾಡಿ, ಸಮುದಾಯದಲ್ಲಿ ತಾಲೂಕಿನಲ್ಲಿ ಅತಿಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಗುರುತಿಸಿ ವಯಕ್ತಿಕವಾಗಿ ‘ಮರಾಟಿ ಗೋಲ್ಡನ್ ಸ್ಟಾರ್ ಪದಕ’ ಕೊಟ್ಟು ಗೌರವಿಸಲಾಗುವುದು ಎಂದು ತಿಳಿಸಿದರು‌.
ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಉಮೇಶ್ ನಾಯ್ಕ ಕೇಲಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಎಸ್.ಎಸ್.ಎಲ್. ಸಿ ಮತ್ತು ಪಿ.ಯು.ಸಿ.ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಹರ್ಷಿತ ಪದ್ಮುಂಜ, ಅನನ್ಯ ನಡ, ಕೀರ್ತಿ ಮುಂಡಾಜೆ, ತೇಜಸ್ವಿನಿ ಮುಂಡಾಜೆ, ಯಶಸ್ವಿನಿ ಮುಂಡಾಜೆ, ಅಪೇಕ್ಷ ಬಡಕೋಡಿ, ವಿಜೇತ್ ಬಡಕೋಡಿ, ರಚನಾ ಕಳಿಯ, ಸಿಂಚನಾ ವೇಣೂರು, ಶ್ರೀಲಕ್ಷ್ಮಿ ಮುಂಡಾಜೆ, ಯಕ್ಷಿತ ಬೆಳಾಲು, ಪದ್ಮಲತಾ ಸವಣಾಲು, ನಿತಿನ್ ಸುಲ್ಕೇರಿ, ನಿಶಾಂತ್ ಬೆಳ್ತಂಗಡಿ, ಸ್ವಸ್ತಿಕಾ ಬೆಳ್ತಂಗಡಿ, ಶ್ರಾವ್ಯ ಎಸ್. ನಾಯ್ಕ ಶಿರ್ಲಾಲು ಅವರನ್ನು ಪುರಸ್ಕಾರಿಸಲಾಯಿತು.
ಅನಾರೋಗ್ಯದಿಂದ ಬಳಲುತ್ತಿರುವ ಸಂಘ ಕಾರ್ಯದರ್ಶಿ ರಾಜೇಂದ್ರ ನಾಯ್ಕ ರವರ ಕುಟುಂಬಕ್ಕೆ ಮರಾಟಿ ಆರೋಗ್ಯ ನಿಧಿ ವಿತರಣೆ ಮಾಡಲಾಯಿತು.
ಭೋಜನದ ವ್ಯವಸ್ಥೆ ಮಾಡಿದ ಸೌಮ್ಯಲತಾ ಸಂತೋಷ್ ನಾಯ್ಕ್, ಸ್ಮರಣಿಕೆ ಪ್ರಾಯೋಜಕ ಚೆನ್ನಕೇಶವ ನಾಯ್ಕ ಅರಸು ಮಜಲು ಅವರನ್ನು ಅಭಿನಂದಿಸಲಾಯಿತು.
ಸಂಘದ ಉಪಧ್ಯಕ್ಷ ಸತೀಶ್ ಹೆಚ್.ಎಲ್, ವಸಂತ ನಾಯ್ಕ, ಕೋಶಾಧಿಕಾರಿ ಪ್ರಜ್ವಲ್, ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಮರಾಟಿ ಸಮಾಜ ಬಾಂಧವರು ಭಾಗವಹಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ತಾರಾನಾಥ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರಸಾದ್ ನಾಯ್ಕ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ರವಿ ನಾಯ್ಕ ಬಡಕೋಡಿ ಧನ್ಯವಾದವಿತ್ತರು.

error: Content is protected !!